newsics.com
ಬೆಂಗಳೂರು: ನಟಿ ಆರಾಧನಾ ಫೋಟೋಶೂಟ್ ಮಾಡಿಸುದ್ದು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಮಾಲಾಶ್ರೀ ಮಗಳೆಂದೇ ಟ್ಯಾಗ್ಲೈನ್ ಹೊಂದಿರುವ ನಟಿ ಆರಾಧನಾ ಹೈ ಸ್ಟ್ರೀಟ್ ಫ್ಯಾಷನ್ ಲುಕ್ಗೆ ಸೇರುವ ಲೆದರ್ ಲೇಯರ್ ಜಾಕೆಟ್ ಸಹಿತ ಹಾಗೂ ರಹಿತವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಮಾನ್ಸೂನ್ ಲುಕ್ನ ಸ್ಟೈಲಿಂಗ್ನ ಬಗ್ಗೆ ಫ್ಯಾಷನ್ ಫೋಟೋ ಗಳು ವೈರಲ್ ಆಗಿವೆ.
ವಿಂಟೇಜ್ ಲೆದರ್ ಜಾಕೆಟ್, ಕ್ರಾಪ್ ಟ್ಯೂಬ್ ಟಾಪ್ ಹಾಗೂ ಮಿನಿ ಸ್ಕರ್ಟ್ ಧರಿಸಿದ್ದಾರೆ. ಇವರ ಈ ಲುಕ್ಗೆ ಬ್ಲ್ಯಾಕ್ ಸನ್ಗ್ಲಾಸ್ ಹಾಗೂ ಬೂಟ್ಸ್ ಸಾಥ್ ನೀಡಿದೆ. ಅವರು ಧರಿಸಿರುವ ಲೇಯರ್ ನೆಕ್ ಚೈನ್ ಧರಿಸಿದ್ದರು.
ಕಳೆದ ವಾರವಷ್ಟೇ ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಜೊತೆಯಲ್ಲಿ ಉದ್ಯಾನನಗರಿಯಲ್ಲಿ ಆಭರಣ ಪ್ರದರ್ಶನದ ಜಾಹೀರಾತಿಗಾಗಿ ಅಮ್ಮನೊಂದಿಗೆ ಅತ್ಯುತ್ಸಾಹದಿಂದ ಆರಾಧನಾ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಆದಾದ ನಂತರ, ಇದೀಗ ಮತ್ತೊಮ್ಮೆ ಸ್ಥಳೀಯ ಫೋಟೋಶೂಟ್ನಲ್ಲಿ ಭಾಗವಹಿಸಿ, ಥೇಟ್ ಬಾಲಿವುಡ್ ನಟಿಯಂತೆ ಕಾಣಿಸಿಕೊಂಡಿದ್ದಾರೆ
