Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > GST ಕಡಿತ ಎಫೆಕ್ಟ್: ಎಲ್ಲ ಕಾರುಗಳ ಬೆಲೆಯಲ್ಲಿ ಗಣನೀಯ ಇಳಿಕೆ, ಸೆ.22ರ ಬಳಿಕ ಯಾವ ಕಾರು ಎಷ್ಟು ಅಗ್ಗ?
ಕರ್ನಾಟಕದೇಶಪ್ರಮುಖ

GST ಕಡಿತ ಎಫೆಕ್ಟ್: ಎಲ್ಲ ಕಾರುಗಳ ಬೆಲೆಯಲ್ಲಿ ಗಣನೀಯ ಇಳಿಕೆ, ಸೆ.22ರ ಬಳಿಕ ಯಾವ ಕಾರು ಎಷ್ಟು ಅಗ್ಗ?

Share
2 Min Read
SHARE

newsics.com

ಜಿಎಸ್ಟಿ ಕಡಿತ ಹಿನ್ನೆಲೆಯಲ್ಲಿ ಭಾರತದಲ್ಲಿ ಆಟೊಮೊಬೈಲ್ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಲಿವೆ.

ಜಿಎಸ್ಟಿ ಕಡಿತದ ಲಾಭವನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಲು ಕಾರ್ ಕಂಪನಿಗಳು ನಿರ್ಧರಿಸಿವೆ.

ಮಾರುತಿ ಸುಜುಕಿಯಿಂದ ಹಿಡಿದು ಲ್ಯಾಂಡ್ ರೋವರ್‌ವರೆಗೆ ವಿವಿಧ ಕಂಪನಿಗಳ ಕಾರುಗಳ ಬೆಲೆ 30 ಲಕ್ಷ ರೂ.ವರೆಗೆ ಕಡಿಮೆ ಆಗಲಿದೆ.
ವಾಹನ ಹಾಗೂ ಬಿಡಿಭಾಗಗಳ ಮೇಲೆ ಸೆಪ್ಟೆಂಬರ್ 22ರಿಂದ ಜಿಎಸ್ಟಿ ಶೇ. 28 ಇದ್ದದ್ದು ಶೇ.18ಕ್ಕೆ ಇಳಿಯಲಿದೆ. ಸರ್ಕಾರದ ಆಶಯದಿಂದ ಜಿಎಸ್ಟಿ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಎಲ್ಲಾ ಆಟೊಮೊಬೈಲ್ ಕಂಪನಿಗಳು ನಿರ್ಧರಿಸಿವೆ.

ಮಾರುತಿ ಸುಜುಕಿಯ ಕಾರುಗಳ ಬೆಲೆ 1.29 ಲಕ್ಷ ರೂ.ವರೆಗೆ ಇಳಿಕೆ ಆಗಲಿದೆ. ಆಡಿ ಕಾರುಗಳ ಬೆಲೆ 10 ಲಕ್ಷ ರೂ.ವರೆಗೆ ಇಳಿಕೆಯಾಗಲಿದೆ. ಮರ್ಸಿಡೆಸ್ ಬೆಂಜ್, ಲ್ಯಾಂಡ್ ರೋವರ್ ಬ್ರ್ಯಾಂಡ್ನ ಕೆಲ ಕಾರುಗಳ ಬೆಲೆ 30 ಲಕ್ಷ ರೂ.ವರೆಗೂ ಇಳಿಕೆ ಆಗಲಿದೆ.

ಕಾರು ಖರೀದಿಸುವವರು ಸೆಪ್ಟೆಂಬರ್ 22ರವರೆಗೂ ಕಾದರೆ ತುಸು ಅಗ್ಗದ ಬೆಲೆಯಲ್ಲಿ ಪಡೆಯಬಹುದು.
ಮಾರುತಿ ಸುಜುಕಿಯ ಸುಮಾರು 4 ಲಕ್ಷ ರೂ. ಬೆಲೆಯ ಎಸ್ ಪ್ರೆಸ್ಸೋ ಕಾರಿನ ಬೆಲೆ ಬರೋಬ್ಬರಿ 1.29 ಲಕ್ಷ ರೂ ಇಳಿಕೆ ಆಗಲಿದೆ. ಆಲ್ಟೋ ಕೆ10 ಕಾರಿನ ಬೆಲೆಯಲ್ಲೂ ಒಂದು ಲಕ್ಷ ರೂ.ಗಿಂತ ಅಧಿಕ ಮೊತ್ತದಷ್ಟು ಇಳಿಕೆ ಆಗಲಿದೆ. ಬಹಳ ಫಾಸ್ಟ್ ಮೂವಿಂಗ್ ಇರುವ ಸ್ವಿಫ್ಟ್ ಕಾರಿನ ಬೆಲೆ 84,600 ರೂ.ನಷ್ಟು ಕಡಿಮೆ ಆಗಲಿದೆ.

