newsics.com
ಜನರೇಷನ್ ಜೆಡ್ ಉದ್ಯೋಗಿಗಳು ಜನರೇಷನ್ ವೈ ಹಾಗೂ ಎಕ್ಸ್ ರೀತಿ ತಲೆತಗ್ಗಿಸಿಕೊಂಡು ಮ್ಯಾನೇಜರ್ ಹೇಳುವುದನ್ನೆಲ್ಲಾ ಕೇಳಿಕೊಂಡು ಕಿವಿ ಮುಚ್ಚಿಕೊಂಡು ಕೇಳಲು ಸಿದ್ಧರಿಲ್ಲ, ಅವರದ್ದು ಟೈಮ್ ಅಂದ್ರೆ ಟೈಮ್ ಅಂತೆ.
ಕಂಪನಿಗಳಲ್ಲಿ ತಮಗಿರುವ ಹಕ್ಕುಗಳನ್ನು ಸರಿಯಾಗಿ ಬಳಸಿಕೊಳ್ಳಲು ಯತ್ನಿಸುತ್ತಿರುವವರು ಕೂಡ ಇವರೇ. ರಜೆಗಳು, ಆರೋಗ್ಯ ಸವಲತ್ತುಗಳು, ಇತರ ಸೌಲಭ್ಯಗಳನ್ನು ಅವರು ಧೈರ್ಯವಾಗಿಯೇ ಕೇಳುತ್ತಾರೆ. ಹೀಗಾಗಿಯೇ ಇತ್ತೀಚೆಗೆ ಕೆಲ ಸಂಸ್ಥೆಗಳಲ್ಲಿ ಎಚ್‌ಆರ್ ನಿಯಮಗಳೇ ಬದಲಾಗುತ್ತಿವೆ.
ಜನರೇಷನ್ ಜೆಡ್‌ನವರಿಂದ ಕೆಲಸ ಮಾಡಿಸಿಕೊಳ್ಳುವುದು ಕಷ್ಟ ಎಂದು ಸಂಸ್ಥೆಗಳೇ ಹೇಳುತ್ತಿವೆ.
ಜನರೇಷನ್ ಎಕ್ಸ್ ಹಾಗೂ ವೈ ಹಾಗೂ ಅದರ ಹಿಂದಿನ ತಲೆಮಾರುಗಳು ತಲೆತಗ್ಗಿಸಿಕೊಂಡು ಮಾಡುತ್ತಿದ್ದ ಕೆಲಸಗಳು ಈಗ ಜನರೇಷನ್ ಜೆಡ್‌ಗೆ ಟಾಕ್ಸಿಕ್ ಎಂದೆನಿಸುತ್ತಿದೆಯಂತೆ.
ಝೆಡ್ ಜನರೇಷನ್ ಯುವತಿಯೊಬ್ಬಳು ತನ್ನ ಕಚೇರಿಯ ಟಾಕ್ಸಿಕ್ ಕೆಲಸದ ಬಗ್ಗೆ ಮಾತನಾಡಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Shatakshi Pandey ಎಂಬಾಕೆ ತನ್ನ ಕಚೇರಿಯ ಕೆಲಸದ ಸಂಸ್ಕೃತಿ ಬಗ್ಗೆ ಮಾತನಾಡಿದ್ದು, ವೈರಲ್ ಆಗುತ್ತಿದೆ.
ಪ್ರಿಯ ಎಕ್ಸ್ ಹಾಗೂ ವೈ ತಲೆಮಾರಿನ ಜನರೇ, ಕಠಿಣ ಪರಿಶ್ರಮದ ಹೆಸರಿನಲ್ಲಿ ಟಾಕ್ಸಿಕ್ ಕೆಲಸದ ಸಂಸ್ಕೃತಿಯನ್ನು ವೈಭವೀಕರಿಸಬೇಡಿ ಎಂದು ಆಕೆ ಹೇಳಿದ್ದಾಳೆ. ವೀಡಿಯೊದಲ್ಲಿ ಆಕೆ, ‘ತೋ ಮೈ ಅಭಿ ಘರ್ ವಾಪಸ್ ಜಾ ರಹಿ ಹೂನ್ ಆಫೀಸ್ ಸೆ, ಔರ್ ಮೇರಿ ಜೋ ರಿಪೋರ್ಟಿಂಗ್ ಮ್ಯಾನೇಜರ್ ಹೈ, ಉನ್ಹೋನೆ ಮುಝೆ ಬೋಲಾ ಕಿ ‘ಥೋಡಾ ಸಾ ಔರ್ ಕಾಮ್ ಹೈ ಶತಾಕ್ಷಿ, ದೇ ರಹಾ ಹೂನ್ ಕರ್ ದೋ.’ ಮೈನೆ ಉಂಕೋ ಕಹಾ ‘ನಹಿ ಸರ್, ಆಜ್ ಮುಝೆ ಟೈಮ್ ಪರ್ ನಿಕಲ್ನಾ ಹೈ ಎಂದು ಹೇಳಿದ್ದಾಗಿ ಹಿಂದಿಯಲ್ಲಿ ಹೇಳಿಕೊಂಡಿದ್ದಾಳೆ. ನಾನೀಗ ಮನೆಗೆ ಹೋಗುತ್ತಿದ್ದೇನೆ. ನನ್ನ ರಿಪೋರ್ಟಿಂಗ್ ಮ್ಯಾನೇಜರ್, ಶತಾಕ್ಷಿ, ನನಗೆ ಸ್ವಲ್ಪ ಹೆಚ್ಚು ಕೆಲಸವಿದೆ. ನಾನು ಅದನ್ನು ನಿಮಗೆ ನಿಯೋಜಿಸುತ್ತಿದ್ದೇನೆ. ದಯವಿಟ್ಟು ಅದನ್ನು ಮಾಡಿ ಎಂದು ಹೇಳಿದರು. ನಾನು ಆತನಿಗೆ ಇಲ್ಲ ಸರ್, ನಾನು ಇಂದು ಸಮಯಕ್ಕೆ ಸರಿಯಾಗಿ ಹೊರಡಬೇಕು ಎಂದು ಹೇಳಿದ್ದಾಗಿ ಹೇಳಿಕೊಂಡಿದ್ದಾಳೆ.
