newsics.com
ಬೀದಿಯಲ್ಲಿ ಜಡೆ ಜಗಳ ನಡೆಯುವುದು ಅಚ್ಚರಿ ಸಂಗತಿಯಾದರೂ, ನಮ್ಮ ಯುವತಿಯರು ಈ ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದ್ದರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇಂತಹದೇ ಒಂದು ಘಟನೆ ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಲ್ಲಿ ಇಬ್ಬರು ವಿದ್ಯಾರ್ಥಿನಿಯರ ನಡುವೆ ದೊಡ್ಡ ಫೈಟ್ ನಡೆದಿದೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಡ್ರೆಸ್ ವಿಚಾರವಾಗಿ ಇಬ್ಬರ ನಡುವೆ ಆರಂಭವಾದ ಜಗಳ ಹೊಡೆದಾಟಕ್ಕೆ ತಿರುಗಿದೆ ಎನ್ನಲಾಗಿದೆ.
ಕಾಲೇಜಿನ ಕ್ಯಾಂಟೀನ್ನಲ್ಲಿ ಈ ವಿದ್ಯಾರ್ಥಿನಿಯರ ನಡುವೆ ಮೊದಲು ಮಾತಿನ ಚಕಮಕಿ ನಡೆದಿದೆ. ಮಾತುಗಳು ಜೋರಾಗಿ ನಡೆಯುತ್ತಿರುವ ವೇಳೆ ಇಬ್ಬರ ನಡುವೆಯೂ ತಳ್ಳಾಟ ನಡೆಯುತ್ತದೆ. ನಂತರ ಇಬ್ಬರು ಕೂಡ ಕಾದಾಟಕ್ಕೆ ಮುಂದಾಗಿದ್ದಾರೆ. ಈ ಇಬ್ಬರ ಹೊಡೆದಾಟವನ್ನು ಇತರ ವಿದ್ಯಾರ್ಥಿಗಳು ನೋಡುತ್ತಾ ಕುತಿದ್ದರು. ಈ ಬಗ್ಗೆ ಅನೇಕ ನೆಟ್ಟಿಗರು ವಿರೋಧವನ್ನು ಕೂಡ ವ್ಯಕ್ತಪಡಿಸಿದ್ದಾರೆ.
ಇದೀಗ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಈ ಜಗಳಕ್ಕೆ ಕಾರಣ ಏನು ಎಂದು ತಿಳಿದಿಲ್ಲ.