Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಕಲಬುರಗಿ : ವರುಣಾರ್ಭಟಕ್ಕೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ತ್ತತ್ತರಿಸಿ ಹೋಗಿವೆ. ರೈತರ ಬದುಕಂತು ಮೂರಾಬಟ್ಟೆಯಾಗಿದೆ. ಜನ-ಜಾನುವಾರುಗಳ ಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಕ್ಷಣ ಕ್ಷಣಕ್ಕೂ ನದಿಗಳು ಅಪಾಯದಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ಪ್ರವಾಹದ ಅಬ್ಬರಕ್ಕೆ ನಲುಗುವಂತಾಗಿದೆ.
2 ದಿನಗಳಿಂದ ಮಳೆಯಾಗ್ತಿರೋ ಪರಿಣಾಮ ಭಾರಿ ಸಮಸ್ಯೆ ಆಗಿದೆ. ಮಳೆಗೆ ಹಳ್ಳ- ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ಜಲಾಶಯಗಳು ಭರ್ತಿಯಾಗಿದ್ದು ಅಪಾರ ಪ್ರಮಾಣದ ನೀರು ನದಿಗೆ ಬಿಡಲಾಗ್ತಿದೆ. ಡ್ಯಾಂ ಕೆಳಭಾಗದಲ್ಲಿರುವ ಗ್ರಾಮಗಳ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದ. ಗಾರಂಪಳ್ಳಿ ಗ್ರಾಮಸ್ಥರು ಸಂಚಾರಕ್ಕಾಗಿ ಪರದಾಡ್ತಿದ್ದಾರೆ. ಗ್ರಾಮಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಜನರು ಹೈರಾಣಾಗಿದ್ದಾರೆ.
ಚಂದ್ರಪಳ್ಳಿ ಜಲಾಶಯದಿಂದ ಅಪರಾಪ್ರಮಾಣದಲ್ಲಿ ನೀರು ಹರಿ ಬಿದಲಾಗುತ್ತಿದೆ. ಇದರಿಂದಾಗಿ ಗ್ರಾಮಗಳಿಗೂ ನೀರು ನುಗ್ಗಿದ್ದು, ಜಮೀನುಗಳು ಮುಳುಗಡೆಯಾಗಿವೆ. ಗ್ರಾಮಸ್ಥರು ಮನ್ರೆಗಳನ್ನು ತೊರೆದು ಸುರಕ್ಷಿತ ಪ್ರದೇಶದತ್ತ ತೆರಳುತ್ತಿದ್ದಾರೆ. ಈ ನಡುವೆ ನೋಡ ನೋಡುತ್ತಿದ್ದಂತೆ ನದಿ-ಹಳ್ಳಗಳು ತುಂಬಿ ಹರಿದಿದ್ದು, ಪ್ರವಾಹದ ಅಬ್ಬರಕ್ಕೆ ಸಿಲುಕಿದ ಮೂರು ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.