newsics.com
ಬೆಂಗಳೂರು: ಭಾನುವಾರ ಮಧ್ಯ ರಾತ್ರಿಯಿಂದ ವಾಹನ ಸವಾರರಿಗೆ ಟೋಲ್ ಶಾಕ್ ಎದುರಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾಸನ ರಾಷ್ಟ್ರೀಯ ಹೆದ್ದಾರಿ 75 ರ ರಸ್ತೆಯಲ್ಲಿ ಸಂಚಾರ ಮಾಡುವ ವಾಹನ ಸವಾರರಿಗೆ ಸೆಪ್ಟೆಂಬರ್ 1 ರಿಂದ ದರ ಏರಿಕೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಶಾಕ್ ನೀಡಿದೆ.
ಈ ದರ ಏರಿಕೆ ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಜಾರಿಯಾಗಿದೆ. ನೆಲಮಂಗಲ ದೇವಿಹಳ್ಳಿ ಎಕ್ಸ್‌ಪ್ರೆಸ್ ಪ್ರೈವೇಟ್ ಲಿಮಿಟೆಡ್ ಟೋಲ್ಗಳಲ್ಲಿ ಏರಿಕೆಯಾಗಿದೆ.
ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿಯ ಟೋಲ್ಗಳಲ್ಲಿ ವಾಹನ ಸವಾರರಿಗೆ ಹೆಚ್ಚಿನ ಸುಂಕ ಹೊರೆ ಎದುರಾಗಿದೆ. ದೊಡ್ಡಕರೇನಹಳ್ಳಿ ಟೋಲ್ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆಯಾಗಿದೆ. ಏಕ ಮುಖ ಸಂಚಾರಕ್ಕೆ 5 ರೂಪಾಯಿ, ದ್ವಿಮುಖ ಸಂಚಾರಕ್ಕೆ 10 ರೂಪಾಯಿ ದರ ಏರಿಕೆ ಮಾಡಲಾಗಿದೆ.
ಫಾಸ್ಟ್ಯಾಗ್ ಇರುವ ಕಾರು, ಜೀಪು, ವ್ಯಾನ್ ಹಾಗೂ ಹಗುರ ವಾಹನಗಳಿಗೆ ಏಕಮುಖ ಸಂಚಾರಕ್ಕೆ 55 ರೂ ಇದೆ. ಭಾನುವಾರ ಮಧ್ಯರಾತ್ರಿಯಿಂದ ಇದರ ದರ 60 ರೂಗೆ ಏರಿಕೆಯಾಗಿದೆ. ದಿನದ ಸಂಚಾರವು 85 ರೂನಿಂದ 90 ರೂ.ಗೆ ಏರಿಕೆಯಾಗಿದೆ.
ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಏಕಮುಖ ಸಂಚಾರಕ್ಕೆ ಟೋಲ್ ದರ 110 ರೂನಿಂದ 120 ರೂ.ಗೆ ಏರಿಕೆಯಾಗಿದೆ.
ಲೈಟ್ ಕಮರ್ಷಿಯಲ್ ವಾಹನ ಹಾಗೂ ಸರಕು ಸಾಗಣೆ ವಾಹನಗಳಾದರೆ ಏಕಮುಖ ಸಂಚಾರಕ್ಕೆ 100 ರೂ, ದಿನದ ಸಂಚಾರಕ್ಕೆ 155 ರೂ ಟೋಲ್ ಏರಿಸಲಾಗಿದೆ.