Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ದೀಪಿಕಾ-ಶಾರುಖ್‌ಗೆ ಸಂಕಷ್ಟ ತಂದ ಹ್ಯುಂಡೈ ಕಾರು; ಕೋರ್ಟ್ ಸೂಚನೆ ಬೆನ್ನಲ್ಲೇ ದೂರು ದಾಖಲಿಸಿದ ಪೊಲೀಸ್
ಪ್ರಮುಖಮನರಂಜನೆ

ದೀಪಿಕಾ-ಶಾರುಖ್‌ಗೆ ಸಂಕಷ್ಟ ತಂದ ಹ್ಯುಂಡೈ ಕಾರು; ಕೋರ್ಟ್ ಸೂಚನೆ ಬೆನ್ನಲ್ಲೇ ದೂರು ದಾಖಲಿಸಿದ ಪೊಲೀಸ್

Share
2 Min Read
SHARE

newsics.com

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋರ್ಟ್ ಸೂಚನೆ ಬೆನ್ನಲ್ಲೇ ಪೊಲೀಸರು ಇಬ್ಬರ ವಿರುದ್ಧ ಸೆಕ್ಷನ್ 420 ಅಡಿ ದೂರು ದಾಖಲಿಸಿದ್ದಾರೆ. ಶಾರುಖ್ ಖಾನ್ ಜೊತೆಗೆ ಇತರ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರು ತಾಂತ್ರಿಕ ಸಮಸ್ಯೆ ಹಾಗೂ ಎಂಜಿನ್ ಸಮಸ್ಯೆ ಹೊಂದಿರುವ ವಾಹನಗಳನ್ನು ಖರೀದಿಸುವಂತೆ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಭರತ್‌ಪುರ್ ನಿವಾಸಿ ಕೀರ್ತಿ ಸಿಂಗ್ ಕೋರ್ಟ್ ಮೆಟ್ಟಿಲೇರಿದ್ದರು. ಇದರ ಪರಿಣಾಮ ಇಬ್ಬರ ಮೇಲೂ ವಂಚನೆ ಪ್ರಕರಣ ದಾಖಲಾಗಿದೆ.

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಇಬ್ಬರು ಹ್ಯುಂಡೈ ಇಂಡಿಯಾದ ಪ್ರಚಾರ ರಾಯಭಾರಿಗಳಾಗಿದ್ದಾರೆ. ಹ್ಯುಂಡೈ ಕಾರುಗಳನ್ನು ಪ್ರಮೋಟ್ ಮಾಡುತ್ತಾರೆ. ಹ್ಯುಂಡೈ ಕಾರುಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಹ್ಯುಂಡೈ ಕಾರು ಬಿಡುಗಡೆ ಸೇರಿಂತೆ ಹ್ಯುಂಡೈ ಎಲ್ಲಾ ಈವೆಂಟ್‌ಗಳಲ್ಲಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುತ್ತಾರೆ. ಈ ಪೈಕಿ ಹ್ಯುಂಡೈ ಅಲ್ಕಜರ್ ಕಾರು ಈ ಸೆಲೆಬ್ರೆಟಿಗಳನ್ನು ಕಾನೂನು ಸಂಕಷ್ಟದಲ್ಲಿ ಸಿಲುಕಿಸಿದೆ.

