newsics.com
ವಡೋದರಾದ ಸುರ್ಸಾಗರ್ ಪ್ರದೇಶದಲ್ಲಿ ಪಾನಿಪುರಿ ವಿಚಾರಕ್ಕೆ ಗಲಾಟೆ ನಡೆದು ಮಹಿಳೆಯೊಬ್ಬರು ನಡುರಸ್ತೆಯಲ್ಲೇ ಅಳುತ್ತಾ ಪ್ರತಿಭಟಿಸಿರುವ ಘಟನೆಯೊಂದು ನಡೆದಿದೆ.
ನಗರದ ಸುರ್ಸಾಗರ್ ಪ್ರದೇಶದಲ್ಲಿ ಸಂಜೆ ವೇಳೆ ಪಾನಿಪುರಿ ಅಂಗಡಿಗಳ ಬಳಿ ಜನರು ಎಂದಿನಂತೆ ಸಾಲುಗಟ್ಟಿ ನಿಂತಿದ್ದರು.
ಜನಸಂದಣಿ ಮಧ್ಯೆ 20 ರೂಪಾಯಿಗೆ ಪಾನಿಪುರಿ ಖರೀದಿಸಲು ಮಹಿಳೆಯೊಬ್ಬರು ಪಾನಿಪುರಿ ಸ್ಟಾಲ್ ಬಳಿ ಬಂದಿದ್ದಾರೆ. ಆಗ ಬೀದಿ ಬದಿ ಸ್ಟಾಲ್‌ನವನು ಹಣ ಪಡೆದು ಮಹಿಳೆಗೆ ನಾಲ್ಕು ಪಾನಿಪುರಿಗಳನ್ನು ನೀಡಿದ್ದಾನೆ.

ಅದನ್ನು ನೋಡಿದೊಡನೆ 20 ರೂಪಾಯಿಗೆ ಆರು ಪಾನಿ ಪುರ ಕೊಡಬೇಕು, ನೀವು ನನ್ನಿಂದ ಹಣ ಪಡೆದು ಕೇವಲ ನಾಲ್ಕು ಪಾನಿಪುರಿ ಕೊಟ್ಟಿರುವುದು ನ್ಯಾಯಯುತವಲ್ಲ ಎಂದು ಮಹಿಳೆ ಹೇಳಿದ್ದಾರೆ.
ಆಗ ಪಾನಿಪುರಿ ಅಂಗಡಿ ಮಾಲೀಕ, ಅಗತ್ಯ ವಸ್ತುಗಳ ಬೆಲೆಕ ಹೆಚ್ಚಾಗಿರುವುದರಿಂದಾಗಿ ಇವಿಷ್ಟೇ ಪಾಠನಿಪುರಿ ನೀಡಲಾಗುತ್ತದೆ ಎಂದು ವಿವರಿಸಲು ಪ್ರಯತ್ನಿಸಿದ್ದಾರೆ. ಆಗ ಅವರ ಮಾತನ್ನು ಕೇಳುವ ಬದಲು ಮಹಿಳೆ ದೊಡ್ಡ ಗಲಾಟೆಯನ್ನೇ ಸೃಷ್ಟಿಸಿದ್ದಾರೆ.
ಮಹಿಳೆ ರಸ್ತೆಯ ಮಧ್ಯದಲ್ಲಿಯೇ ಕುಳಿತು ಪ್ರತಿಭಟಿಸಿದ್ದು, ಪೊಲೀಸರನ್ನು ಕರೆಸಿ ಪಾನಿಪುರಿ ಸ್ಟಾಲ್ ಬಂದ್ ಮಾಡಿಸುವಂತೆ ಒತ್ತಾಯಿಸಿದ್ದಾರೆ. ಮಸಾಲೆ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದಾಗಿ ಪ್ರಮಾಣ ಕಡಿಮೆಯಾಗಿದೆ ಎಂದು ಪಾನಿಪುರಿ ಮಾಲೀಕ ಪದೇ ಪದೆ ವಿವರಿಸಲು ಪ್ರಯತ್ನಿಸಿದ್ದಾನೆ. ಆದರೂ ಮಹಿಳೆ ರಸ್ತೆಯಲ್ಲಿಯೇ ಕದಲದೇ ಕುಳಿತಲ್ಲಿಯೇ ಕುಳಿತಿದ್ದರು. ಇದರಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
https://youtube.com/shorts/MdqUjIWhKhE?si=czw32tFr53z38Wus
Train Ticket Booking: ಅಕ್ಟೋಬರ್ 1 ರಿಂದ ರೈಲ್ವೇ ಟಿಕೆಟ್ ಬುಕಿಂಗ್‌ನಲ್ಲಿ ಬದಲಾವಣೆ
GST ಕಡಿತ ಎಫೆಕ್ಟ್: ಎಲ್ಲ ಕಾರುಗಳ ಬೆಲೆಯಲ್ಲಿ ಗಣನೀಯ ಇಳಿಕೆ, ಸೆ.22ರ ಬಳಿಕ ಯಾವ ಕಾರು ಎಷ್ಟು ಅಗ್ಗ?
ಬೆಂಗಳೂರಿನ ಕೋ ಲಿವಿಂಗ್ ಪಿಜಿಯಲ್ಲಿ ಘಟನೆ: ದೈಹಿಕ ಸಂಪರ್ಕ ಒಪ್ಪದ ಯುವತಿಗೆ ಚಾಕು ಇರಿದ ಟೆಕ್ಕಿ