newsics.com
ಸುತ್ತಲೂ ಜನರಿದ್ದರೂ ಯಾವುದಕ್ಕೂ ಕೇರ್ ಮಾಡದ ಜೋಡಿ ಓಡುವ ರೈಲಿನಲ್ಲೇ ಅಪ್ಪಿಕೊಂಡು ಮುದ್ದಾಡಿದ್ದಾರೆ.
ಈ ವಿಡಿಯೋ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿಯಾಗಿ ಕಮೆಂಟ್ ಮಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಯುವಕ ಮತ್ತು ಯುವತಿ ಇಂಟಿಮೇಟ್ ಆಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಸೈಡ್ ಲೋವರ್ ಬರ್ತ್ ಸೀಟ್ನಲ್ಲಿ ಯುವತಿ ಮೇಲೆ ಮಲಗಿರೋ ಯುವಕ, ರೈಲನ್ನು ತಮ್ಮ ಬೆಡ್ ರೂಮ್ ಮಾಡಿಕೊಂಡಿದ್ದಾನೆ. ಬೆಡ್ರೂಮ್ ಸುತ್ತ ನಾಲ್ಕು ಗೋಡೆ ಇರುತ್ತದೆ. ಆದ್ರೆ ಇಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ ಆಗಿದೆ. ಹಾಡಹಗಲೇ ಜೋಡಿ ಮೈಮರೆತಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಪ್ಪರ್ ಬರ್ತ್ ಸೀಟ್ನಲ್ಲಿರುವ ಪ್ರಯಾಣಿಕರು, ಜೋಡಿಯ ಅಸಭ್ಯ ವರ್ತನೆಯನ್ನು ಮೊಬೈಲ್ನಲ್ಲಿ ಸೆರೆ ಹಿಡಿದು, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ.
ದಿವ್ಯಾ ಕುಮಾರಿ (@divyakumaari) ಹೆಸರಿನ ಎಕ್ಸ್ ಖಾತೆಯಲ್ಲಿ ಜೋಡಿಯ ರೊಮ್ಯಾನ್ಸ್ ವಿಡಿಯೋವನ್ನು ಪೋಸ್ಟ್ ಮಾಡಿಕೊಳ್ಳಲಾಗಿದೆ.
ಸೆಪ್ಟೆಂಬರ್ 6ರ ಸಂಜೆ 6.33ಕ್ಕೆ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಈವರೆಗೂ 5 ಲಕ್ಷಕ್ಕೂ ಅಧಿಕ ವ್ಯೂಸ್, ನೂರಾರು ಕಮೆಂಟ್ಗಳು ಬಂದಿವೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಮನೆಯಲ್ಲಿ ಇವರಿಗೆ ಟೈಮ್ ಇಲ್ಲವೇ ಅಥವಾ ಇವರನ್ನು ಸೇರಲು ಬಿಟ್ಟಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಮತ್ತೊಬ್ಬರು ಇದೆಲ್ಲಾ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಎಂದು ಕಮೆಂಟ್ ಮಾಡಿದ್ದಾರೆ.
https://twitter.com/i/status/1964313578304868771