ನಾನು ಸರಿಯಾದ ಸಮಯಕ್ಕೆ ಹೊರಡಲು ಬಯಸುತ್ತೇನೆ. ಹಾಗಂತ ನಾನು ಬೇಗನೆ ಹೊರಡಲು ಯತ್ನಿಸುತ್ತಿಲ್ಲ. ನಾನು ನನ್ನ ಕೆಲಸದ ಸಮಯವನ್ನು ಪೂರ್ಣಗೊಳಿಸಿದ್ದೇನೆ. ನಾನು ಹೆಚ್ಚುವರಿ ಸಮಯ ಕಚೇರಿಯಲ್ಲಿ ಉಳಿಯಲು ಬಯಸುವುದಿಲ್ಲ. ಏಕೆಂದರೆ ನಾನು ಇಂದು ಉಪವಾಸ ಮಾಡುತ್ತಿದ್ದೇನೆ ಎಂದು ಆಕೆ ಹೇಳಿದ್ದಾಳೆ. ಇದಕ್ಕೆ ಆಕೆಯ ಮ್ಯಾನೇಜರ್ ಪ್ರತಿಕ್ರಿಯಿಸಿದ ರೀತಿಯನ್ನೂ ಆಕೆ ಹಂಚಿಕೊಂಡಿದ್ದಾಳೆ.
ನಿಮಗೇ ಗೊತ್ತು? ನಾನು ನಿನ್ನೆ ರಾತ್ರಿ ರೈಲಿನಲ್ಲಿದ್ದೆ, ಬೆಳಗ್ಗೆ 7 ಗಂಟೆಗೆ ತಲುಪಿದೆ. 7:30ಕ್ಕೆ ಆಫೀಸ್‌ಗೆ ಬಂದೆ, ಮತ್ತು ನಾನು ಈಗ ಸಂಜೆ 6:30 ರವರೆಗೆ ಇಲ್ಲಿದ್ದೇನೆ. ಸರಿ, ನೀವು ಕೆಲಸ ಮಾಡಲು ಸಮಯವನ್ನು ನೀಡಿದ್ದೀರಿ ಸರಿ. ನೀವು ಮನೆಗೆ ಹೋಗಬಹುದು ಎಂದರು.
ಅತಿಯಾದ ಕೆಲಸದಿಂದ ನಿಮ್ಮನ್ನು ಕೊಲ್ಲುವುದು ಹೆಮ್ಮೆಪಡುವ ವಿಷಯವಲ್ಲ. ನಾನು ಇದನ್ನು ಒಪ್ಪುವುದಿಲ್ಲ. ನೀವು ನನ್ನನ್ನು ಕೆಲಸದಿಂದ ವಜಾಗೊಳಿಸಿದರೂ ನನಗೆ ಚಿಂತೆಯಿಲ್ಲ, ಆದರೆ ನಾನು ಅದನ್ನು ಒಪ್ಪುವುದಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.
ಆಕೆಯ ಈ ಮಾತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
https://www.instagram.com/reel/DM7yHkth_DT/?igsh=Y2J6d2FscmdlaHRx
Health tips ಮುಟ್ಟು ನಿಲ್ಲುವ ವೇಳೆ ಕೂದಲು ಉದುರುತ್ತಾ? ಹಾಗಿದ್ರೆ ಜಸ್ಟ್ ಈ ರೀತಿ ಟ್ರೈ ಮಾಡಿ