newsics.com
ಆಕೆಗೆ ವಯಸ್ಸಿನಲ್ಲಿ ಕಿರಿಯನ ಜತೆ ಪ್ರೀತಿ ಶುರುವಾಗಿದೆ. ಹೇಗೋ ಪರಿಚಯವಾಗಿ ನಂಬರ್ ಬದಲಾಯಿಸಿಕೊಂಡಿದ್ದಾರೆ.
ಬಳಿಕ ಚಾಟಿಂಗ್ ಶುರುವಾಗಿದೆ. ಈ ಚಾಟಿಂಗ್ ಕೊನೆಗೆ ಪ್ರೀತಿಯಾಗಿ ಮದುವೆಯ ಅರ್ಥ ಪಡೆದುಕೊಂಡಿದೆ. ಇಬ್ಬರೂ ಮದುವೆಯಾಗಿದ್ದಾರೆ.
ವರ್ಷಗಳು ಉರುಳಿವೆ. ಈ ದಂಪತಿಗೆ ಎರಡು ಮಕ್ಕಳಾಗಿದೆ. ಸಂಸಾರದಲ್ಲಿ ಹೆಚ್ಚಿನ ಸಮಸ್ಯೆಗಳಿಲ್ಲದೆ ಸಾಗಿದೆ. ಇದರ ನಡುವೆ ತಾನು ಮದುವೆಯಾಗಿರುವುದು ತನ್ನ ಸ್ವಂತ ಮಗನನ್ನೇ ಅನ್ನೋ ಸ್ಫೋಟಕ ಸತ್ಯ ಬಯಲಾದ ಘಟನೆ ಅಮೆರಿಕದ ಒಹಿಯೋದಲ್ಲಿ ನಡೆದಿದೆ.
ಈ ದಂಪತಿಗೆ ಇಬ್ಬರು ಮಕ್ಕಳಾದ ಬಳಿಕ ಮಕ್ಕಳ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಬರಬಾರದು ಎನ್ನುವ ಕಾರಣಕ್ಕೆ ದಂಪತಿ ಕೆಲ ಹೂಡಿಕೆ, ಮಕ್ಕಳ ಮುಂದಿನ ದಿನಗಳಲ್ಲಿ ಯಾರ ಜತೆಗಿರಬೇಕು ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸಿದೆ. ಬಳಿಕ ಕಾನೂನು ಮಾನ್ಯತೆಗಾಗಿ ಡಿಎನ್‌ಎ ಪರೀಕ್ಷೆ ಮುಂದಾಗಿದ್ದಾರೆ. ದಂಪತಿ ಹಾಗೂ ಮಕ್ಕಳ ಡಿಎನ್‌ಎ ಪರೀಕ್ಷೆ ವೇಳೆ ತಾನು ಮದುವೆಯಾಗಿರುವ ಗಂಡ, ತನ್ನ ಸ್ವಂತ ಮಗ ಎನ್ನುವ ಅಸಲಿ ವಿಚಾರ ಬಯಲಾಗಿದೆ.
ಈ ಮಹಿಳೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದಾಳೆ. ಆದರೆ ಮದುವೆಯಾದ ಕೆಲ ತಿಂಗಳಲ್ಲಿ ಪತಿಯಿಂದ ದೂರವಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಪತಿ ದೂರವಾದ ಕೆಲವೇ ತಿಂಗಳಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಒಂದೆಡೆ ಪತಿ ಇಲ್ಲ, ಮತ್ತೊಂದೆಡೆ ಆದಾಯವೂ ಇಲ್ಲ. ಹೀಗಾಗಿ ಮಗುವಿನ ಆರೈಕೆ, ಬೆಳವಣಿಗೆ, ಶಿಕ್ಷಣ ಇವೆಲ್ಲಾ ಅಸಾಧ್ಯ ಎಂದು ಮಹಿಳೆ ತನ್ನ ಮಗುವನ್ನು ದತ್ತು ಪಡೆದುಕೊಳ್ಳುವವರಿಗೆ ನೀಡಿದ್ದಾರೆ.
