newsics.com
ಮಂಗಳೂರು: ಧರ್ಮಸ್ಥಳ ಪ್ರಕರಣ ದಿನಕ್ಕೊಂದು ಮಜಲು ಪಡೆದುಕೊಳ್ಳುತ್ತಿದೆ. ಈಗ ಧರ್ಮಸ್ಥಳದಿಂದ ಬಂಗ್ಲೆಗುಡ್ಡೆಯ ಕಡೆ ಎಸ್ಐಟಿ ಅಧಿಕಾರಿಗಳು ಹೋಗಿದ್ದು ಅಲ್ಲಿ ಕೂಡ ಏಳು ಬುರುಡೆಗಳು ಹಾಗೂ ಅಸ್ಥಿಪಂಜರಗಳು ಪತ್ತೆ ಆಗಿವೆ. ಇದೀಗ ಯುಡಿಆರ್ ಪ್ರಕರಣ ದಾಖಲಿಸಲು ಎಸ್ಐಟಿ ತಯಾರಿ ನಡೆಸಿದೆ.
ಸದ್ಯ ಪತ್ತೆ ಆಗಿರುವ ಅಸ್ಥಿಪಂಜರಗಳು ಯಾರದ್ದು, ಇಲ್ಲಿಗೆ ಬಂದು ಯಾಕೆ ಜೀವ ಕಳೆದುಕೊಂಡರು ಎಂಬುದನ್ನು ಎಸ್ಐಟಿ ಅಧಿಕಾರಿಗಳು ಕಂಡುಕೊಳ್ಳಲು ತನಿಖೆ ನಡೆಸಲಿದ್ದಾರೆ.
- ಈಗಾಗಲೆ ಒಂದು ಅಸ್ಥಿಪಂಜರದ ಕುರುಹು ಸಿಕ್ಕಿದ್ದು ಅದು, ಕೊಡಗು ಮೂಲದ ಯು.ಬಿ ಅಯ್ಯಪ್ಪರದ್ದು ಎಂದು ಬಹುತೇಕ ಖಚಿತವಾಗಿದೆ. ಇನ್ನೂಳಿದ ಆರು ಅಸ್ಥಿಪಂಜರಗಳ ಗುರುತು ಪತ್ತೆಗಾಗಿ ಎಸ್ಐಟಿ ಜಾಡು ಹಿಡಿದಿದ್ದು, ಪ್ರಯೋಗಾಲಯಕ್ಕೆ ಡಿಎನ್ಎ ಟೆಸ್ಟ್ಗೆ ಕಳುಹಿಸಲು ತಯಾರಿ ಮಾಡಿಕೊಂಡಿದೆ.