newsics.com
ನವದೆಹಲಿ: ದೆಹಲಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ನರೇಂದ್ರ ಮೋದಿ ಅವರು ಭೇಟಿಯಾಗಿದ್ದಾರೆ.ವ್ಹೀಲ್‌ಚೇರ್‌ನಲ್ಲೇ ತೆರಳಿ ಪ್ರಧಾನಿ ಮೋದಿಯನ್ನ ಹೆಚ್ ಡಿಡಿ ಭೇಟಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ದೇವೇಗೌಡರು ವ್ಹೀಲ್ ಚೇರ್‌ನಲ್ಲಿಯೇ ತೆರಳಿ ಮೋದಿ ಜತೆ ಮಾತುಕತೆ ನಡೆಸಿದ್ದಾರೆ.
ದೇವೇಗೌಡ ಅವರನ್ನು ಭೇಟಿಯಾಗಿರುವ ಫೋಟೊಗಳನ್ನು ಪ್ರಧಾನಿ ಮೋದಿ ಅವರೇ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾದೆ. ಅವರನ್ನು ಭೇಟಿಯಾಗುವುದೇ ಗೌರವದ ಸಂಗತಿಯಾಗಿದೆ. ಅವರು ಪ್ರಮುಖ ವಿಷಯಗಳ ಕುರಿತು ಹೊಂದಿರುವ ಜ್ಞಾನ, ದೃಷ್ಟಿಕೋನವು ಮೆಚ್ಚುವಂಥದ್ದು. ಅವರು ನೀಡಿದ ಸಲಹೆಗಳು ನನಗೆ ಹಲವು ಸಂದರ್ಭಗಳಲ್ಲಿ ಉಪಯುಕ್ತವಾಗಿವೆ” ಎಂಬುದಾಗಿ ಮೋದಿ ಪೋಸ್ಟ್ ಮಾಡಿ ದೇವೇಗೌಡ ಅವರನ್ನು ಭೇಟಿಯಾಗಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.