newsics.com
ನವದೆಹಲಿ: ಭಾರತದಲ್ಲಿ ಮತ್ತೆ ಟಿಕ್ ಟಾಕ್ (TikTok) ಸದ್ದಾಗುವ ಸಾಧ್ಯತೆ ದಟ್ಟವಾಗಿದೆ.
ವಿಶ್ವದ ನಂಬರ್ ಒನ್ ಶಾರ್ಟ್ ವಿಡಿಯೋ ಪ್ಲಾಟ್ಫಾರ್ಮ್ ಆದ ಟಿಕ್ಟಾಕ್ನ ವೆಬ್ಸೈಟ್ ಭಾರತದಲ್ಲಿ ಓಪನ್ ಆಗುತ್ತಿರುವ ಸುದ್ದಿ ಕೇಳಿಬರುತ್ತಿದೆ.
2020ರಲ್ಲಿ ಭಾರತದಲ್ಲಿ ನಿಷೇಧಿತವಾಗಿದ್ದ ಟಿಕ್ಟಾಕ್ 5 ವರ್ಷದ ಬಳಿಕ ಕಂಬ್ಯಾಕ್ ಮಾಡುತ್ತಿರುವಂತಿದೆ.
ಟಿಕ್ಟಾಕ್ನ ವೆಬ್ಸೈಟ್ ಈಗ ಭಾರತದಲ್ಲಿ ಓಪನ್ ಆಗುತ್ತಿದೆ. ಟಿಕ್ಟಾಕ್ ಆ್ಯಪ್ ತೆರೆಯಲಾಗುತ್ತಿಲ್ಲ. ಈ ಬಗ್ಗೆ ಸರ್ಕಾರದಿಂದಾಗಲೀ, ಟಿಕ್ ಟಾಕ್ ಸಂಸ್ಥೆಯಿಂದಾಗಲೀ ಅಧಿಕೃತ ಹೇಳಿಕೆ ಬಂದಿಲ್ಲ.
ಟಿಕ್ಟಾಕ್ ಜಾಗತಿಕವಾಗಿ ಶಾರ್ಟ್ ವಿಡಿಯೋಗಳ ಬ್ರಹ್ಮ. ಚೀನಾದ ಬೈಟ್ ಡ್ಯಾನ್ಸ್ (Bytedance) ಕಂಪನಿಯ ಟಿಕ್ಟಾಕ್ ಚೀನಾದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಬಹಳ ಬೇಗ ಜನಪ್ರಿಯವಾಗಿತ್ತು.
ಐದು ವರ್ಷದ ಹಿಂದೆ ಭಾರತದಲ್ಲಿ 20 ಕೋಟಿಗೂ ಅಧಿಕ ಜನರು ಟಿಕ್ಟಾಕ್ನ ಸಕ್ರಿಯ ಬಳಕೆದಾರರಾಗಿದ್ದರು.
2020ರಲ್ಲಿ ಗಾಲ್ವನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ಚೀನೀ ಸೈನಿಕರು ಸಂಘರ್ಷಕ್ಕಿಳಿದ ಘಟನೆ ಬಳಿಕ ಭಾರತವು ಟಿಕ್ ಟಾಕ್ ಸೇರಿದಂತೆ ಹಲವಾರು ಚೀನೀ ಆ್ಯಪ್ಗಳನ್ನು ನಿಷೇಧಿಸಿತು. ಈ ಐದು ವರ್ಷದಲ್ಲಿ ಟಿಕ್ ಟಾಕ್ ಸ್ಥಾನವನ್ನು ಇನ್ಸ್ಟಾ ಮತ್ತು ಶಾರ್ಟ್ಸ್ಗಳು ಆಕ್ರಮಿಸಿವೆ.
ಟಿಕ್ ಟಾಕ್ ಮೇಲಿನ ನಿಷೇಧವನ್ನು ಅಧಿಕೃತವಾಗಿ ಹಿಂಪಡೆಯಲಾಗುತ್ತಿದೆಯಾ ಅಥವಾ ಇದು ತಾಂತ್ರಿಕ ದೋಷದಿಂದ ಹೀಗೆ ಆಗುತ್ತಿದೆಯಾ ಎಂಬುದು ಸ್ಪಷ್ಟವಾಗಿಲ್ಲ.
ಅಮೆರಿಕವು ಭಾರತದ ಮೇಲೆ ಶೇ. 50ರಷ್ಟು ಟ್ಯಾರಿಫ್ ಹಾಕಿದ ಬಳಿಕ ಭಾರತ ಮತ್ತು ಚೀನಾ ನಡುವಿನ ಸಂಬಂಧ ಹೆಚ್ಚು ಸೌಹಾರ್ದಯುತವಾಗಿರುವುದು ಕಂಡು ಬಂದಿದೆ. ವಿದೇಶಾಂಗ ಸಚಿವರು ಚೀನಾಗೆ ಹೋಗಿ ಬಂದಿದ್ದಾರೆ. ಆಗಸ್ಟ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಗೆ ತೆರಳಲಿದ್ದಾರೆ
ಚೀನಾ ಕೂಡ ವಿರಳ ಭೂಖನಿಜಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಸಿದೆ. ಈ ಎಲ್ಲಾ ಬೆಳವಣಿಗೆಯು ಭಾರತ ಮತ್ತು ಚೀನಾ ನಡುವೆ ಮೊದಲಿನಿಂದ ಸಹಜ ಸಂಬಂಧ ಏರ್ಪಡುವ ಸೂಚನೆ ನೀಡಿದೆ. ಭಾರತವು ಚೀನೀ ಆ್ಯಪ್ಗಳ ಮೇಲಿನ ನಿಷೇಧವನ್ನು ಹಿಂಪಡೆದುಕೊಂಡರೆ ಅಚ್ಚರಿಯೇನಿಲ್ಲ.