newsics.com
ಲೂಸಿಯಾನ(ಅಮೆರಿಕ): ಲೂಸಿಯಾನ ರಾಜ್ಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮೂರು ವರ್ಷದ ಬಾಲಕ ತನ್ನ ತಂದೆಯ ಗನ್ ಜತೆ ಆಟವಾಡುವಾಗ ಆಕಸ್ಮಿಕವಾಗಿ ತನ್ನ ಮುಖಕ್ಕೆ ಗುಂಡು ಹಾರಿಸಿಕೊಂಡಿದ್ದಾನೆ. ಇದರಿಂದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಬೆಡ್ ರೂಂನಲ್ಲಿ ಇಟ್ಟಿದ್ದ ತನ್ನ ತಂದೆಯ ಗನ್ ತೆಗೆದುಕೊಂಡ ಬಾಲಕ ಅದರೊಂದಿಗೆ ಆಟವಾಡುತ್ತಿದ್ದ. ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಈ ವೇಳೆ ಆತ ತನ್ನ ಮುಖದ ಮುಂದೆ ಗನ್ ಹಿಡಿದುಕೊಂಡು ಟ್ರಿಗರ್ ಒತ್ತಿದ್ದಾನೆ. ಇದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಶಬ್ದ ಕೇಳಿ ಓಡಿಬಂದ ಆತನ ತಂದೆ ಅವನನ್ನು ಬದುಕಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಆ ಗನ್ ಅನ್ನು ಹಾಸಿಗೆಯ ಮೇಲ್ಭಾಗದಲ್ಲಿದ್ದ ಶೆಲ್ಫ್ನಲ್ಲಿ ಇರಿಸಲಾಗಿತ್ತು. ಹೀಗಾಗಿ, ಆ ಮಗುವಿಗೆ ಅದು ಸುಲಭವಾಗಿ ಸಿಕ್ಕಿತ್ತು.ತಂದೆ ಬಂದೂಕನ್ನು ಸುರಕ್ಷತೆಯ ದೃಷ್ಟಿಯಿಂದ ಇಟ್ಟುಕೊಂಡಿದ್ದರೂ ಅದನ್ನು ಸರಿಯಾಗಿ ಭದ್ರಪಡಿಸದಿರುವುದು ದುರದೃಷ್ಟಕರ ದುರಂತಕ್ಕೆ ಕಾರಣವಾಗಿದೆ.
ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕರ್ತವ್ಯ ನಿರ್ವಹಿಸಲು ಮೈಸೂರಿನ ಯುವತಿ ಆಯ್ಕೆ
ಮುಂದಿನ 5 ದಿನ ರಾಜ್ಯದಲ್ಲಿ ಮಳೆ ಜತೆಗೆ ಶೀತಗಾಳಿ ಬೀಸುವ ಸಾಧ್ಯತೆ; ಹಲವೆಡೆ ರೆಡ್ ಅಲರ್ಟ್