Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Coolie Cinema ರಜನಿ‌ ಮೇನಿಯಾ… ಕೂಲಿ ಸಿನಿಮಾ ಪ್ರತಿ ಟಿಕೆಟ್‌ಗೆ 2 ಸಾವಿರ ರೂಪಾಯಿ!
ಕರ್ನಾಟಕದೇಶಪ್ರಮುಖಮನರಂಜನೆ

Coolie Cinema ರಜನಿ‌ ಮೇನಿಯಾ… ಕೂಲಿ ಸಿನಿಮಾ ಪ್ರತಿ ಟಿಕೆಟ್‌ಗೆ 2 ಸಾವಿರ ರೂಪಾಯಿ!

Share
2 Min Read
SHARE

newsics.com

ಬೆಂಗಳೂರು: ಕರ್ನಾಟಕದಲ್ಲಿ ಎಲ್ಲಾ ಸಿನಿಮಾಗಳಿಗೂ 200 ರೂ. ಟಿಕೆಟ್‌ ದರ ನಿಗದಿಯಾಗಬೇಕು ಎಂಬ ಸರ್ಕಾರದ ಪ್ರಸ್ತಾವನೆಯ ನಡುವೆಯೇ ಸೂಪರ್‌ ಸ್ಟಾರ್‌ ರಜನಿಕಾಂತ್ ನಟನೆಯ ಬಹು ನಿರೀಕ್ಷಿತ ‘ಕೂಲಿ’ ಸಿನಿಮಾದ ಟಿಕೆಟ್‌ ದರ ಗಗನಕ್ಕೇರಿದೆ.

ಆಗಸ್ಟ್‌ 14 ರಂದು ಮುಂಜಾನೆ 6 ರಿಂದಲೇ ಪ್ರದರ್ಶನ ನಿಗದಿಯಾಗಿದ್ದು, ಬೆಂಗಳೂರಿನಲ್ಲಿ ಟಿಕೆಟ್‌ನ ಗರಿಷ್ಠ ದರ 2000ರೂ.ಗೇರಿದೆ.

ಬೆಂಗಳೂರು ಎಂ. ಜಿ. ರೋಡ್‌ನ ಸ್ವಾಗತ್‌ ಶಂಕರ್‌ನಾಗ್ ಥಿಯೇಟರ್‌ನಲ್ಲಿ 2000 ರೂ., 1500 ರೂ. ಬೆಲೆಯ ಎಲ್ಲಾ ಟಿಕೆಟ್‌ ಸೋಲ್ಡೌಟ್‌ ಆಗಿದ್ದರೆ, ಎಂಜಿ ರಸ್ತೆಯ ನ್ಯೂಫ್ಯಾನ್‌ಗ್ಲೆಡ್‌ ಮಿನಿಫ್ಲೆಕ್ಸ್‌ನಲ್ಲಿ ಟಿಕೆಟ್‌ ದರ 2000 ರೂ. ಇದೆ.

ವಿಚಿತ್ರವೆಂದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎ. ನರಸಿಂಹಲು ಒಡೆತನದ ವೈಭವಿ ವೈಷ್ಣವಿ ಥಿಯೇಟರ್‌ನಲ್ಲಿ ‘ಕೂಲಿ’ ಶೋ ಒಂದರ ಟಿಕೆಟ್‌ ದರ 800 ರೂ. ಗಳಷ್ಟಿದೆ. ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಎಲ್ಲ ಚಿತ್ರಗಳಿಗೂ 200 ರೂ. ಟಿಕೆಟ್‌ ರೇಟ್‌ ನಿಗದಿ ಮಾಡುವಂತೆ ನರಸಿಂಹಲು ಅವರು ಇತರ ಪದಾಧಿಕಾರಿಗಳೊಂದಿಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು.

ಉಳಿದಂತೆ 200 ರೂ.ನಿಂದ 2000 ರೂ.ವರೆಗೂ ಟಿಕೆಟ್‌ ದರವಿದ್ದು, ಮುಂಜಾನೆ 6 ರಿಂದ 7ರ ಫಸ್ಟ್‌ ಡೇ ಫಸ್ಟ್‌ ಶೋಗಳ ದರ ಹಲವೆಡೆ 1000 ರೂ.ಗಳಷ್ಟಿದೆ. ಎಲ್ಲ ಟಿಕೆಟ್‌ಗಳೂ ಸೋಲ್ಡ್‌ ಔಟ್ ಆಗಿವೆ.

ಮುಂಗಡ ಟಿಕೆಟ್‌ ಖರೀದಿಯೊಂದರಲ್ಲೇ ಈ ಸಿನಿಮಾ ರಿಲೀಸ್‌ಗೂ ಮುನ್ನ 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿದೆ. ಭಾರತದಲ್ಲಿ ಮೊದಲ ದಿನದ ಶೋಗಳ 5 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ.

ಸ್ಯಾಟಲೈಟ್‌, ಮ್ಯೂಸಿಕ್‌ ರೈಟ್, ಓಟಿಟಿ ಹಕ್ಕು ಸೇರಿ ಸಿನಿಮಾದ ಈವರೆಗಿನ ಒಟ್ಟು ಗಳಿಕೆ 250 ಕೋಟಿ ರೂ. ದಾಟಿದೆ ಎನ್ನಲಾಗಿದೆ.

