Mysuru Dasara ಚಿನ್ನದಂಬಾರಿಯಲ್ಲಿ ಚಾಮುಂಡೇಶ್ವರಿ ವೈಭವ, ಅಭಿಮನ್ಯುವಿನ ಗಾಂಭೀರ್ಯದ ಹೆಜ್ಜೆಗೆ ಮನಸೋತ ಜನ

newsics.com ಮೈಸೂರು: ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು 750 ಕೆಜಿ ತೂಕದ ಚಿನ್ನದಂಬಾರಿಯಲ್ಲಿ ಹೊತ್ತು ಕಿಣಿಕಿಣಿ ಗೆಜ್ಜೆಯ ಸದ್ದಿನೊಂದಿಗೆ ಗಜಗಾಂಭೀರ್ಯದಿಂದ ಅಭಿಮನ್ಯು ಹೆಜ್ಜೆ ಹಾಕಿದಾಗ ಅಲ್ಲಿ ಸೇರಿದ್ದ ಅಪಾರ ಜನಸ್ತೋಮ ಹರ್ಷೋದ್ಗಾರಗೈದಿತು. ಮೈಸೂರು ದಸರಾದ ಪ್ರಮುಖ ಆಕರ್ಷಣೆಯೆನಿಸಿರುವ ವಿಶ್ವವಿಖ್ಯಾತ ಜಂಬೂಸವಾರಿ ಹಲವರ ಮನಸೂರೆಗೊಂಡಿತು. ದೇವಿಗೆ ನಮಿಸಿ ಪುನೀತ ಭಾವ ಹೊಂದಿದರು. ಜೈಕಾರ ಹಾಕಿ ಜನರು ಸಂಭ್ರಮಿಸಿದರು. ಜಗತ್ ಪ್ರಸಿದ್ಧ ಮೈಸೂರು ದಸರಾದ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಸಂಜೆ 4.42ರಿಂದ 5.06 ವರೆಗಿನ … Continue reading Mysuru Dasara ಚಿನ್ನದಂಬಾರಿಯಲ್ಲಿ ಚಾಮುಂಡೇಶ್ವರಿ ವೈಭವ, ಅಭಿಮನ್ಯುವಿನ ಗಾಂಭೀರ್ಯದ ಹೆಜ್ಜೆಗೆ ಮನಸೋತ ಜನ