ಟಾಟಾ ಮೋಟಾರ್ಸ್‌ ನ ನೆಕ್ಸಾನ್, ಹ್ಯಾರಿಯರ್, ಸಫಾರಿಯಂತಹ 1,200 ಸಿಸಿಗಿಂತಲೂ ದೊಡ್ಡ ಕಾರುಗಳ ಬೆಲೆ ಒಂದು ಲಕ್ಷ ರೂ‌.ಗಿಂತ ಅಧಿಕದಷ್ಟು ಕಡಿಮೆ ಆಗಿದೆ.

ಆಲ್ಟ್ರೋಜ್, ಟಿಯಾಗೋ, ಟೈಗೋರ್, ಪಂಚ್ ಇತ್ಯಾದಿ ಸಣ್ಣ ಕಾರುಗಳ ಬೆಲೆ 85,000 ರೂ.ಗಳವರೆಗೂ ಕಡಿತಗೊಂಡಿದೆ.

ಮಹೀಂದ್ರ ಕಂಪನಿಯ ಥಾರ್, ಸ್ಕಾರ್ಪಿಯೋ, ಬೊಲೆರೊ, ಎಕ್ಸ್‌ಯುವಿ ಕಾರುಗಳ ಬೆಲೆಯೂ ಕಡಿಮೆ ಆಗುತ್ತಿದೆ.
ಕೊರಿಯಾದ ಹ್ಯೂಂಡಾಯ್ ಕಂಪನಿ ತನ್ನ ಕಾರುಗಳ ಬೆಲೆಯನ್ನು 2.4 ಲಕ್ಷ ರೂ.ವರೆಗೂ ಇಳಿಸಿದೆ. ಐ10, ಔರಾ, ಕ್ರೆಟಾ, ಆಲ್ಕಜಾರ್ ಕಾರುಗಳ ಬೆಲೆ 70,000 ರೂ‌.ಗಿಂತಲೂ ಅಧಿಕ ಮೊತ್ತದಷ್ಟು ಇಳಿಕೆ ಆಗಿದೆ.
ಕಿಯಾ, ರೇನೋ, ನಿಸ್ಸಾನ್, ಟೊಯೊಟಾ, ಹೊಂಡಾ, ಎಂಜಿ, ವೋಲ್ಸ್ವ್ಯಾಗನ್, ಸ್ಕೋಡಾ, ಜೀಪ್, ಸಿಟ್ರೋಯನ್, ಮರ್ಸಿಡೆಸ್ ಬೆಂಜ್, ಬಿಎಂಡಬ್ಲ್ಯು, ಆಡಿ, ಜಾಗ್ವರ್ ಲ್ಯಾಂಡ್ ರೋವರ್ ಕಂಪನಿಯ ಕಾರುಗಳ ಬೆಲೆ ಸಾಕಷ್ಟು ಕಡಿಮೆ ಆಗಲಿದೆ.

ಟಾಟಾ ಒಡೆತನದ ಲ್ಯಾಂಡ್ ರೋವರ್ ಕಾರುಗಳ ಬೆಲೆ 30 ಲಕ್ಷ ರೂ.ವರೆಗೂ ಇಳಿಮುಖವಾಗಲಿದೆ. ಆಡಿ, ಬೆಂಜ್ ಕಾರುಗಳ ಬೆಲೆಯೂ 30 ಲಕ್ಷ ರೂ.ಗಳವರೆಗೆ ಕಡಿಮೆ ಆಗಲಿದೆ.

