Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Pakistan unrest ಪಾಕ್ ಪ್ರಧಾನಿ ನೀಡಿದ್ದ ಚೆಕ್ ಬೌನ್ಸ್: ಮಾಜಿ ಕ್ರಿಕೆಟಿಗ ಸಯೀದ್ ಅಜ್ಮಲ್ ಸ್ಫೋಟಕ ಹೇಳಿಕೆ, ವೀಡಿಯೊ ನೋಡಿ
ಪ್ರಮುಖವಿದೇಶವೈರಲ್

Pakistan unrest ಪಾಕ್ ಪ್ರಧಾನಿ ನೀಡಿದ್ದ ಚೆಕ್ ಬೌನ್ಸ್: ಮಾಜಿ ಕ್ರಿಕೆಟಿಗ ಸಯೀದ್ ಅಜ್ಮಲ್ ಸ್ಫೋಟಕ ಹೇಳಿಕೆ, ವೀಡಿಯೊ ನೋಡಿ

Share
2 Min Read
SHARE

Subscribe NewsicsKannada/YouTube

newsics.com

ಇಸ್ಲಾಮಾಬಾದ್: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಫೈನಲ್ ಪಂದ್ಯದ ಬಳಿಕ ಭಾರತಕ್ಕೆ ನೀಡಬೇಕಿದ್ದ ಟ್ರೋಫಿ ಕದ್ದೊಯ್ದಿದ್ದ ಪಿಸಿಬಿ ಅಧ್ಯಕ್ಷ Mohsin Naqvi ವಿವಾದ ನಡುವೆಯೇ ಪಾಕಿಸ್ತಾನದ ಮತ್ತೊಂದು ಕರ್ಮಕಾಂಡ ಬಟಾಬಯಲಾಗಿದೆ.

ಪಾಕಿಸ್ತಾನ ಕೇವಲ ತನ್ನ ವಿದೇಶಿ ಕ್ರಿಕೆಟಿಗರೊಂದಿಗೆ ಮಾತ್ರವಲ್ಲ. ತನ್ನದೇ ದೇಶದ ಕ್ರಿಕೆಟಿಗರೊಂದಿಗೂ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದೆ.

ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಯೀದ್ ಅಜ್ಮಲ್ ತಮ್ಮ ಪ್ರಧಾನಿ ವಿರುದ್ಧವೇ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಯೀದ್ ಅಜ್ಮಲ್, ಪಾಕಿಸ್ತಾನದ ಪ್ರಧಾನಿ ತಮಗೆ ನೀಡಿದ್ದ 25 ಲಕ್ಷ ರೂ ಗಳ ಚೆಕ್ ಬೌನ್ಸ್ ಆಗಿದ್ದ ಕಥೆಯನ್ನು ಹಂಚಿಕೊಂಡಿದ್ದಾರೆ.

ಇಷ್ಟಕ್ಕೂ ಆಗಿದ್ದೇನು?

ಸಯೀಜ್ ಅಜ್ಮಲ್ ಹೇಳಿರುವಂತೆ, 2009ರಲ್ಲಿ ನಡೆದ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಪಾಕಿಸ್ತಾನ ಗೆದ್ದ ನಂತರ, ಅಂದಿನ ಪಾಕಿಸ್ತಾನ ಪ್ರಧಾನಮಂತ್ರಿ ಯೂಸುಫ್ ರಝಾ ಗಿಲಾನಿ ಅವರು ಪ್ರತಿ ಆಟಗಾರನಿಗೆ 25 ಲಕ್ಷ ರೂಪಾಯಿಗಳ ಚೆಕ್ ನೀಡಿದ್ದರು. ಆದರೆ ಅದು ಬೌನ್ಸ್ ಆಗಿತ್ತು. ಅದು ನಗದಾಗಲಿಲ್ಲ ಎಂದು ಹೇಳಿದ್ದಾರೆ.

‘ಪ್ರಧಾನಮಂತ್ರಿಯವರು ನಮಗೆ ದೂರವಾಣಿ ಮಾಡಿ ತಲಾ 25 ಲಕ್ಷ ರೂಪಾಯಿಗಳ ಚೆಕ್‌ಗಳನ್ನು ಕಳುಹಿಸುತ್ತಿರುವುದಾಗಿ ಹೇಳಿದ್ದರು.

