newsics.com
ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಸಿನಿಮಾಗಳಿಗಿಂತ ಅವರ ವೈಯಕ್ತಿಕ ವಿಚಾರಗಳು ಸದ್ದು ಮಾಡಿದ್ದೇ ಹೆಚ್ಚು. ರಶ್ಮಿಕಾ ಮಂದಣ್ಣ ಜೊತೆಗೆ ವಿಜಯ್ ದೇವರಕೊಂಡ ಹೆಸರು ತಳುಕು ಹಾಕಿಕೊಂಡ ದಿನದಿಂದ ಆಗಾಗ ಇವರ ಡೇಟಿಂಗ್ ಮ್ಯಾಟರ್ ಚರ್ಚೆ ಆಗುತ್ತಲೇ ಇರುತ್ತೆ. ಆದ್ರೀಗ ದಿಢೀರನೇ ಮಾಜಿ ಪ್ರೇಯಸಿಯೊಂದಿನ ಫೋಟೊಗಳು ವೈರಲ್ ಆಗುತ್ತಿದೆ.
ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಬೆಡ್ ರೂಂನಲ್ಲಿ ಹುಡುಗಿಯ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅವರನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಫೋಟೋ ತುಂಬಾ ಹಳೆಯದಾಗಿ ಕಾಣುತ್ತದೆ. ಈ ಫೋಟೋಗಳಲ್ಲಿ ನೀವು ಅವಳನ್ನು ನೋಡಿದರೆ, ಅದರಲ್ಲಿರುವ ಯುವತಿ ಫಾರಿನ್ ಹುಡುಗಿಯಂತೆ ಕಾಣುತ್ತಾಳೆ. ಈ ಫೋಟೋದಲ್ಲಿ ವಿಜಯ್ ಗೆ ಮುತ್ತು ನೀಡಿದ್ದಾಳೆ. ಇನ್ನೊಂದು ಚಿತ್ರದಲ್ಲಿ, ರೌಡಿ ಸ್ಟಾರ್ ಮಲಗಿರುವಾಗ, ಹುಡುಗಿ ಸೆಲ್ಫಿ ಕ್ಲಿಕ್ ಮಾಡಿದ್ದಾಳೆ. ಸದ್ಯ ವಿಜಯ್ ದೇವರಕೊಂಡ ಅವರ ಕೆಲವು ಖಾಸಗಿ ಫೋಟೋಗಳು ವೈರಲ್ ಆಗುತ್ತಿವೆ.
ವಿಜಯ್ ದೇವರಕೊಂಡ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ನಟ ಇಂದು ಸ್ಟಾರ್ ಹೀರೋ ಆಗಿಬಿಟ್ಟಿದ್ದಾರೆ. ಪೆಳ್ಳಿ ಚೋಸ್ಲು ಚಿತ್ರ ವಿಜಯ್ ಗೆ ಹಿಟ್ ಕೊಟ್ಟಿತ್ತು. ಆ ನಂತರ ಗೀತ ಗೋವಿಂದಂ ಮತ್ತು ಅರ್ಜುನ್ ರೆಡ್ಡಿ ಸಿನಿಮಾಗಳು ಒಳ್ಳೆಯ ಬ್ರೇಕ್ ಕೊಟ್ಟವು.