Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Fertility rate drops ದೇಶದಲ್ಲಿ ಫಲವತ್ತತೆ ದರ ಗಣನೀಯ ಇಳಿಕೆ: ಇದೇ ಮೊದಲ ಬಾರಿ 1.9ಕ್ಕೆ ಕುಸಿತ
ಆರೋಗ್ಯದೇಶಪ್ರಮುಖಲೈಫ್‌ಸ್ಟೈಲ್

Fertility rate drops ದೇಶದಲ್ಲಿ ಫಲವತ್ತತೆ ದರ ಗಣನೀಯ ಇಳಿಕೆ: ಇದೇ ಮೊದಲ ಬಾರಿ 1.9ಕ್ಕೆ ಕುಸಿತ

Share
2 Min Read
SHARE

newsics.com

ನವದೆಹಲಿ: ದೇಶದಲ್ಲಿ ಫಲವತ್ತತೆ ದರ ಇದೇ ಮೊದಲ ಬಾರಿಗೆ 1.9ಕ್ಕೆ ಕುಸಿದಿದೆ ಎಂದು ಸರ್ಕಾರ ವರದಿ ಬಿಡುಗಡೆ ಮಾಡಿದೆ.

ಇದೇ ಮೊದಲ ಬಾರಿ ಗ್ರಾಮೀಣ ಪ್ರದೇಶದಲ್ಲಿ ಫಲವತ್ತತೆ ದರ 2.1ಕ್ಕೆ ಬಂದು ನಿಂತಿದೆ.

ಪ್ರತಿ ಕುಟುಂಬ ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂಬ ಕರೆಯ ನಡುವೆಯೇ ಈ ಆತಂಕಕಾರಿ ವರದಿ ಬಿಡುಗಡೆಯಾಗಿದೆ.

ಜನಸಂಖ್ಯೆ ಸಮಸ್ಥಿತಿಯಲ್ಲಿರಲು ಪ್ರತಿ ಮಹಿಳೆ 2 ಮಕ್ಕಳನ್ನು ಹೊಂದುವುದು ಅವಶ್ಯಕ. ಅಂದರೆ ಫಲವತ್ತತೆ ದರ ದೇಶದಲ್ಲಿ ಮೊದಲ ಬಾರಿಗೆ 2ಕ್ಕಿಂತ ಕಡಿಮೆಯಾಗಿ 1.9ಕ್ಕೆ ಕುಸಿದಿರುವುದು ಕಳವಳಕಾರಿ ಎಂದು ವಿಶ್ಲೇಷಿಸಲಾಗಿದೆ.

ಗ್ರಾಮೀಣ ಭಾಗಗಳಲ್ಲಿ ಈ ಪ್ರಮಾಣ 2.1 ಇದೆಯಾದರೂ, ಈ ಮೊದಲು ಇದ್ದುದಕ್ಕಿಂತ ಕಡಿಮೆ. ಗ್ರಾಮಗಳಲ್ಲಿ ಇದೇ ದರ ಮುಂದುವರಿದರೆ ಅಲ್ಲಿ ಇನ್ನು ಜನಸಂಖ್ಯೆ ಹೆಚ್ಚಳದ ಬದಲು, ಇರುವ ಪ್ರಮಾಣವೇ ಮುಂದುವರಿಯಲಿದೆ.

ನಗರಗಳಲ್ಲಿ ಈಗಾಗಲೇ ಫಲವತ್ತತೆ ಭಾರೀ ಕುಸಿತ ಕಂಡಿದ್ದು 1.5ಕ್ಕೆ ತಲುಪಿದೆ. ಒಂದು ವೇಳೆ ಮುಂಬರುವ ದಿನಗಳಲ್ಲಿ ಗ್ರಾಮಗಳಲ್ಲೂ ಈ ಪ್ರಮಾಣ 2.1ಕ್ಕೆ ಕಡಿಮೆ ಆಗುತ್ತಾ ಹೋದಲ್ಲಿ ಆಗ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ.

ಮರಣ ಪ್ರಮಾಣ ಹೆಚ್ಚಳ:

ಜನಸಂಖ್ಯೆ ಪ್ರಮಾಣ ಕುಸಿತದ ನಡುವೆಯೇ ಮರಣ ದರ ಕೂಡಾ ನಿರಂತರ ಏರಿಕೆ ಆಗುತ್ತಿರುವುದು ಕಳವಳವನ್ನು ಇನ್ನಷ್ಟು ಹೆಚ್ಚಿಸಿದೆ.

2022ರಲ್ಲಿ ಪ್ರತಿ 1000 ಜನರಿಗೆ 6.8 ಜನರು ಸಾವನ್ನಪ್ಪುತ್ತಿದ್ದರೆ, 2023ರಲ್ಲಿ ಅದು 6.4ಕ್ಕೆ ಇಳಿದಿದೆ. ಆದರೆ ಅದು ನಿರೀಕ್ಷಿತ 6ಕ್ಕಿಂತ ಅಧಿಕವೇ ಇದೆ.