ಕೀರ್ತಿ ಸಿಂಗ್ 2022ರಲ್ಲಿ ಹ್ಯುಂಡೈ ಅಲ್ಕಜರ್ ಕಾರು ಖರೀದಿಸಿದ್ದಾರೆ. 24 ಲಕ್ಷ ರೂಪಾಯಿ ನೀಡಿ ಈ ಕಾರು ಖರೀದಿಸಿದ್ದಾರೆ. ಈ ಕಾರು ಹೆಚ್ಚು ಸುರಕ್ಷಿತ, ಉತ್ತಮ ಎಂಜಿನ್ ಪರ್ಫಾಮೆನ್ಸ್, ಸ್ಛಳವಕಾಶ ಸೇರಿದಂತೆ ಹಲವು ಮಾಹಿತಿಗಳ ಕುರಿತು ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಜಾಹೀರಾತಿನಲ್ಲಿ ಹೇಳಿದ್ದರು. ಕಾರು ಖರೀದಿಸಿದ 6 ರಿಂದ 7 ತಿಂಗಳಲ್ಲಿ ಕಾರಿನಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಂಡಿದೆ. ಹೀಗಾಗಿ ಡೀಲರ್ ಬಳಿ ತೆರಳಿದಾಗ ಇದು ಮ್ಯಾನ್ಯುಫಾಕ್ಚರ್ ಡಿಫಾಲ್ಟ್ ಎಂದಿದ್ದಾರೆ. ಹೈಸ್ಪೀಡ್‌ನಲ್ಲಿ ತೆರಳುವಾಗ ಕಾರು ವೈಬ್ರೇಟ್ ಆಗುತ್ತಿದೆ. ಜೊತೆಗೆ ಭಾರಿ ಶಬ್ದ ಬರುತ್ತಿದೆ. ಇಷ್ಟೇ ಅಲ್ಲ ಎಂಜಿನ್ ಮ್ಯಾನೇಜ್ಮೆಂಟ್ ಸಿಸ್ಟಮ್‌ನಲ್ಲೂ ಸಮಸ್ಯೆಗಳಿವೆ ಎಂದು ಕೀರ್ತಿ ಸಿಂಗ್ ಹೇಳಿದ್ದಾರೆ. ಕಂಪನಿಯ ಮ್ಯಾನ್ಯುಫಾಕ್ಚರ್ ಡಿಫಾಲ್ಟ್ ಎಂದು ಡೀಲರ್ ಕೈತೊಳೆದುಕೊಂಡಿದ್ದಾರೆ.

ಕಂಪನಿಯ ಉತ್ಪಾದನೆ ಸಮಸ್ಯೆ ಎಂದು ಡೀಲರ್ ಪರಿಶೀಲಿಸಿ ಹೇಳಿರುವ ಕಾರಣ ಇದೇ ಆಧಾರವಾಗಿಟ್ಟುಕೊಂಡ ಕೀರ್ತಿ ಸಿಂಗ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಥುರಾ ಪೊಲೀಸರಿಗೆ ಈ ಕುರಿತು ದೂರು ದಾಖಲಿಸಿಕೊಳ್ಳಲು ಸೂಚಿಸಿದ್ದಾರೆ. ಇದರಂತೆ ಮಥುರಾ ಪೊಲೀಸರು, ಬ್ರ್ಯಾಂಡ್ ಅಂಬಾಸಿಡರ್ ಆದ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಹ್ಯುಂಡೈ ಇಂಡಿಯಾ ಮ್ಯಾನೇಜರ್ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

Dasara Holiday ಮಕ್ಕಳ ಖುಷಿ ಹೆಚ್ಚಿಸಿದ ದಸರಾ ರಜೆ! ಯಾವಾಗಿನಿಂದ ರಜೆ ಆರಂಭ?

TAGGED:Hyundai car that caused trouble for Deepika-Shah Rukh; Police files complaint following court order
Share This Article
Facebook Twitter Copy Link Print
Previous Article Dasara Holiday ಮಕ್ಕಳ ಖುಷಿ ಹೆಚ್ಚಿಸಿದ ದಸರಾ ರಜೆ! ಯಾವಾಗಿನಿಂದ ರಜೆ ಆರಂಭ?
Next Article Gold Rate Today: ಚಿನ್ನದ ಬೆಲೆ ಮತ್ತೆ ಏರಿಕೆ; ಇಂದಿನ ಬಂಗಾರದ ದರಪಟ್ಟಿ ಇಲ್ಲಿದೆ

Popular Posts

RSS reaction ಆರೆಸ್ಸೆಸ್ ರಹಸ್ಯವಾಗಿಲ್ಲ, ಪ್ರಿಯಾಂಕ್ ಖರ್ಗೆ ಪತ್ರ ರಾಜಕೀಯ ಗಿಮಿಕ್: ಡಾ. ಮೋಹನ್ ಭಾಗ್ವತ್

2 Min Read

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

You Might Also Like

ಕರ್ನಾಟಕಪ್ರಮುಖ

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read
ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?