newsics.com
ಬೆಂಗಳೂರು: ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿದ್ದ ಥಂಡಿಯ ವಾತಾವರಣ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಿದೆ.
ಬಿಟ್ಟು ಬಿಟ್ಟು ಮಳೆ, ಶೀತ ಗಾಳಿ ಹಾಗೂ ಚಳಿಯ ವಾತಾವರಣ ಇದ್ದು, ಮಕ್ಕಳಲ್ಲಿ ವೈರಾಣು ಜ್ವರದ ಪ್ರಕರಣಗಳು ಉಲ್ಬಣಗೊಂಡಿವೆ. ನೆಗಡಿ ಕೆಮ್ಮು, ಶೀತದ ಸಮಸ್ಯೆ ಕಂಡುಬರುತ್ತಿದ್ದು ಮಕ್ಕಳನ್ನು ಹೈರಾಣಾಗಿಸುತ್ತಿದೆ. ವಯಸ್ಕರಲ್ಲೂ ಹಲವು ಬಗೆಯ ಕಾಯಿಲೆಗಳು ಕಾಣಿಸಿಕೊಂಡಿವೆ.
ಕಳೆದ ಹದಿನೈದು ದಿನಗಳಲ್ಲಿ ಜ್ಚರದ ಪ್ರಕರಣಗಳು ಶೇ.15ರಿಂದ 20ರಷ್ಟು ಹೆಚ್ಚಾಗಿವೆ. ಮಕ್ಕಳಲ್ಲಿ ಜ್ವರ, ಕೆಮ್ಮು, ಗಂಟಲು ನೋವು, ಕೆಮ್ಮು, ಶೀತ, ನೆಗಡಿ ವಾಂತಿ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿವೆ. ಬದಲಾದ ವಾತಾವರಣ ಹಿನ್ನಲೆಯಲ್ಲಿ ಡೆಂಘೀ, ಟೈಫಾಯ್ಡ್, ವೈರಲ್ ಜ್ವರ ಕೂಡ ಕಾಣಿಸಿಕೊಳ್ಳುತ್ತಿದೆ.
ವೈರಾಣು ಜ್ವರ ಹಾಗೂ ಅಪ್ಪರ್ ರೆಸ್ಪರೇಟರಿ, ನ್ಯುಮೋನಿಯಾ ಪ್ರಕರಣಗಳು ಪುಟಾಣಿ ಮಕ್ಕಳ ಜೀವ ಹಿಂಡುತ್ತಿವೆ. ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ವೈರಾಣು ಜ್ವರ ಶೇ.20ರಷ್ಟು ಏರಿಕೆ ಕಂಡಿದೆ.
ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಪ್ರತಿನಿತ್ಯ 550 ರಿಂದ 600 ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಈ ಪೈಕಿ ಶೇ.30ರಷ್ಟು ಮಕ್ಕಳಲ್ಲಿ ವೈರಾಣು ಜ್ವರ ಕಂಡುಬರುತ್ತಿದೆ. ಜತೆಗೆ ಕೆಸಿ ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ್ ಆಸ್ಪತ್ರೆ ಸೇರಿದ್ದಂತೆ ಬಹುತೇಕ ಆಸ್ಪತ್ರೆಗಳಲ್ಲಿ ದಾಖಲಾಗುವ ಅರ್ಧದಷ್ಟು ಹೊರ ರೋಗಿಗಳಲ್ಲಿ ವೈರಾಣು ಜ್ವರ ಕಂಡುಬರುತ್ತಿದೆ.
ಮನೆಗಳಲ್ಲಿ ಮಕ್ಕಳಿಂದ ಮನೆ ಮಂದಿಗೆಲ್ಲ ಈ ವೈರಾಣು ಸೋಂಕು ಹರಡುತ್ತಿದ್ದು, ಎಚ್ಚರಿಕೆ ವಹಿಸುವಂತೆ ವೈದ್ಯರು ಸೂಚಸಿದ್ದಾರೆ. ಅದರಲ್ಲೂ ಮಕ್ಕಳಲ್ಲಿ ಕಂಡುಬರುತ್ತಿರುವ ಸೋಂಕಿನ ಬಗ್ಗೆ ಹೆಚ್ಚು ನಿಗಾ ವಹಿಸುವಂತೆ ಪೋಷಕರಿಗೆ ಸಲಹೆ ನೀಡಿದ್ದಾರೆ.
ಮಕ್ಕಳಲ್ಲಿ ವೈರಾಣು ಜ್ವರ, ಕೆಮ್ಮು, ನೆಗಡಿ, ಅತಿಸಾರ ವಾಂತಿ, ಬೇಧಿ ಪ್ರಕರಣಗಳು ಹೆಚ್ಚಾಗಲು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಹವಮಾನ ಕಾರಣ ಎಂದು ವೈದ್ಯರು ಹೇಳಿದ್ದಾರೆ. ವೈರಾಣು ಜ್ವರದ ಜತೆ ಡೆಂಘಿ ಕೇಸ್‌ಗಳೂ ವರದಿಯಾಗುತ್ತಿವೆ.
TikTok may make a comeback in India ಐದು ವರ್ಷ ಬಳಿಕ ಮತ್ತೆ ಭಾರತದಲ್ಲಿ ಟಿಕ್ ಟಾಕ್ ಸದ್ದು ಸಾಧ್ಯತೆ