ಸೆಪ್ಟೆಂಬರ್ 22ರಂದು ಹೊಸ ಬೆಲೆಗಳು ಜಾರಿಗೆ ಬರಲಿವೆ. ಇದೇ ನಿರೀಕ್ಷೆಯಲ್ಲಿ ಆಗಸ್ಟ್‌ನಿಂದಲೇ ಭಾರತದಲ್ಲಿ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ ಆಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಾಹನಗಳ ಮಾರಾಟ ತೀರಾ ಕಡಿಮೆಯಿದೆ. ಆದರೆ, ಅಕ್ಟೋಬರ್‌ನಲ್ಲಿ ದಾಖಲೆ ಸಂಖ್ಯೆಯಲ್ಲಿ ವಾಹನಗಳ ಮಾರಾಟವಾಗುವ ನಿರೀಕ್ಷೆಯಿದೆ.

ಊಟದ ನಂತರ ಈ ಪುಟ್ಟ ಬೀಜ ತಿಂದ್ರೆ ಸಾಕು ಬ್ಲಡ್ ಶುಗರ್ ನಾರ್ಮಲ್ ಆಗುತ್ತೆ!

ಬೆಂಗಳೂರಿನ ಕೋ ಲಿವಿಂಗ್ ಪಿಜಿಯಲ್ಲಿ ಘಟನೆ: ದೈಹಿಕ ಸಂಪರ್ಕ ಒಪ್ಪದ ಯುವತಿಗೆ ಚಾಕು ಇರಿದ ಟೆಕ್ಕಿ

Jubin Garg ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಭಾರತದ ಖ್ಯಾತ ಗಾಯಕ ಸಾವು

TAGGED:GST cut effect: Significant reduction in the prices of all cars
Share This Article
Facebook Twitter Copy Link Print
Previous Article ಸ್ಕೂಲ್‌ ಬ್ಯಾಗ್‌ಗಳಲ್ಲಿ ಪತ್ತೆಯಾಯ್ತು ಆಲ್ಕೋಹಾಲ್, ಕಾಂಡೋಮ್‌!
Next Article Panipuri ಕಡಿಮೆ ಪಾನಿಪುರಿ ಕೊಟ್ಟಿದ್ದಕ್ಕೆ ಕಣ್ಣೀರಿಡುತ್ತ ರಸ್ತೆ ಮಧ್ಯೆ ಕುಳಿತ ಮಹಿಳೆ!

Popular Posts

Bigg Boss Kannada 13 ಬಿಗ್‌ ಬಾಸ್‌ 13 ಸಂಭಾವ್ಯ ಸ್ಪರ್ಧಿಗಳ ಪಟ್ಟಿ?ಹೆಸರುಗಳು ವೈರಲ್‌

3 Min Read

ಊಟ, ವಸತಿ ವ್ಯವಸ್ಥೆ ಸರಿಯಿಲ್ಲವೆಂದು ಪಿಜಿ ಮಾಲೀಕರ ವಿರುದ್ಧ ರಾತ್ರೋರಾತ್ರಿ ರಸ್ತೆಗಿಳಿದ ಯುವತಿಯರು

2 Min Read

ಪೆಟ್ರೋಲ್ ಬಂಕ್‌ಗಳಲ್ಲಿ ಕೈಗಾರಿಕೆಗಳ ಬಲ್ಕ್ ಖರೀದಿಗೆ ಹೊಸ ನಿಯಮ ಜಾರಿ

2 Min Read

Ceremony bigins ಜೂನ್ 19ರಿಂದ ಶುಭ ಸಮಾರಂಭ ಆರಂಭ: ಸಿಗಲಿವೆ ಉತ್ತಮ ಮುಹೂರ್ತ

1 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಇನ್ಮುಂದೆ ಈ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ! ಯಾರ‌್ಯಾರಿಗೆ ಹಣ ಸಿಗೋದಿಲ್ಲ?

1 Min Read
ಕರ್ನಾಟಕಪ್ರಮುಖ

ಜಮೀರ್‌ ಅಹ್ಮದ್ ವಿರುದ್ಧ ಸಿಟ್ಟಾದ ಸಿದ್ದರಾಮಯ್ಯ : ಜಮೀರ್‌ ಬೆಂಬಲಿಗರಿಗೆ ಹೇಳಿದ್ದೇನು?:

1 Min Read
ಕರ್ನಾಟಕಪ್ರಮುಖ

Rain Alert ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

1 Min Read
ದೇಶಪ್ರಮುಖ

ದೆಹಲಿಯಲ್ಲಿ ಭೀಕರ ಅಗ್ನಿ ದುರಂತ: ಮೂವರು ಸಜೀವ ದಹನ

0 Min Read

Social Networks

Facebook-f Instagram Twitter
Welcome Back!

Sign in to your account

Lost your password?