newsics.com
ವಾಷಿಂಗ್ಟನ್: ಕಮಲಾ ಹ್ಯಾರಿಸ್ ಅವರು ಜೋ ಬೈಡನ್ ಅವರಂತೆ ಹಾಸ್ಯಾಸ್ಪದ ವ್ಯಕ್ತಿ’ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣದಿಂದ ಹಿಂದೆ ಸರಿದು, ಕಮಲಾ ಹ್ಯಾರಿಸ್ ಅವರನ್ನು ಜೋ ಬೈಡನ್ ಅವರು ಅನುಮೋದಿಸಿದ ಬೆನ್ನಲ್ಲೇ ಟ್ರಂಪ್ ಅವರು ಹೀಗೆ ಹೇಳಿದ್ದಾರೆ.
ಕಮಲಾ ಹ್ಯಾರಿಸ್ ಅವರು ಬೈಡನ್ರಷ್ಟೇ ಹಾಸ್ಯಾಸ್ಪದ ವ್ಯಕ್ತಿ. ನಮ್ಮ ದೇಶದ ಜನರಿಗೆ ಹ್ಯಾರಿಸ್ ಅವರು ಬೈಡನ್ಗಿಂತಲೂ ಕೆಟ್ಟದಾಗಿ ಪರಿಣಮಿಸಲಿದ್ದಾರೆ. ಮುಪ್ಪಿನಿಂದ ಬಾಗಿದ ಬೈಡನ್ ಅವರನ್ನು ಸಕ್ರಿಯಗೊಳಿಸುವ ಕೆಲಸ ಹ್ಯಾರಿಸ್ರವರದ್ದಾಗಿತ್ತು’ ಎಂದು ಟ್ರಂಪ್ ಲೇವಡಿ ಮಾಡಿದ್ದಾರೆ.
‘ಇಬ್ಬರಿಗೂ ತಮ್ಮದೇ ಆದ ದಾಖಲೆಗಳಿವೆ. ಇಬ್ಬರ ನಡುವೆ ಹೆಚ್ಚಿನ ವ್ಯತ್ಯಾಸವೇನಿಲ್ಲ. ಬೈಡನ್ ಅವರ ಆಡಳಿತ ವೈಫಲ್ಯ ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಕಮಲಾ ಅವರಿಗಿದೆ’ ಎಂದು ಟ್ರಂಪ್ ನುಡಿದಿದ್ದಾರೆ.
ನೋವು ನೀಡದೆ ಒಂದೇ ನಿಮಿಷದಲ್ಲಿ ಜೀವಹರಣ ಮಾಡಬಲ್ಲ ‘ಆತ್ಮಹತ್ಯೆ ಯಂತ್ರ’ ಆವಿಷ್ಕಾರ! ಶೀಘ್ರ ಕಾರ್ಯಾರಂಭ