Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ತಿಮರೋಡಿ ಗ್ಯಾಂಗ್‌ನಿಂದ ಚಿನ್ನಯ್ಯನ ವೀಕ್‌ನೆಸ್ ದುರ್ಬಳಕೆ: ಅನಾಮಿಕನ ತಪ್ಪೊಪ್ಪಿಗೆಯಿಂದ ಭಾರೀ ಸಂಚು ಬಯಲು
ಕರ್ನಾಟಕಪ್ರಮುಖ

ತಿಮರೋಡಿ ಗ್ಯಾಂಗ್‌ನಿಂದ ಚಿನ್ನಯ್ಯನ ವೀಕ್‌ನೆಸ್ ದುರ್ಬಳಕೆ: ಅನಾಮಿಕನ ತಪ್ಪೊಪ್ಪಿಗೆಯಿಂದ ಭಾರೀ ಸಂಚು ಬಯಲು

Share
2 Min Read
SHARE

newsics.com

ಮಂಗಳೂರು/ ಬೆಂಗಳೂರು: ಅನಾಮಿಕ ಚಿನ್ನಯ್ಯನ ಬಂಧನದಿಂದ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ತೀವ್ರ ಒತ್ತಡಕ್ಕೆ ಒಳಗಾಗಿದ್ದು, ಚಿನ್ನಯ್ಯನ ತಪ್ಪೊಪ್ಪಿಗೆಯಲ್ಲಿ ತಿಮರೋಡಿ ಗ್ಯಾಂಗ್‌ನ ಷಡ್ಯಂತ್ರ ಬಯಲಾಗಿದೆ. ಈ ಮೂಲಕ ಸೌಜನ್ಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿದಾರನಾಗಿ ಬಂದಿದ್ದ ಅನಾಮಿಕ ಉರ್ಫ್ ಚಿನ್ನಯ್ಯ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾನೆ.

ತಮಿಳುನಾಡಿನ ಈರೋಡ್‌ನ ಸ್ಪಿನ್ನಿಂಗ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಚಿನ್ನಯ್ಯ ಸೋದರಿ ಆಹ್ವಾನ ಹಿನ್ನೆಲೆಯಲ್ಲಿ ಕೆಲಸ ಹುಡುಕಿಕೊಂಡು ಉಜಿರೆಗೆ ಬಂದ. ಇಲ್ಲಿ ಬಂದು ಕೆಲಸ ಮಾಡುತ್ತಿರುವಾಗ ಚಿನ್ನಯ್ಯನನ್ನು ಸೌಜನ್ಯ ಸೋದರಮಾವ ವಿಠಲ್ ಗೌಡ ಗುರುತಿಸಿದ. ನಂತರ ಚಿನ್ನಯ್ಯನನ್ನು ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಕರೆದುಕೊಂಡು ಹೋದ.

