Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಮಹಿಳೆಯರೇ, ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಈ ಗುಣಗಳನ್ನು ತ್ಯಜಿಸಿ
ಲೈಫ್‌ಸ್ಟೈಲ್

ಮಹಿಳೆಯರೇ, ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಈ ಗುಣಗಳನ್ನು ತ್ಯಜಿಸಿ

Share
2 Min Read
SHARE

Newsics_Kannada

Subscribe and watch video

ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com

ಜೀವನದಲ್ಲಿ ಯಶಸ್ಸು ಸಾಧಿಸಬೇಕು, ನಾಲ್ಕು ಜನ ಹೊಗಳುವಂತೆ ಬಾಳಬೇಕು ಎಂದು ಬಯಸುತ್ತಾರೆ. ಪುರುಷರೇ ಆಗಿರಲಿ ಅಥವಾ ಮಹಿಳೆಯರೇ ಆಗಿರಲಿ ತಾವು ಅಂದುಕೊಂಡ ಗುರಿಯನ್ನು ಸಾಧಿಸಲು, ಜೀವನದಲ್ಲಿ ಯಶಸ್ಸು ಗಳಿಸಲು ಕಠಿಣ ಶ್ರಮ ಪಡಬೇಕು. ಅದರ ಜೊತೆ ಜೊತೆಗೆ ಒಂದಷ್ಟು ಸಕಾರಾತ್ಮಕ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.
ಏಕೆಂದರೆ ಕೆಲವೊಂದು ಅಭ್ಯಾಸಗಳ ಕಾರಣದಿಂದಲೇ ಜೀವನದಲ್ಲಿ ಸೋಲನ್ನು ಅನುಭವಿಸಬೇಕಾಗುತ್ತದೆ. ಅಂತಹ ಅಭ್ಯಾಸಗಳನ್ನು ತಕ್ಷಣ ತ್ಯಜಿಸಬೇಕು. ಅದರಲ್ಲೂ ತಜ್ಞರ ಪ್ರಕಾರ ಈ ಗುಣಗಳನ್ನು ಹೊಂದಿದ್ದರೆ ಅವರು ಎಂದಿಗೂ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲವಂತೆ. ಹಾಗಿದ್ರೆ ಮಹಿಳೆಯರು ಯಾವ ಅಭ್ಯಾಸಗಳನ್ನು, ಗುಣಗಳನ್ನು ತ್ಯಜಿಸಬೇಕು ಎಂಬುದರ ಮಾಹಿತಿಯನ್ನು ತಿಳಿಯಿರಿ.
ಯಶಸ್ಸಿಗೆ ಅಡ್ಡಿಯಾಗುವ ಅಭ್ಯಾಸಗಳಿವು:
ದುಂದುವೆಚ್ಚ: ಮಹಿಳೆಯರು ಹಣ ಉಳಿತಾಯ ಮಾಡುವುದರಲ್ಲಿ ಎಕ್ಸ್‌ಪರ್ಟ್.‌ ಅವರು ಪ್ರತಿಯೊಂದು ವಿಷಯದಲ್ಲೂ ಯೋಚಿಸಿ ಖರ್ಚು ಮಾಡುತ್ತಾರೆ. ಆದರೆ ಕೆಲವು ಮಹಿಳೆಯರು ದುಂದುವೆಚ್ಚ ಮಾಡುತ್ತಿರುತ್ತಾರೆ. ಬಟ್ಟೆಬರೆ, ಮನೆ ವಸ್ತುಗಳ ಖರೀದಿ ಅಂತೆಲ್ಲಾ ಹೇಳಿ ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ. ಇಂತಹ ಮಹಿಳೆಯರು ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ, ಅವರು ಮಾತ್ರವಲ್ಲ, ಅವರ ಇಡೀ ಕುಟುಂಬವೂ ಸಹ ತೊಂದರೆಗೆ ಸಿಲುಕಬೇಕಾಗುತ್ತದೆ. ಹಾಗಾಗಿ ಇಂತಹ ಗುಣ ನಿಮ್ಮಲ್ಲಿದ್ದರೆ ಅದನ್ನು ತಕ್ಷಣವೇ ತ್ಯಜಿಸಿ.
ಕೆಲಸವನ್ನು ಮುಂದೂಡುವುದು: ಕೆಲವು ಮಹಿಳೆಯರು ತಮ್ಮ ಪ್ರತಿಯೊಂದು ಕೆಲಸಗಳನ್ನು ಮುಂದೂಡುತ್ತಲೇ ಇರುತ್ತಾರೆ. ಹೀಗೆ ಕೆಲಸದ ವಿಷಯದಲ್ಲಿ ಸೋಮಾರಿತನವನ್ನು ತೋರಿಸಿ, ಇಂದೇ ಆಗೋ ಕೆಲಸವನ್ನು ನಾಳೆಗೆ ಮುಂದೂಡುವಂತಹ ಮಹಿಳೆಯರು ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲವಂತೆ. ಅದಕ್ಕಾಗಿಯೇ ಸೋಮಾರಿತನವನ್ನು ಪಕ್ಕಕ್ಕಿಟ್ಟು ಕೆಲಸ ಮಾಡಬೇಕು.
ಹೊಸ ವಿಷಯಗಳನ್ನು ಕಲಿಯುವತ್ತ ಒಲವನ್ನು ತೋರದಿರುವುದು: ಜೀವನ ಎನ್ನುವಂತಹದ್ದು ಸಾಗರದಷ್ಟೇ ವಿಶಾಲವಾದದ್ದು, ಇಲ್ಲಿ ಕಲಿಯಲು, ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಹಲವಾರು ವಿಷಯಗಳಿವೆ. ಆದರೆ ಅನೇಕ ಮಂದಿ ಹೊಸ ಹೊಸ ವಿಷಯಗಳನ್ನು ಕಲಿಯುವ ಬಗ್ಗೆ ಒಲವನ್ನು ತೋರುವುದಿಲ್ಲ. ಇಂತಹವರು ತಾವು ಅಂದುಕೊಂಡಿದ್ದನ್ನು ಎಂದಿಗೂ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಸಕಾರಾತ್ಮಕ ವಿಷಯಗಳ ಬಗ್ಗೆ ನಿರಂತರವಾಗಿ ಕಲಿಯುತ್ತಲೇ ಇರಬೇಕು.
ಅಪ್ರಾಮಾಣಿಕತೆ: ಜೀವನದಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ. ಆದರೆ ಕೆಲವರು ವೈಯಕ್ತಿಕ ಜೀವನದಲ್ಲಾಗಿರಲಿ ಅಥವಾ ಕೆಲಸದ ವಿಷಯದಲ್ಲಾಗಿರಲಿ ಅಪ್ರಾಮಾಣಿಕತೆಯನ್ನು ತೋರುತ್ತಾರೆ. ಇಂತಹವರು ಖಂಡಿತವಾಗಿಯೂ ಯಶಸ್ಸು ಸಾಧಿಸುವುದಿಲ್ಲ. ಸುಳ್ಳು, ವಂಚನೆಯಿಂದ ಸ್ವಲ್ಪ ಲಾಭ ಗಳಿಸಬಹುದು ಆದರೆ ಇದರಿಂದ ಎಂದಿಗೂ ಗೌರವ ಗಳಿಸಲು ಸಾಧ್ಯವಿಲ್ಲ. ಹಾಗಾಗಿ ಜೀವನದಲ್ಲಿ ಪ್ರಾಮಾಣಿಕರಾಗಿರುವುದು ಬಹಳ ಮುಖ್ಯ.
ತಾಳ್ಮೆ ಇಲ್ಲದಿರುವುದು: ಜೀವನದಲ್ಲಿಯೇ ಆಗಿರಲಿ ಅಥವಾ ಸಂಬಂಧವನ್ನು ನಿಭಾಯಿಸುವುದರಲ್ಲಿಯೇ ಆಗಿರಲಿ ಪ್ರತಿಯೊಂದು ಕೆಲಸದಲ್ಲೂ ತಾಳ್ಮೆ ಎನ್ನುವಂತಹದ್ದು ಬಹಳ ಮುಖ್ಯ. ತಾಳ್ಮೆಯಿಂದ ಕೆಲಸ ಮಾಡಿದರೆ ಯಶಸ್ಸನ್ನು ಗಳಿಸಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬ ಮಹಿಳೆಯೂ ಜೀವನದಲ್ಲಿ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು.
ಹೀಗೆ ಕಠಿಣ ಪರಿಶ್ರಮ, ಮಿತವ್ಯಯ, ಪ್ರಾಮಾಣಿಕತೆ, ತಾಳ್ಮೆ ಮತ್ತು ಕಲಿಯುವ ಬಯಕೆ ಇಂತಹ ಗುಣಗಳಿರುವ ಮಹಿಳೆಯರೇ ಆಗಿರಲಿ ಅಥವಾ ಪುರುಷರೇ ಅಗಿರಲಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ. ಅದೇ ಸೋಮಾರಿತನ, ದುಂದುವೆಚ್ಚ, ಅತಿಯಾದ ಕೋಪ ಇವೆಲ್ಲವೂ ವಿಫಲತೆಗೆ ಕಾರಣ.

