newsics.com
ಶೂಟಿಂಗ್ ವೇಳೆ ನಟ ಜೂನಿಯರ್ ಎನ್ ಟಿ ಆರ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.ಅವರ ಕಾಲಿನ ಮೂಳೆಗೆ ಪೆಟ್ಟಾಗಿರುವುದರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ .
ಹೈದ್ರಾಬಾದ್‍ನಲ್ಲಿ ಜಾಹೀರಾತುವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಈ ಅವಘಡ ನಡೆದಿದೆ. ಚಿತ್ರೀಕರಣದ ವೇಳೆ ನೆಲದ ಮೇಲೆ ಸ್ಲಿಪ್ ಆಗಿ ಬಿದ್ದಿದ್ದು, ಕಾಲಿಗೆ ಬಲವಾಗಿ ಪೆಟ್ಟಾಗಿದ್ದು ಮೂಳೆ ಮುರಿತವಾಗಿದೆ ಎನ್ನಲಾಗಿದೆ.
ಎನ್ಟಿಆರ್ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಸಣ್ಣಪುಟ್ಟ ಗಾಯ ಮಾಡಿಕೊಂಡರು. ವೈದ್ಯಕೀಯ ಸಲಹೆಯ ಮೇರೆಗೆ, ಅವರು ಸಂಪೂರ್ಣ ಗುಣಮುಖರಾಗಲು ಮುಂದಿನ ಎರಡು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.