newsics.com
ಹಿರಿಯ ಐಎಎಸ್ ಅಧಿಕಾರಿ ಮೇಜರ್ ಮಣಿವಣ್ಣನ್ ಅವರ ಹೆಸರಿನಲ್ಲಿ ಫೇಸ್ ಬುಕ್ ಖಾತೆಯನ್ನು ತೆಗೆದು, ಫರ್ನಿಚರ್ ಮಾರಾಟದ ಹೆಸರಿನಲ್ಲಿ ಅವರ ಆಪ್ತರನ್ನು ವಂಚಿಸಲಾಗಿದೆ.
ಬೆಂಗಳೂರಿನ ಹಿರಿಯ ಐಎಎಸ್ ಅಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್ಗೆ ನಕಲಿ ಫೇಸ್ಬುಕ್ ಅಕೌಂಟ್ ಕಾಟ ಶುರುವಾಗಿದೆ. ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಸೈಬರ್ ವಂಚನೆ ಮಾಡಲಾಗುತ್ತಿದೆ.
ಒಂದಲ್ಲ, ಎರಡಲ್ಲ ,ನಾಲ್ಕಕ್ಕೂ ಹೆಚ್ಚು ನಕಲಿ ಖಾತೆಯನ್ನು ಈ ವಂಚಕರು ತೆರೆದಿದ್ದಾರೆ. ಎಲ್ಲಾ ಖಾತೆಗಳಲ್ಲಿಯೂ ಮಣಿವಣ್ಣನ್ ಅವರ ಹೆಸರು, ಫೂಟೋ ಬಳಸಲಾಗಿದೆ. ಈ ಖಾತೆಗಳಿಂದ ಮಣಿವಣ್ಣನ್ ಹೆಸರಿನಲ್ಲಿ ಅವರ ಆಪ್ತರಿಗೆ , ಸ್ನೇಹಿತರಿಗೆ ಮೆಸೇಜ್ ಮಾಡುತ್ತಾರೆ. ನಮ್ಮ ಸ್ನೇಹಿತರು ಸಿ.ಆರ್.ಪಿ.ಎಫ್ ನಲ್ಲಿ ಕೆಲಸ ಮಾಡಯತ್ತಿದ್ದಾರೆ. ಅವರ ವರ್ಗಾವಣೆ ಆಗುತ್ತಿದೆ.
ಹೀಗಾಗಿ ಅವರ ಮನೆಯ ಫರ್ನಿಚರ್ ಮಾರಾಟ ಮಾಡಬೇಕೆಂದಿದ್ದಾರೆ. ನಾನು ಒಮ್ಮೆ ನೋಡಿದ್ದೇನೆ. ನಿಮಗೆ ಬೇಕಾದರೆ ನೀವು ಖರೀದಿಸಬಹುದು ಎಂದು ತರಾವರಿ ಮಸೇಜ್ಗಳನ್ನು ಕಳುಹಿಸುತ್ತಾರೆ. ನಿಮ್ಮ ನಂಬರ್ ಕಳುಹಿಸಿ ನನ್ನ ಸ್ನೇಹಿತರೇ ನಿಮಗೆ ಕರೆ ಮಾಡುತ್ತಾರೆ ಎಂದು ನಂಬಿಸಿ ಇಲ್ಲಿಯ ವರೆಗೂ ಇಬ್ಬರು ವ್ಯಕ್ತಿಗಳಿಗೆ ಮೋಸ ಮಾಡಿದ್ದಾರೆ. ಈ ಕುರಿತು ಕೇಸ್ ದಾಖಲಿಸಿಕೊಂಡ ಸೈಬರ್ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.