ನಾಳೆ ಚಿಕ್ಕಬಳ್ಳಾಪುರಕ್ಕೆ ನಟ ಪವನ್ ಕಲ್ಯಾಣ್ ಭೇಟಿ

TAGGED:give up these qualities if you want to succeed in life.women
Share This Article
Facebook Twitter Copy Link Print
Previous Article ನಾಳೆ ಚಿಕ್ಕಬಳ್ಳಾಪುರಕ್ಕೆ ನಟ ಪವನ್ ಕಲ್ಯಾಣ್ ಭೇಟಿ
Next Article ಆನ್‌ಲೈನ್‌ ಶಾಪಿಂಗ್‌ಗಿಂತ ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ; ಯಾಕೆ?

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಲೈಫ್‌ಸ್ಟೈಲ್

ಮನೆಯ ಈ ದಿಕ್ಕಿನಲ್ಲಿ ಎಂದಿಗೂ ತಪ್ಪಿಯೂ ತುಳಸಿ ಇಡಬೇಡಿ!

1 Min Read
ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read
ಲೈಫ್‌ಸ್ಟೈಲ್

ಮಹಿಳೆಯರೇ. ಗಾಜಿನ ಬಳೆ ಧರಿಸೋದು ಎಷ್ಟು ಪ್ರಯೋಜನಕಾರಿ?

2 Min Read
ಪ್ರಮುಖಆರೋಗ್ಯ

ಮೊಬೈಲ್‌ನಲ್ಲಿ ಸದಾ ಸ್ಕ್ರೋಲಿಂಗ್ ಮಾಡುವುದರಿಂದ ಯುವಜನರಲ್ಲಿ ಟೆಕ್ಸ್ಟ್ ನೆಕ್ ಕಾಯಿಲೆ : ವೈದ್ಯರ ಎಚ್ಚರಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?