ನಾವು ಬಹಳ ಸಂತೋಷಪಟ್ಟಿದ್ದೆವು. ಏಕೆಂದರೆ ಸಿಕ್ಕ ಹಣವು ದೊಡ್ಡ ಮೊತ್ತದ್ದಾಗಿತ್ತು. ಆದರೆ ಆ ಚೆಕ್‌ಗಳು ನಗದಾಗಲಿಲ್ಲ. ಅದು ಬೌನ್ಸ್ ಆಗಿತ್ತು. ಈ ಬಗ್ಗೆ ನಾವು ವಿಚಾರಿಸಿದಾಗ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರು ನಿಮಗೆ ಚೆಕ್ ನೀಡುತ್ತಾರೆ ಎಂದು ಹೇಳಲಾಯಿತು.

ಬಳಿಕ ಮಂಡಳಿಯ ಅಧ್ಯಕ್ಷರು ಈ ಬಗ್ಗೆ ಸ್ಪಷ್ಟವಾಗಿ ನಿರಾಕರಿಸಿದರು. ಅಲ್ಲದೆ ಅಷ್ಟು ಮೊತ್ತದ ಹಣವನ್ನು ಎಲ್ಲಿಂದ ತರಬೇಕು ಎಂದು ಕೇಳಿದರು. ಈ ಪ್ರಹಸನ ನಮಗೆ ಕೊಂಚ ಆಘಾತ ತಂದಿತು ಎಂದು ಸಯೀದ್ ಅಜ್ಮಲ್ ಹೇಳಿದರು.

ಅಂದು ನಮಗೆ ಸಿಕ್ಕ ಹಣ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಬಂದದ್ದು ಮಾತ್ರವಾಗಿತ್ತು. ಮಂಡಳಿಯಾಗಲಿ ಅಥವಾ ಪಾಕ್ ಸರ್ಕಾರವಾಗಲಿ ನಮಗೆ ಹಣ ನೀಡಿರಲಿಲ್ಲ ಎಂದು ಹೇಳಿದರು. ಈ ಬೆಳವಣಿಗೆ ಬೆನ್ನಲ್ಲೇ ನಡೆದ ಶ್ರೀಲಂಕಾ ಪ್ರವಾಸದಲ್ಲಿ ಪಾಕಿಸ್ತಾನ ತಂಡವು ಹೀನಾಯ ಸೋಲು ಕಂಡಿತು ಎಂದು ಸಯೀದ್ ಅಜ್ಮಲ್ ಹೇಳಿದ್ದಾರೆ.

https://twitter.com/i/status/1972581771498918081

Mysuru Dasara ಚಿನ್ನದಂಬಾರಿಯಲ್ಲಿ ಚಾಮುಂಡೇಶ್ವರಿ ವೈಭವ, ಅಭಿಮನ್ಯುವಿನ ಗಾಂಭೀರ್ಯದ ಹೆಜ್ಜೆಗೆ ಮನಸೋತ ಜನ

ಕಾಳಸಂತೆಯಲ್ಲಿ ದಸರಾ ಪಾಸ್ ಮಾರಾಟ; ಎಲ್ಲೆಡೆ ಜನರ ಪರದಾಟ, ನೂಕುನುಗ್ಗಲು, ಯುವತಿ ಅಸ್ವಸ್ಥ, ಓರ್ವ ಪೊಲೀಸ್ ವಶಕ್ಕೆ

Kantara- 3: ಕನ್ಫರ್ಮ್ ಆಯ್ತು ಕಾಂತಾರ’ ಪಾರ್ಟ್-3!

TAGGED:Former cricketer Saeed Ajmal makes explosive statement on cheque bounce given by Pakistan Prime Minister
Share This Article
Facebook Twitter Copy Link Print
Previous Article Mysuru Dasara ಚಿನ್ನದಂಬಾರಿಯಲ್ಲಿ ಚಾಮುಂಡೇಶ್ವರಿ ವೈಭವ, ಅಭಿಮನ್ಯುವಿನ ಗಾಂಭೀರ್ಯದ ಹೆಜ್ಜೆಗೆ ಮನಸೋತ ಜನ
Next Article ಜಂಬೂಸವಾರಿಗೆ ಪೊಲೀಸ್ ಸರ್ಪಗಾವಲು, ದಸರಾ ಬಂದೋಬಸ್ತ್‌ಗೆ 7 ಸಾವಿರ ಪೊಲೀಸರ ನಿಯೋಜನೆ

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಪ್ರಮುಖ

1200 ವರ್ಷಗಳಿಂದ ನಂದಿಯ ಬಾಯಿಂದ ಶಿವಲಿಂಗಕ್ಕೆ ಸದಾ ನೀರಿನ ಅಭಿಷೇಕ! 

3 Min Read

Social Networks

Facebook-f Instagram Twitter
Welcome Back!

Sign in to your account

Lost your password?