newsics.com
ನವದೆಹಲಿ: ಅಮೆರಿಕದ ಸುಂಕ ನೀತಿ ಭಾರತೀಯ ವಜ್ರ ಕತ್ತರಿಸುವ ಮತ್ತು ಹೊಳಪು ನೀಡುವ ವಲಯವು ತತ್ತರಿಸಿದೆ.
ಉದ್ಯೋಗ ನಷ್ಟದ ಪ್ರಮಾಣ ಕಳೆದ ಏಪ್ರಿಲ್‌ನಲ್ಲಿ ಶೇ.10ರಿಂದ ಆಗಸ್ಟ್‌ನಲ್ಲಿ ಶೇ.50ಕ್ಕೇರಿದ್ದು, ಗುಜರಾತ್‌ನ ಸೌರಾಷ್ಟ್ರ ಪ್ರದೇಶದಲ್ಲೇ ಸುಮಾರು 1 ಲಕ್ಷ ಉದ್ಯೋಗಗಳ ನಷ್ಟಕ್ಕೆ ಕಾರಣವಾಗಿದೆ.
ಗುಜರಾತ್ ವಜ್ರ ಕಾರ್ಮಿಕರ ಸಂಘದ ಉಪಾಧ್ಯಕ್ಷ ಭಾವೇಶ್ ಟ್ಯಾಂಕ್ ಪ್ರಕಾರ, ಕಳೆದ 10 ದಿನಗಳಲ್ಲಿ ಸುಂಕಗಳು ಮೊದಲು ಶೇ. 25ಕ್ಕೆ ಏರಿ ನಂತರ ದ್ವಿಗುಣಗೊಂಡಿದ್ದರಿಂದ ಉದ್ಯೋಗ ನಷ್ಟ ತೀವ್ರವಾಗಿ ಹೆಚ್ಚಾಗಿದೆ. ಅಮೆರಿಕದ ಗ್ರಾಹಕರು ಆರ್ಡರ್‌ಗಳನ್ನು ಮುಂದೂಡಿದ ಅಥವಾ ರದ್ದುಗೊಳಿಸಿದ ನಂತರ ಭಾವನಗರ, ಅಮ್ರೇಲಿ ಮತ್ತು ಜುನಾಗಢದ ಸಣ್ಣ ಘಟಕಗಳಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಈ ಘಟಕಗಳು, ಯುಎಸ್ ಮತ್ತು ಚೀನಾದ ಖರೀದಿದಾರರಿಂದ ನಿಧಾನಗತಿಯ ಖರೀದಿಯಿಂದಾಗಿ ಈಗಾಗಲೇ ಒತ್ತಡದಲ್ಲಿದ್ದವು ಎಂದು ಅವರು ಹೇಳಿದರು.