ಲೋಕೇಶ್ ಕನಕರಾಜು ನಿರ್ದೇಶನದ ಚಿತ್ರವನ್ನು ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ರಜನಿಕಾಂತ್ ಜತೆಗೆ ಅಮೀರ್‌ ಖಾನ್, ಉಪೇಂದ್ರ, ನಾಗಾರ್ಜುನ, ಶ್ರುತಿ ಹಾಸನ್ ಮೊದಲಾದವರು ನಟಿಸಿದ್ದಾರೆ.

ಕಂಪನಿಗೆ ರಜೆ!

ಮಧುರೈನ ಯುಎನ್‌ ಅಕ್ವಾ ಕೇರ್ ಕಂಪನಿಯು ಆ.14ರಂದು ಕೂಲಿ ಸಿನಿಮಾ ವೀಕ್ಷಣೆಗೆಂದು ತನ್ನೆಲ್ಲ ಉದ್ಯೋಗಿಗಳಿಗೆ ರಜೆ ನೀಡಿದೆ. ಜತೆಗೆ ಉಚಿತ ಟಿಕೆಟ್‌ಗಳನ್ನೂ ನೀಡಲು ಮುಂದಾಗಿದೆ. ರಜನಿಕಾಂತ್ ಅವರ 50 ವರ್ಷಗಳ ಸಿನಿಮಾ ಜರ್ನಿಯ ಸಂಭ್ರಮಕ್ಕೆ ಕಂಪನಿ ಈ ರೀತಿ ಮುಂದಾಗಿದೆ.

Gen Z ಉದ್ಯೋಗಿಗಳಂದ್ರೆ ಕಂಪನಿಗಳೇ ಬೆಚ್ಚಿಬೀಳ್ತಿವೆಯಂತೆ! ವಿಡಿಯೋದಲ್ಲಿ ಹುಡುಗಿ ಹೇಳಿದ್ದೇನು?

TAGGED:000 per ticket!Rajini Mania... Coolie Cinema costs Rs 2
Share This Article
Facebook Twitter Copy Link Print
Previous Article Rail one ಇನ್ಮುಂದೆ ರೈಲು ಪ್ರಯಾಣ ವೇಳೆ OTTಯಲ್ಲಿ ಉಚಿತವಾಗಿ ಸಿನಿಮಾ ನೋಡಬಹುದು!
Next Article 15 ತಿಂಗಳ ಪುಟ್ಟ ಕಂದಮ್ಮನಿಗೆ ಕಚ್ಚಿ , ಕ್ರೂರವಾಗಿ ಹಲ್ಲೆ ನಡೆಸಿದ ‘ಡೇ ಕೇರ್’ ಸಿಬ್ಬಂದಿ : ವೈರಲ್ ವಿಡಿಯೋ ನೋಡಿ

Popular Posts

ಚಿನ್ನದ ಬೆಲೆ 13,875 ರೂ; ಬೆಳ್ಳಿ ಮತ್ತಷ್ಟು ಅಗ್ಗ; ಇಂದಿನ ಬೆಲೆ ಎಷ್ಟು?

1 Min Read

ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುತ್ತಿದ್ದ ದಂಪತಿ ಅರೆಸ್ಟ್

1 Min Read

ಪ್ರಭಾಸ್ ಜೊತೆ ನಟಿಸಲಿರುವ ಕಿಚ್ಚ ಸುದೀಪ್? ಸಿನಿಮಾ ಯಾವುದು?

2 Min Read

ತತ್ಕಾಲ್ ಟಿಕೆಟ್ ಕೇವಲ 1 ನಿಮಿಷದಲ್ಲಿ ಕನ್‌ಫರ್ಮ್ ಆಗಬೇಕಾ?! ಈ 4 ಸೀಕ್ರೆಟ್ ಟ್ರಿಕ್ಸ್ ಫಾಲೋ ಮಾಡಿ

3 Min Read

You Might Also Like

ಪ್ರಮುಖ

ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದನ ಸಾವಿನ ಸುತ್ತ ಅನುಮಾನದ ಹುತ್ತ!

2 Min Read
ಪ್ರಮುಖ

ಮಹಿಳೆಯರಿಗೆ ಕೇಂದ್ರ ಸರ್ಕಾರದ ಬಂಫರ್ ಗಿಫ್ಟ್: ಪ್ರತಿ ತಿಂಗಳು ಖಾತೆಗೆ ಸೇರಲಿದೆ ₹7,000 ಸ್ಟೈಫಂಡ್!

2 Min Read
ವರ್ಸೈಲ್ಸ್‌ನಲ್ಲಿ ಇರಾನ್ - ಅಮೆರಿಕ ಒಪ್ಪಂದಕ್ಕೆ ಟ್ರಂಪ್ ಸಹಿ ; ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಮಹತ್ವದ ಹೆಜ್ಜೆ
ಪ್ರಮುಖಮನರಂಜನೆ

ಧರ್ಮಸ್ಥಳ ಬುರುಡೆ ಪ್ರಕರಣ: ತಮ್ಮ ಮೇಲಿನ ಆರೋಪಗಳ ಬಗ್ಗೆ ನಟ ಪ್ರಕಾಶ್ ರಾಜ್ ಹೇಳಿದ್ದೇನು?

2 Min Read
ಪ್ರಮುಖಮನರಂಜನೆ

ಸಿಎಂ ವಿಜಯ್​ ಬೇಟಿಯಾದ ಸಮಂತಾ; ದಳಪತಿ ಬಗ್ಗೆ ಹೇಳಿದ್ದೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?