newsics.com
ಉತ್ತರಪ್ರದೇಶ ಸರ್ಕಾರದ ಅದೊಂದು ನಿರ್ಧಾರ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಇದು ಬಾಲಿವುಡ್ ನಟರ ಮಧ್ಯೆ ವಾದ-ವಿವಾದಕ್ಕೂ ಕಾರಣವಾಗಿದೆ. ಕನ್ವರ್ ಯಾತ್ರೆಗೆ ಯೋಗಿ ಸರ್ಕಾರ ಹೊರಡಿಸಿರೋ ನಿಯಮವೊಂದು ಬಾಲಿವುಡ್ ನಟ ಸೋನು ಸೂದ್-ಬಿಟೌನ್ ಬೆಡಗಿ, ಸಂಸದೆ ಕಂಗನಾ ರಣಾವತ್ ಮಧ್ಯೆ ಏಟು-ಎದುರೇಟಿಗೆ ವೇದಿಕೆಯಾಗಿದೆ.
ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಗಳು ರೋಟಿ ಮೇಲೆ ಉಗಿಯುವ ದೃಶ್ಯಗಳು ವೈರಲ್ ಆಗಿತ್ತು. ಹೀಗಾಗಿ ಉತ್ತರಪ್ರದೇಶ ಸರ್ಕಾರ ಕನ್ವರ್ ಯಾತ್ರೆಗೆ ಕೆಲವೊಂದು ನೀತಿ-ನಿಯಮಗಳನ್ನ ಜಾರಿಗೆ ತಂದಿತ್ತು. ಯಾತ್ರೆಗೆ ಬರುವ ವರ್ತಕರು ತಮ್ಮ ಹೆಸರನ್ನ ನಾಮಫಲಕಗಳಲ್ಲಿ ಕಡ್ಡಾಯವಾಗಿ ನಮೂದು ಮಾಡ್ಬೇಕು ಅಂತ ತಿಳಿಸಿತ್ತು. ಇದ್ರಿಂದ ವ್ಯಾಪಾರಿಗಳು ಹಿಂದೂ-ಮುಸ್ಲಿಂ ಅನ್ನೋದು ಸ್ಪಷ್ಟವಾಗುತ್ತೆ ಅಂತ ಯೋಗಿ ಸರ್ಕಾರ ಈ ರೂಲ್ಸ್ ಮಾಡಿತ್ತು. ಇದೀಗ ಈ ವಿಚಾರಕ್ಕೆ ಸೋನು ಸೂದ್ ಮತ್ತು ಕಂಗನಾ ಮಧ್ಯೆ ಕದನಕ್ಕೆ ಕಾರಣವಾಗಿದೆ.
ನಮ್ಮ ಶ್ರೀರಾಮ, ಶಬರಿ ಕಚ್ಚಿ ಕೊಟ್ಟ ಹಣ್ಣುಗಳನ್ನ ತಿಂದಿದ್ದಾರೆ. ಹಾಗಾದರೆ ನಾನು ಇದನ್ನ ಏಕೆ ತಿನ್ನಬಾರದು? ಅಹಿಂಸೆಯಿಂದ ಹಿಂಸೆಯನ್ನು ಸೋಲಿಸಬಹುದು. ಮಾನವೀಯತೆ ಮಾತ್ರ ಉಳಿಯಬೇಕು
-ಸೋನು ಸೂದ್, ಬಾಲಿವುಡ್ ನಟ
ಸೋನು ಸೂದ್ ಮಾಡಿದ್ದ ಟ್ವೀಟ್‌ನ ಕಂಡು ಬಾಲಿವುಡ್ ಬೆಡಗಿ, ಮಂಡಿ ಸಂಸದೆ ಕಂಗನಾ ರಣಾವತ್ ಕೆರಳಿ ಕೆಂಡವಾಗಿದ್ರು. ಈ ರೀತಿ ಉಗಿಯುವವರನ್ನ ಸೋನು ಸೂದ್ ಸಮರ್ಥಿಸಕೊಳ್ತಿದ್ದಾರೆ ಅಂತ ಕಿಡಿಕಾರಿದ್ರು. ಅಲ್ಲದೇ ಸೋನು ಸೂದ್ ನಡೆಯ ಬಗ್ಗೆ ಆಕ್ಷೇಪವನ್ನ ವ್ಯಕ್ತಪಡಿಸಿ ಟ್ವೀಟ್ ಮೂಲಕ ಗೇಲಿ ಮಾಡಿದ್ದಾರೆ.
ನಿಮ್ಮ ಮಾತನ್ನ ಒಪ್ಪುತ್ತೇನೆ, ಹಲಾಲ್ ಅನ್ನು “ಮಾನವೀಯತೆ” ಎಂದು ಬದಲಿಸಬೇಕೇ? ದೇವರು ಮತ್ತು ಧರ್ಮದ ಬಗ್ಗೆ ತಮ್ಮದೇ ಆದ ವೈಯಕ್ತಿಕ ಸಂಶೋಧನೆಗಳ ಆಧಾರದ ಮೇಲೆ ಸೋನು ಅವರು ತಮ್ಮದೇ ಆದ ರಾಮಾಯಣವನ್ನ ನಿರ್ದೇಶಿಸುತ್ತಿದ್ದಾರೆ. ಅದುವೇ ಬಾಲಿವುಡ್‌ನಿಂದ ಮತ್ತೊಂದು ರಾಮಾಯಣ.
-ಕಂಗನಾ ರಣಾವತ್, ಸಂಸದೆ
ಈ ಮೂಲಕ ಕನ್ವರ್ ಯಾತ್ರೆ ವಿಚಾರಕ್ಕೆ ಬಾಲಿವುಡ್ ಮಂದಿಯ ಮಧ್ಯೆಯೇ ಧರ್ಮ ದಂಗಲ್ ಶುರುವಾಗಿದೆ