newsics.com
ಆರೋಗ್ಯವಾಗಿ ಇರಲು ಹೊಟ್ಟೆತುಂಬ ಆಹಾರ, ವ್ಯಾಯಾಮಗಳೆಲ್ಲ ಎಷ್ಟು ಮುಖ್ಯವೋ, ಕಣ್ಣುಂಬ ನಿದ್ದೆ ಮಾಡುವುದೂ ಅಷ್ಟೇ ಮುಖ್ಯ. ನಮ್ಮಲ್ಲಿ ಅನೇಕರು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಕಸರತ್ತು ಮಾಡುತ್ತಾರೆ. ಆದರೆ ಆಹಾರ, ವ್ಯಾಯಾಮ, ವರ್ಕೌಟ್, ಯೋಗ-ಧ್ಯಾನಕ್ಕಷ್ಟೇ ಪ್ರಾಮುಖ್ಯತೆ ಕೊಟ್ಟು ನಿದ್ದೆಯನ್ನ ಕಡೆಗಣಿಸುತ್ತಾರೆ. ಅಂದರೆ ದೇಹಕ್ಕೆ ಎಷ್ಟು ನಿದ್ದೆ ಬೇಕೋ ಅಷ್ಟು ಹೊತ್ತು ನಿದ್ದೆ ಮಾಡುವುದಿಲ್ಲ. ರಾತ್ರಿ ಮೊಬೈಲ್ ನೋಡುತ್ತ ಟಿವಿ ನೋಡುತ್ತ ಕಾಲಹರಣ ಮಾಡುತ್ತಾರೆ. ಕೆಲವರ ಕೆಲಸವೇ ಹಾಗಿರುತ್ತದೆ. ಇನ್ನೂ ಅನೇಕರು ನಿದ್ರಾಹೀನತೆಯಿಂದ ಬಳಲುತ್ತ ಇರುತ್ತಾರೆ..
ಸರಿಯಾಗಿ ನಿದ್ರೆ ಮಾಡದವರು ಮಧುಮೇಹದ ಅಪಾಯವನ್ನು ಹೊಂದಿರುತ್ತಾರೆ. ನಿದ್ರೆಯ ಸಮಯ ಕಡಿಮೆಯಾದರೂ ಮಧುಮೇಹ ಬರುವ ಅಪಾಯವಿದೆ ಎಂದು ಹೇಳಲಾಗುತ್ತದೆ.
WHO ಪ್ರಕಾರ, ಪ್ರತಿಯೊಬ್ಬರಿಗೂ 8 ರಿಂದ 9 ಗಂಟೆಗಳ ನಿದ್ದೆ ಬೇಕು. ಕನಿಷ್ಠ 7 ಗಂಟೆಗಳ ಕಾಲ ಶಾಂತಿಯುತವಾಗಿ ಮಲಗಬೇಕು. ಚಿಕ್ಕ ಮಕ್ಕಳು ಮತ್ತು ವೃದ್ಧರಿಗೆ ಹೆಚ್ಚು ನಿದ್ರೆ ಬೇಕು. ಬೆಳಗ್ಗೆ ಬೇಗ ಏಳುವುದು ಎಂದರೆ ರಾತ್ರಿ ಬೇಗ ಮಲಗುವುದು. ಸಂಜೆ 7 ಗಂಟೆಗೆ ಮೊದಲು ನಿಮ್ಮ ಊಟವನ್ನು ಮುಗಿಸಿ. ಆದ್ದರಿಂದ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಇತ್ತೀಚಿನ ದಿನಗಳಲ್ಲಿ ಸ್ಕ್ರೀನಿಂಗ್ ಸಮಯ ತುಂಬಾ ಉದ್ದವಾಗಿದೆ. ಅದರಲ್ಲೂ ಯುವಕರು ಸೆಲ್‌ಫೋನ್‌ಗೆ ದಾಸರಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ವೀಡಿಯೋ, ವೆಬ್ ಸೀರಿಸ್ ನೋಡಿ ನಿದ್ದೆ ಕೆಡಿಸಿಕೊಳ್ಳುತ್ತಿದ್ದಾರೆ. ಸರಿಯಾದ ನಿದ್ರೆಯ ಕೊರತೆಯು ದೇಹದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆಹಾರ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ರಕ್ತ ಪರಿಚಲನೆಯ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.