ಮಹೇಶ್ ಶೆಟ್ಟಿ ತಿಮರೋಡಿ ಬಳಿ ನದಿಯಲ್ಲಿ ತೇಲಿಬಂದ ಅನಾಮಧೇಯ ಹೆಣಗಳನ್ನು ಹೂತಿರುವ ವಿಷಯವನ್ನು ಚಿನ್ನಯ್ಯ ಹೇಳುತ್ತಾನೆ. ಈತನ ಮಾತು ಕೇಳಿದ ಮಹೇಶ್ ಶೆಟ್ಟಿ ತಿಮರೋಡಿ ಸಂಚು ರೂಪಿಸಿದ್ದರ ಪರಿಣಾಮವೇ ಈಗಿನ ಧರ್ಮಸ್ಥಳದ ಪ್ರಕರಣ ಎನ್ನಲಾಗುತ್ತಿದೆ.
ಎರಡು ವರ್ಷಗಳ ಹಿಂದೆ ಚಿನ್ನಯ್ಯ ಮತ್ತೆ ಈರೋಡ್‌ಗೆ ಹೋಗುತ್ತಾನೆ. ಎರಡು ವರ್ಷದಿಂದ ಚಿನ್ನಯ್ಯನೊಂದಿಗೆ ಕುಡ್ಲ Rampage ಯುಟ್ಯೂಬ್ ಚಾನೆಲ್‌ನ ಅಜಯ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟನ್ನವರ್ ಗ್ಯಾಂಗ್ ಸಂಪರ್ಕದಲ್ಲಿರುತ್ತದೆ. ಜೂನ್ 18ರಂದು ಚಿನ್ನಯ್ಯನನ್ನು ವಾಪಸ್ ಕರೆಸಿಕೊಳ್ಳಲಾಗುತ್ತದೆ. ಜಯಂತ್ ಟಿ. ತಂದುಕೊಟ್ಟ ಬುರುಡೆ ತೆಗೆದುಕೊಂಡು ನ್ಯಾಯಾಧೀಶರ ಮುಂದೆ ಚಿನ್ನಯ್ಯ ಹೇಳಿಕೆ ದಾಖಲಿಸುತ್ತಾನೆ.

ನಂತರ ಸರ್ಕಾರ ಎಸ್‌ಐಟಿ ರಚನೆ ಮಾಡುತ್ತದೆ.
ಎಸ್‌ಐಟಿ ರಚನೆಯಾದಾಗಿನಿಂದ ಚಿನ್ನಯ್ಯನ ಸುತ್ತ ನಾಲ್ಕೈದು ವಕೀಲರು ಇರುತ್ತಾರೆ. ಒಂದು ದಿನ ವಕೀಲರು ಇಲ್ಲದ ಸಂದರ್ಭದಲ್ಲಿ ಎಸ್‌ಐಟಿ ಅಧಿಕಾರಿಗಳ ಮುಂದೆ ಸತ್ಯ ಹೇಳಲು ಮುಂದಾಗುತ್ತಾನೆ. ಅಷ್ಟರಲ್ಲಿ ವಕೀಲರು ಅಲ್ಲಿಗೆ ಬರುತ್ತಾರೆ. ಈ ವಿಷಯ ತಿಳಿದು ಮಹೇಶ್ ಶೆಟ್ಟಿ ತಿಮರೋಡಿ ರಾತ್ರಿ ಚಿನ್ನಯ್ಯನ ಮೇಲೆ ಹಲ್ಲೆ ನಡೆಸುತ್ತಾರೆ. ಆಗ ತಾನು ಜಾಲವೊಂದರಲ್ಲಿ ಸಿಲುಕಿರುವುದು ಚಿನ್ನಯ್ಯನಿಗೆ ಗೊತ್ತಾಗುತ್ತದೆ.

ಚಿನ್ನಯ್ಯನಿಗೆ ದಿನಕ್ಕೆ 4 ಹೊತ್ತು ರುಚಿ ರುಚಿಯಾದ ಊಟ ಮಾಡುವ ವೀಕ್‌ನೆಸ್ ಇತ್ತು. ಚಿನ್ನಯ್ಯನ ಈ ವೀಕ್‌ನೆಸ್‌ನ್ನು ತಿಮರೋಡಿ ಗ್ಯಾಂಗ್ ಬಳಸಿಕೊಂಡಿತ್ತು.
ಎಸ್‌ಐಟಿ ಗುಂಡಿಗಳನ್ನು ಅಗೆದರೂ ಯಾವುದೇ ಕಳೇಬರ ಸಿಗದಿದ್ದಾಗ ತಿಮರೋಡಿ ಗ್ಯಾಂಗ್ ಒತ್ತಡಕ್ಕೆ ಸಿಲುಕುತ್ತದೆ. ಚಿನ್ನಯ್ಯನ ಮೇಲೆ ಆಕ್ರೋಶ ಹೊರಹಾಕುತ್ತದೆ. ಪ್ರತಿದಿನ ಎಸ್‌ಐಟಿ ತನಿಖೆ, ರಾತ್ರಿಯಾದ್ರೆ ತಿಮರೋಡಿ ಗ್ಯಾಂಗ್ ಚಿನ್ನಯ್ಯನಿಗೆ ಕಿರುಕುಳ ನೀಡುತ್ತದೆ.