ಮಗು ನೀಡಿದ ಬಳಿಕವೂ ಮಹಿಳೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತೆ ಆಗಿತ್ತು. ಹೀಗಾಗಿ ತಾನು ಯಾರಿಗೆ ಮಗು ಕೊಟ್ಟಿದ್ದೇನೆ, ಮಗು ಎಲ್ಲಿದೆ, ಎನ್ನುವ ಯಾವ ಮಾಹಿತಿಯನ್ನು ಪಡೆದುಕೊಳ್ಳುವ, ಕರೆ ಮಾಡಿ ಮಾತನಾಡುವ ಪ್ರಯತ್ನಕ್ಕೂ ಈ ಮಹಿಳೆ ಮುಂದಾಗಿಲ್ಲ.
ಹಲವು ವರ್ಷಗಳ ಕಾಲ ಆರ್ಥಿಕ ಸಂಕಷ್ಟ ಮುಂದುವರಿದಿದೆ. ಬಳಿಕ ಸುಧಾರಣೆ ಕಂಡಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಈಕೆ ಒಂದೊಂದೇ ವಸ್ತುಗಳನ್ನು ಖರೀದಿಸಿದ್ದಾಳೆ. ಈ ಪೈಕಿ ಸ್ಮಾರ್ಟ್‌ಫೋನ್ ಖರೀದಿಸಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾಳೆ. ಹೀಗೆ ಸೋಶಿಯಲ್ ಮೀಡಿಯಾ, ತನ್ನ ಕೆಲಸದ ನಡುವೆ ಯುವಕನ ಪರಿಚಯವಾಗಿದೆ. ಆತ ಕೂಡ ಈಕೆಯ ಮಾತು, ವಾತ್ಸಲ್ಯಕ್ಕೆ ಮನ ಸೋತಿದ್ದಾನೆ. ಕೊನೆಗೆ ಇಬ್ಬರಲ್ಲೂ ಪ್ರೀತಿ ಚಿಗುರೊಡೆದಿದೆ. ಪ್ರೀತಿ ಗಾಢವಾಗಿದೆ. ವಯಸ್ಸಿನ ಅಂತರವಿದ್ದರೂ ಮದುವೆಯಾಗಿದ್ದಾರೆ. ಆದರೆ ತಾನು ಕುಟುಂಬವೊಂದಕ್ಕೆ ನೀಡಿದ್ದ ತನ್ನದೇ ಮಗ ಈತ ಎನ್ನುವ ಯಾವುದೇ ಸುಳಿವು ಈಕೆಗೆ ಇರಲಿಲ್ಲ. ಅತ್ತ ತನ್ನ ತಾಯಿ ಈಕೆ ಎನ್ನುವ ಅರಿವುದು ಯುವಕನಿಗೂ ಇರಲಿಲ್ಲ.
ಮದುವೆಯಾಗಿದೆ, ಇಬ್ಬರು ಮಕ್ಕಳೂ ಆಗಿದೆ. ಕಾನೂನಾತ್ಮಕ ಕಾರಣದಿಂದ ಡಿಎನ್‌ಎ ಪರೀಕ್ಷೆ ವೇಳೆ ತಾನು ಮದುವೆಯಾಗಿರುವುದು ತನ್ನದೇ ಮಗ ಎನ್ನುವ ಸತ್ಯ ಗೊತ್ತಾಗಿದೆ. ಇದೀಗ ತನ್ನ ಮಗನಿಗೆ ಪತ್ನಿಯಾಗಿದ್ದ, ತಾಯಿ, ತನ್ನ ಮಗನ ಮಗುವಿಗೆ ತಾಯಿಯೂ ಆಗಿದ್ದಾಳೆ. ಘಟನೆ ವಿಚಿತ್ರವೆನಿಸಿದರೂ ಹಲವರನ್ನು ಭಾವುಕರನ್ನಾಗಿಸಿದೆ.
https://www.instagram.com/p/DNCPwpSxCel/?igsh=N3N5bHU4c2RqdzVj
Bangalore is making me shiver ಮೈ ನಡುಗಿಸುತ್ತಿದೆ ಬೆಂಗಳೂರು… ಆಗಾಗ ಮಳೆ, ನಿರಂತರ ಶೀತಗಾಳಿ, ದಿನವಿಡೀ ಮೋಡ…