newsics.com
ಮುಂಬೈ: ಕ್ರಿಕೆಟಿಗ. ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್(Natasa Stankovic) ಅವರಿಗೆ ವಿಚ್ಛೇದನ ನೀಡಿ ಒಂದು ವಾರ ವಾರ ಕಳೆಯುವ ಮುನ್ನವೇ ಪಾಂಡ್ಯ ತಮ್ಮ ಮಾಜಿ ಪತ್ನಿಯ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಲೈಕ್ ಮತ್ತು ಕಮೆಂಟ್ ಮಾಡಿದ್ದಾರೆ.
ನತಾಶಾ ಸ್ಟಾಂಕೋವಿಕ್ ತಮ್ಮ ಮಗನೊಂದಿಗೆ ಲಂಡನ್ನಲ್ಲಿರುವ ಡೈನೋಸಾರ್ ಮಾದರಿಯ ವಿಲಕ್ಷಣ ಹಕ್ಕಿಯ ಪಳಯುಳಿಕೆ ಇರುವಂತಹ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಹಲವು ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗೆ ಹಾರ್ದಿಕ್ ಪಾಂಡ್ಯ ಸೂಪರ್ ಮತ್ತು ಲವ್ ಎಮೊಜಿಯ ಮೂಲಕ ಪ್ರತಿಕ್ರಿಯಿಸಿದ್ದಾರೆ.
ನೆಟ್ಟಿಗರು ಸ್ಕ್ರೀನ್ ಶಾರ್ಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಇಷ್ಟು ಆತ್ಮೀಯವಾಗಿರುವ ನೀವು ಯಾಕೆ ವಿಚ್ಛೇದನ ಪಡೆದು ಮಗನಿಂದ ತಂದೆ ತಾಯಿಯ ಪ್ರೀತಿಯನ್ನು ಕಸಿದುಕೊಂಡಿದ್ದೀರಾ? ಎಂದು ಕೆಲವರು ಕಮೆಂಟ್ ಮೂಲಕ ಪ್ರಶ್ನೆ ಮಾಡಿದ್ದಾರೆ.
ಪಾಂಡ್ಯ ಎಮೊಜಿ ಮೂಲಕ ಪ್ರತಿಕ್ರಿಯಿಸಿದ ಪೋಸ್ಟ್ನ ಫೋಟೋ ವೈರಲ್ ಆಗಿದೆ.