ಇಷ್ಟೆಲ್ಲಾ ಬೆಳವಣಿಗೆ ನಡುವೆ ತಿಮರೋಡಿ ಬಂಧನವಾಗುತ್ತದೆ. ಈ ಸಮಯದಲ್ಲಿ ಚಿನ್ನಯ್ಯನ ಸುತ್ತಲಿದ್ದ ವಕೀಲರ ಸಂಖ್ಯೆಯೂ ಕಡಿಮೆಯಾಗುತ್ತದೆ. ಶುಕ್ರವಾರ ಚಿನ್ನಯ್ಯನ ಜತೆ ವಕೀಲ ಸಚಿನ್ಳಠಠಾಆ ದೇಶಪಾಂಡೆ ಮಾತ್ರ ಬಂದಿದ್ದರು. ಮಧ್ಯಾಹ್ನದ ವೇಳೆಗೆ ಚಿನ್ನಯ್ಯನನ್ನು ಆರೋಪಿಯನ್ನಾಗಿ ವಶಕ್ಕೆ ಪಡೆದುಕೊಳ್ಳುತ್ತಿರುವ ಮಾಹಿತಿಯನ್ನು ವಕೀಲರಿಗೆ ಎಸ್‌ಐಟಿ ಅಧಿಕಾರಿಗಳು ಹೇಳುತ್ತಾರೆ.

ಶನಿವಾರ ಬೆಳಗಿನ ಜಾವ 5 ಗಂಟೆಯ ಹೊತ್ತಿಗೆ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿದ ಎಸ್‌ಐಟಿ, 9 ಗಂಟೆಗೆ ನ್ಯಾಯಾಧೀಶರ ಮುಂದೆ ಚಿನ್ನಯ್ಯನನ್ನು ಹಾಜರುಪಡಿಸಲಾಗುತ್ತದೆ.

ಈ ವೇಳೆ ಚಿನ್ನಯ್ಯ, ಇಷ್ಟು ದಿನ ನನ್ನೊಂದಿಗಿದ್ದ ವಕೀಲರು ಬೇಡ. ಸರ್ಕಾರಿ ವಕೀಲರನ್ನು ನೀಡಿ ಎಂದು ಚಿನ್ನಯ್ಯ ಮನವಿ ಮಾಡಿಕೊಳ್ಳುತ್ತಾನೆ. ಟ್ರಯಲ್ ನ್ಯಾಯಾಧೀಶರ ಮುಂದೆ BNS 183 ಹೇಳಿಕೆ ದಾಖಲಿಸಲು ಆಗಲ್ಲ. ಹೀಗಾಗಿ ಎರಡು ಅಥವಾ ಮೂರು ದಿನದಲ್ಲಿ ಹೇಳಿಕೆ ದಾಖಲಾಗಿಸಲಾಗುತ್ತದೆ ಎಂದು ತಿಳಿದು ಬಂದಿದೆ.

TAGGED:huge conspiracy exposed by anonymous confessionTimarodi gang exploited Chinnaiah's weakness
Share This Article
Facebook Twitter Copy Link Print
Previous Article ಮಹೇಶ್ ಶೆಟ್ಟಿ ತಿಮರೋಡಿಗೆ ಜಾಮೀನು ಮಂಜೂರು
Next Article ಬೆಂಗಳೂರಲ್ಲಿ ಥಂಡಿ ವೆದರ್ ಎಫೆಕ್ಟ್: ಮಕ್ಕಳಲ್ಲಿ ವೈರಾಣು ಜ್ವರ ಹೆಚ್ಚಳ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?