newsics.com
ನಮ್ಮ ಆರೋಗ್ಯದ ಒಂದು ಭಾಗವಾದ ನಿದ್ರೆಯನ್ನು ಎಷ್ಟು ಗಂಟೆಯವರೆಗೆ ಮಾಡಬೇಕು. ಎಷ್ಟು ಗಂಟೆಯ ನಿದ್ದೆ ಮಾಡುವುದರಿಂದ ನಮ್ಮ ಆರೋಗ್ಯ ಮತ್ತಷ್ಟು ವೃದ್ಧಿಯಾಗಬಹುದು ಅಂತ ನೋಡ್ತಾ ಹೋಗುವುದಾದ್ರೆ, ಇತ್ತೀಚೆಗೆ ನಡೆಸಲ್ಪಟ್ಟ ಸಿಡಿಸಿ ಅಂದ್ರೆ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರದ ಅಧ್ಯಯನ ಹೇಳುವ ಪ್ರಕಾರ ಆಯಾ ವಯಸ್ಸಿಗೆ ಆಯಾ ಆಯಾ ಸಮಯ ನಿದ್ದೆ ಮಾಡಬೇಕು ಎಂದು ಹೇಳಲಾಗಿದೆ.
ನಿದ್ರೆಯ ವಿಷಯವಾಗಿ ನಡೆದಿರುವ ಈ ಅಧ್ಯಯನದಲ್ಲಿ 18 ರಿಂದ 60 ವಯಸ್ಸಿನವರೆಲ್ಲಾ ಕಡ್ಡಾಯವಾಗಿ 7 ಗಂಟೆಗಳ ಕಾಲ ನಿದ್ರೆಯನ್ನು ಮಾಡಲೇಬೇಕು ಅಂತ ಹೇಳಲಾಗಿದೆ. ಸಿಡಿಸಿ ಮಾಡಿರುವ ಅಧ್ಯಯನದಲ್ಲಿ ಹೇಳಿರುವ ಪ್ರಕಾರ, ಈ ವಯಸ್ಸಿನವರು ಕಡ್ಡಾಯವಾಗಿ ಕನಿಷ್ಠ 7 ಗಂಟೆಯವರೆಗೆ ನಿದ್ದೆಯನ್ನು ಮಾಡಲೇಬೇಕು. ಇದರಿಂದಾಗಿನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದೃಢವಾಗಿರುತ್ತದೆ ಎಂದು ಹೇಳಲಾಗಿದೆ.
ಕೇವಲ 18 ರಿಂದ 60 ವರ್ಷದವರು ಮಾತ್ರವಲ್ಲ, ನವಜಾತ ಶಿಶುಗಳಿಂದ ಹಿಡಿದು 65ಕ್ಕೂ ಮೇಲ್ಪಟ್ಟ ವಯಸ್ಸಿನವರು ಎಷ್ಟು ಗಂಟೆಗಳ ಕಾಲ ನಿದ್ದೆ ಮಾಡಬೇಕು ಎಂಬುದುನ್ನು ಕೂಡ ಈ ಅಧ್ಯಯನ ಬಹಿರಂಗ ಮಾಡಿದೆ. ಅದರ ಮಾಹಿತಿ ಇಲ್ಲಿದೆ…
- ನವಜಾತ ಶಿಶು- 0-3 ತಿಂಗಳು: 14 ರಿಂದ 17 ಗಂಟೆ
- ಪುಟ್ಟ ಮಕ್ಕಳು- 4 ರಿಂದ 12 ತಿಂಗಳು: 12 ರಿಂದ 16 ತಾಸು
- 1 ರಿಂದ 2 ವರ್ಷದ ಮಕ್ಕಳು: 11 ರಿಂದ 14 ಗಂಟೆಗಳ ನಿದ್ರೆ
- 3-5 ವರ್ಷದ ಮಕ್ಕಳು: 10 ರಿಂದ 13 ತಾಸುಗಳು
- ಶಾಲಾ ವಯಸ್ಸಿನ ಮಕ್ಕಳು: 6 ರಿಂದ 12 ವರ್ಷದ ಮಕ್ಕಳು: 9 ರಿಂದ 12 ತಾಸು
- ಹದಿಹರೆಯದ ಯುವಕರು: 8 ರಿಂದ 10 ತಾಸು
- ವಯಸ್ಕರರು: 18 ರಿಂದ 60 ವರ್ಷ: 7 ತಾಸುಗಳ ನಿದ್ರೆ
- ವಯಸ್ಕರರು 61 ರಿಂದ 64 ವರ್ಷದವರು: 7 ರಿಂದ 9 ತಾಸು
- 65 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು: 7 ರಿಂದ 8 ತಾಸು
ನಿಮ್ಮ ಆರೋಗ್ಯ ಸರಿಯಾಗಿ ಇರಬೇಕು ಅಂದ್ರೆ ನೀವು 7 ರಿಂದ 9 ತಾಸು ನಿದ್ದೆ ಮಾಡಲೇಬೇಕು. ನಿದ್ರಾಹೀನತೆ ಕಾಡಿದರೆ ತಪ್ಪದೇ ವೈದ್ಯರನ್ನು ಕಂಡು ಬೇಕಾದ ಸಲಹೆಗಳನ್ನು ಪಡೆಯಬೇಕು.