Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತಿದೆ. ಆ ಮೂಲಕ ಗಂಭೀರ್ ಅಂಡ್ ಗಿಲ್ ಪಡೆಗೆ ದೊಡ್ಡ ಮೊಟ್ಟದಲ್ಲಿ ಮುಖಭಂಗ ಆಗಿದೆ. ಟಾಸ್ ಸೋತ ಟೀಂ ಇಂಡಿಯಾ, ಮೊದಲು ಬ್ಯಾಟಿಂಗ್ಗೆ ಬಂದಿತ್ತು.
ಟಾಸ್ ಸೋತ ಟೀಂ ಇಂಡಿಯಾ, ಮೊದಲು ಬ್ಯಾಟಿಂಗ್ಗೆ ಬಂದಿತ್ತು. ಈ ಹೈ-ವೋಲ್ಟೇಜ್ ಪಂದ್ಯಕ್ಕೆ ಮಳೆರಾಯ ಆರಂಭದಲ್ಲೇ ಕಾಟ ಕೊಟ್ಟ. ಇದರಿಂದ ಟೀಂ ಇಂಡಿಯಾ ಬ್ಯಾಟಿಂಗ್ಗೆ ಭಾರೀ ಹಿನ್ನಡೆ ಆಯ್ತು.
ಅಕ್ಸರ್ ಪಟೇಲ್ 31, ಕೆಎಲ್ ರಾಹುಲ್ 38 ರನ್ಗಳಿಸಿರೋದು ಬಿಟ್ಟರೆ ಬೇರೆ ಯಾರೂ ಕೂಡ ಆಡಲಿಲ್ಲ. ಅನುಭವಿ ಕೊಹ್ಲಿ ಸೊನ್ನೆ ಸುತ್ತಿದ್ರೆ, ಮಾಜಿ ಕ್ಯಾಪ್ಟನ್ ರೋಹಿತ್ 8 ರನ್ಗಳಿಸಿದರು. ಇನ್ನು ಕ್ಯಾಪ್ಟನ್ ಗಿಲ್ 10 ರನ್ಗಳಿಸಿ ಆಟ ಮುಗಿಸಿದರು.
137 ರನ್ಗಳ ಸಾಧಾರಣ ಟಾರ್ಗೆಟ್ ಬೆನ್ನು ಹತ್ತಿದ ಆಸ್ಟ್ರೇಲಿಯಾ ಮೂರು ವಿಕೆಟ್ ಕಳೆದುಕೊಂಡು ನಿಗಧಿತ ಗುರಿಯನ್ನು ಮುಟ್ಟಿತು. ಮೊದಲ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ, ಮುನ್ನಡೆ ಕಾಯ್ದಕೊಂಡಿದೆ. ಇನ್ನುಳಿದ ಎರಡೂ ಪಂದ್ಯಗಳನ್ನು ಗಿಲ್ ಪಡೆ ಗೆದ್ದರೆ ಮಾತ್ರ ಏಕದಿನ ಸರಣಿ ಟೀಂ ಇಂಡಿಯಾ ಪಾಲಾಗಲಿದೆ. ಅಕ್ಟೋಬರ್ 23 ರಂದು ಎರಡನೇ ಪಂದ್ಯ ನಡೆಯಲಿದೆ.