newsics.com
ಕಾಪಿ ರೈಟ್ಸ್ ಉಲ್ಲಂಘನೆ ವಿಚಾರಕ್ಕೆ ಸಂಬಂಧಿಸಿದ್ದಂತೆ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಬಂಧನದ ಭೀತಿ ಶುರುವಾಗಿದೆ. ಹೀಗಾಗಿ ನಟ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಬಂಧನ ಭೀತಿ ಹಿನ್ನೆಲೆ ನಟಿ ರಕ್ಷಿತ್ ಶೆಟ್ಟಿ ಜಾಮೀನಿಗಾಗಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದಾರೆ. ಸಿಆರ್ಪಿಸಿ 438 ಅಡಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸಿಸಿಎಚ್ 61 ಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಿದೆ.
ರಕ್ಷಿತ್ ಶೆಟ್ಟಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ಕೋರಲಾಗಿದೆ ಸರ್ಕಾರದ ಪಿಪಿಯಿಂದ ನ್ಯಾಯಾಲಯ ಕ್ಕೆ ಸಮಯ ಕೋರಲಾಗಿದೆ. ಮನವಿ ಪುರಸ್ಕರಿದ ನ್ಯಾಯಧೀಶರಾದ ಪ್ರಕಾಶ್ ಸಂಗಪ್ಪ ಹೆಚ್ , ಅರ್ಜಿಯ ವಿಚಾರಣೆ ಬುಧವಾರಕ್ಕೆ (ಜುಲೈ 24ಕ್ಕೆ) ಮುಂದೂಡಿದ್ದಾರೆ.
ಎಂಆರ್ ಟಿ ಮ್ಯೂಸಿಕ್ ಪಾಲುದಾರರಾದ ನವೀನ್ ಕುಮಾರ್ ಎಂಬುವರು ನಟ ರಕ್ಷಿತ್ ಶೆಟ್ಟಿ ವಿರುದ್ದ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎರಡು ಹಾಡುಗಳನ್ನು ಅನುಮತಿ ಇಲ್ಲದೇ ನಟ ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾಗಳಲ್ಲಿ ಬಳಸಿಕೊಂಡಿದ್ದಾರೆ ಎಂದು ನವೀನ್ ಕುಮಾರ್ ಆರೋಪಿಸಿದ್ದರು
ಕಾಪಿರೈಟ್ಸ್ ವಿವಾದ ನಟ ರಕ್ಷಿತ್ ಶೆಟ್ಟಿ ಅವರನ್ನು ಕಾಡ್ತಿದೆ. ಈ ಹಿಂದೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರವಿಚಂದ್ರನ್ ಸಿನಿಮಾ ‘ಶಾಂತಿ ಕ್ರಾಂತಿ’ ಹಾಡನ್ನು ಅನುಮತಿ ಪಡೆಯದೆ ಬಳಸಿ ಸಂಕಷ್ಟಕ್ಕೆ ಸಿಲುಕಿದ್ರು. ಇದೀಗ ಬ್ಯಾಚುಲರ್ ಪಾರ್ಟಿ ಸಿನಿಮಾ ವಿಚಾರದಲ್ಲೂ ಕಾಫಿ ರೈಟ್ಸ್ ಕಂಟಕ ಎದುರಾಗಿದೆ.