newsics.com/ನ್ಯೂಸಿಕ್ಸ್
ಬೆಂಗಳೂರು : ಜಮೀರ್ ಅಹ್ಮದ್ ಖಾನ್ ಅವರ ಆಪ್ತರು ಹಾಗೂ ಬೆಂಬಲಿಗರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ, ಹಿರಿಯ ನಾಯಕರಾದ ಅವರಿಗೆ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ಕೊಡಿಸಲೇಬೇಕು ಎಂದು ಮನವಿ ಮಾಡಿದರು.
ಆದರೆ, ಜಮೀರ್ ಅವರ ಹೆಸರನ್ನು ಕೇಳುತ್ತಿದ್ದಂತೆಯೇ ತೀವ್ರ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಬೆಂಬಲಿಗರ ಸಮ್ಮುಖದಲ್ಲೇ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸಿದ್ದರಾಮಯ್ಯರು ಜಮೀರ್ ಬೆಂಬಲಿಗರಿಗೆ ಹೇಳಿದ್ದೇನು?: ಜಮೀರ್ ಅಹ್ಮದ್ ಅವರಿಗೆ ಮಂತ್ರಿಗಿರಿ ನೀಡುವಂತೆ ಬೆಂಬಲಿಗರು ಸಿದ್ದರಾಮಯ್ಯರಿಗೆ ಮನವಿ ಮಾಡುತ್ತಿರುವಂತೆ ಕೆಂಡಾಮಂಡಲರಾದ ಮಾಜಿ ಸಿಎಂ, “ಪರಮಾಪ್ತ ಅಂತ ನನ್ನ ವಿರುದ್ಧವೇ ಕೆಲಸ ಮಾಡಿಲ್ವಾ..? ಎಂದು ನೇರವಾಗಿಯೇ ಕಡ್ಡಿಮುರಿದಂತೆ ಹೇಳಿಬಿಟ್ಟರು. ಇದರ ನಡುವೆ ಬೆಂಬಲಿಗರು ನೀವು ಮನಸ್ಸು ಮಾಡಿದರೆ ಜಮೀರ್ ಸಚಿವರಾಗುತ್ತಾರೆ ಎಂದು ಮತ್ತೆ ಮನವಿ ಮಾಡಿದಾಗ, ಸಿದ್ದರಾಮಯ್ಯ ಅವರು ಯಾವುದೇ ಭರವಸೆ ನೀಡದೆ ಮೌನವಾಗಿ ಸ್ಥಳದಿಂದ ತೆರಳಿದರು. ಇದರಿಂದ ಜಮೀರ್ ಸಚಿವ ಸ್ಥಾನದ ಕನಸು ನನಸಾಗಲ್ಲ ಎನ್ನುವುದು ಸ್ಪಷ್ಟವಾಗಿದೆ.
ಆದರೆ, ಈ ಇಡೀ ಬೆಳವಣಿಗೆಯ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪೂರ್ಣ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Rain Alert ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್