ಶಿಶು ಮರಣ ದರ ಇಳಿಕೆ:

ಶಿಶುಮರಣ ದರದಲ್ಲಿ ಐತಿಹಾಸಿಕ ಇಳಿಕೆ ಕಂಡಿದೆ. 2013ರಲ್ಲಿ 40 ಇದ್ದ ಈ ಪ್ರಮಾಣ, 2023ರ ವೇಳೆಗೆ ಶೇ.37.5ರಷ್ಟು ಕಡಿಮೆಯಾಗಿ 25ಕ್ಕೆ ಕುಸಿದಿದೆ. ಜತೆಗೆ 1971ರಲ್ಲಿ 129ಕ್ಕೆ ಹೋಲಿಸಿದರೆ ಈಗ ಶೇ.80ರಷ್ಟು ಕಡಿಮೆಯಾಗಿದೆ. ಇದು ದೇಶದ ಆರೋಗ್ಯ ಕ್ಷೇತ್ರದಲ್ಲಿ ಆದ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.

ರಿಜಿಸ್ಟಾರ್‌ ಜನರಲ್‌ ಬಿಡುಗಡೆ ಮಾಡಿರುವ 2023ರ ಮಾದರಿ ನೋಂದಣಿ ವ್ಯವಸ್ಥೆಯ ವರದಿಯಲ್ಲಿ ಈ ಮಾಹಿತಿ ತಿಳಿದುಬಂದಿದೆ.

ಒಂದು ವರ್ಷದಲ್ಲಿ ಜನಿಸುವ 1000 ಶಿಶುಗಳಲ್ಲಿ ಎಷ್ಟು ಹಸುಳೆಗಳು ಸಾವನ್ನಪ್ಪುತ್ತವೆ ಎಂಬುದರ ಲೆಕ್ಕವೇ ಶಿಶು ಮರಣ ದರ

ಭಾರತಕ್ಕೆ ವಯಸ್ಸಾಗುತ್ತಿದೆ!:

ಜನನ ಪ್ರಮಾಣ ಕುಸಿತ ನಡುವೆಯೇ ದೇಶದಲ್ಲಿ 14 ವರ್ಷದವರೆಗಿನ ಮಕ್ಕಳ ಸಂಖ್ಯೆಯಲ್ಲಿಯೂ ಇಳಿಕೆಯಾಗುತ್ತಿರುವುದು ಕಂಡುಬಂದಿದೆ.

ಕೇಂದ್ರದ ಅಂಕಿ ಅಂಶಗಳ ಪ್ರಕಾರ, 1991ರಲ್ಲಿ ಶೇ.36.3ರಷ್ಟಿದ್ದ 0-14 ವಯಸ್ಸಿನ ಮಕ್ಕಳ ಪ್ರಮಾಣ 2023ರ ವೇಳೆಗೆ ಶೇ.24.2ಕ್ಕೆ ಬಂದು ನಿಂತಿದೆ. ನವಜಾತ ಶಿಶುಗಳಿಂದ ಹಿಡಿದು 14 ವರ್ಷದ ಒಳಗಿನವರಲ್ಲಿ ಹೆಣ್ಣುಮಕ್ಕಳಿಗೆ ಹೋಲಿಸಿದರೆ ಗಂಡುಮಕ್ಕಳ ಸಂಖ್ಯೆಯೇ ಅಧಿಕವಿದೆ.

15ರಿಂದ 59 ವರ್ಷದ ಒಳಗಿನವರು, ಅರ್ಥಾತ್‌ ದುಡಿಯುವ ವರ್ಗದವರ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

1991ರಲ್ಲಿ ಶೇ.57.7ರಷ್ಟಿದ್ದ ಈ ವರ್ಗದವರು 2023ರ ವೇಳೆಗೆ ಶೇ.66.1 ಆಗಿದೆ. ಈ ವಯಸ್ಸಿನವರು ಅತಿ ಹೆಚ್ಚಾಗಿರುವುದು ದೆಹಲಿಯಲ್ಲಿ(ಶೇ.70.8). ಬಿಹಾರದಲ್ಲಿ ಅತಿ ಕಡಿಮೆ, ಶೇ.60.1ರಷ್ಟು ದುಡಿಯುವ ವರ್ಗದ ಜನರಿದ್ದಾರೆ.

TAGGED:Fertility rate in the country drops significantly: drops to 1.9 for the first time
Share This Article
Facebook Twitter Copy Link Print
Previous Article Today’s Horoscope ಇಂದಿನ ರಾಶಿ ಭವಿಷ್ಯ, 05-09-2025, ಶುಕ್ರವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಮೇಲೆ ಥಳಿಸಿದ ಸಹಪಾಠಿಗಳು – ವೈರಲ್ ವಿಡಿಯೋ ನೋಡಿ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?