newsics.com
ರಾಯಚೂರು: ಕದ್ದು ಮುಚ್ಚಿ ಪ್ರೇಯಿಸಿ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದ ಹೆಡ್ಕಾನ್ಸ್ಟೇಬಲ್ನನ್ನು ಪತ್ನಿಯೇ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾಳೆ.
ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ಮನೆಯೊಂದರಲ್ಲಿ ಹೆಡ್ಕಾನ್ಸ್ಟೇಬ್ ರಾಜ್ ಮೊಹಮ್ಮದ್, ಪ್ರೇಯಸಿ ಜೊತೆ ಇದ್ದಾಗಲೇ ಸಿಕ್ಕಿಬಿದ್ದಿದ್ದಾರೆ. ತನ್ನ ಪತಿ ಪ್ರೇಯಸಿ ಜೊತೆ ಇರುವುದನ್ನು ರೆಡ್ಹ್ಯಾಂಡ್ ಆಗಿ ಲಾಕ್ ಮಾಡಿದ ಪತ್ನಿ ಪ್ಯಾರಿ ಬೇಗಂ, ಬಳಿಕ ಎಸ್ಪಿಗೆ ಕರೆ ಮಾಡಿ ದೂರು ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಠಾಣೆ ಪೊಲೀಸರು ಆಗಮಿಸಿ ಮನೆ ಲಾಕ್ ಓಪನ್ ಮಾಡಿ ಬಳಿಕ ಹೆಡ್ಕಾನ್ಸ್ಟೇಬಲ್ ರಾಜ್ ಮೊಹಮ್ಮದ್ ಮತ್ತು ಪ್ರೇಯಸಿಯನ್ನು ಕರೆದಯಕೊಂಡು ಹೋಗಿದ್ದಾರೆ.
ರಾಜ್ ಮೊಹಮ್ಮದ್ , ಪ್ರೇಯಸಿಗಾಗಿ ಕಳೆದ 4 ವರ್ಷಗಳಿಂದ ಪತ್ನಿಯನ್ನು ದೂರ ಮಾಡಿದ್ದ ಎಂದು ಆರೋಪಿಸಲಾಗಿದೆ.