newsics.com
ಯಲ್ಲಾಪುರ(ಉತ್ತರ ಕನ್ನಡ): ಇಲ್ಲಿನ ಬೇಡ್ತಿ ನದಿಯಲ್ಲಿ ಭಾನುವಾರ ಮೀನು ಹಿಡಿಯಲು ಹೋಗಿದ್ದ ತಾಲೂಕಿನ ಮಾದನಸರದ ಸಹೋದರರಿಬ್ಬರು
ಕವಲಗಿ ಹಳ್ಳದಲ್ಲಿ ಮುಳುಗಿ ನಾಪತ್ತೆ ಯಾಗಿದ್ದಾರೆ.
ಮಾದನಸರದ 8 ಜನರು ಕವಲಗಿ ಹಳ್ಳ ದಾಟಿ ಬೇಡ್ತಿ ನದಿಗೆ ಮೀನು ಹಿಡಿಯಲು ಹೋದಾಗ ಮೀನು ಹಿಡಿದು ವಾಪಸು ಬರುತ್ತಿರುವಾಗ ಕವಲಗಿ ಹಳ್ಳದಲ್ಲಿ ದಿಢೀರ್ ನೀರು ಹೆಚ್ಚಾಗಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಕೂಲಿ ಕೆಲಸ ಗಾರರಾದ ಮಾದನಸರ ಗ್ರಾಮದ ಮಹಮ್ಮದ ರಫೀಖ್ ಇಬ್ರಾಹಿಂ ಸಾಬ್ ಸೈಯದ್ (27 ) ಹಾಗೂ ಅವರ ತಮ್ಮ ಮಹಮ್ಮದ್ ಹನೀಫ್ ಇಬ್ರಾಹಿಂ ಸಾಬ್ ಸೈಯ್ಯದ್ (25 ) ಕವಲಗಿ ಹಳ್ಳದಲ್ಲಿ ಮುಳುಗಿ ಕಾಣೆಯಾಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.
Gen Z ಉದ್ಯೋಗಿಗಳಂದ್ರೆ ಕಂಪನಿಗಳೇ ಬೆಚ್ಚಿಬೀಳ್ತಿವೆಯಂತೆ! ವಿಡಿಯೋದಲ್ಲಿ ಹುಡುಗಿ ಹೇಳಿದ್ದೇನು?