Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ವಾರ ಭವಿಷ್ಯ > ವಾರ ಭವಿಷ್ಯ 21-07-2024 ರಿಂದ 27-07-2024 ಮೇಷ- ಭೂಮಿಯಿಂದ ಲಾಭ, ಮೀನ- ಮಾನಸಿಕ ಒತ್ತಡ, ನಿಮ್ಮ ಭವಿಷ್ಯದಲ್ಲೇನಿದೆ?
ಪಂಚಾಂಗವಾರ ಭವಿಷ್ಯ

ವಾರ ಭವಿಷ್ಯ 21-07-2024 ರಿಂದ 27-07-2024 ಮೇಷ- ಭೂಮಿಯಿಂದ ಲಾಭ, ಮೀನ- ಮಾನಸಿಕ ಒತ್ತಡ, ನಿಮ್ಮ ಭವಿಷ್ಯದಲ್ಲೇನಿದೆ?

Share
5 Min Read
SHARE

ವಾರ ಭವಿಷ್ಯ
ಜುಲೈ ನಾಲ್ಕನೇ ವಾರ
21-07-2024 ರಿಂದ 27-07-2024 ರವರೆಗೆ.

ಈ ಅವಧಿಯಲ್ಲಿ ಗ್ರಹಗಳು ರಾಶಿಯಿಂದ ರಾಶಿಗೆ ಬದಲಾವಣೆ ಆಗದಿದ್ದರೂ ನಕ್ಷತ್ರದಲ್ಲಿ ಬದಲಾವಣೆ ಅಗಲಿದೆ. ಇದು ರಾಶಿಗಳ‌ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡಲಿದೆ.

ಮೇಷ
ಈ ರಾಶಿಯವರಿಗೆ ಜುಲೈ ನಾಲ್ಕನೇ ವಾರ ಶುಭ. ರಾಶಿಯ ಅಧಿಪತಿ ದ್ವಿತೀಯದಲ್ಲಿ ಇರುವನು. ಕೃಷಿ ಭೂಮಿಯಿಂದ ಲಾಭವಾಗುವುದು. ಮಾತು ಕಠೋರವೆನಿಸುವುದು. ಮನಸ್ಸು ನಿಷ್ಕಲ್ಮಷವಾದ ಕಾರಣ ಅದರಿಂದ‌ ಅಪಾಯವಿರದು. ದ್ವಾದಶದಲ್ಲಿ ರಾಹುವು ನಿಮ್ಮ ಬಲವನ್ನು ಹಿಮ್ಮೆಟ್ಟಿಸಬಹುದು. ಒಮ್ಮೆ ಮುಂದುವರಿಯೋಣ ಅನ್ನಿಸಿದರೆ, ಮತ್ತೊಮ್ಮೆ ಭಯ ಕಾಡುವುದು. ಕಾರ್ತಿಕೇಯನನ್ನು ಅನನ್ಯ ಮನಸ್ಸಿನಿಂದ ಧ್ಯಾನಿಸಿ ಮುಂದುವರಿಯಿರಿ. ರಮ್ಯವಾದ ಸ್ಥಳಕ್ಕೆ ಪ್ರಯಾಣ ಮಾಡುವಿರಿ. ತಂದೆಯ ತಾಯಿಯರಿಗೆ ಸುಖವಿರಲಿದೆ. ತಾಳ್ಮೆಯನ್ನು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕು.

ವೃಷಭ
ಜುಲೈ ನಾಲ್ಕನೇ ವಾರದಲ್ಲಿ ನಿಮಗೆ ಮಿಶ್ರ ಫಲವಿರಲಿದೆ. ಈ ವಾರದಲ್ಲಿ ಅನಿವಾರ್ಯ ಖರ್ಚುಗಳು ಹೆಚ್ಚಾಗುವುದು. ಹಣಕಾಸಿನ ಶಿಸ್ತನ್ನು ಕಾಪಾಡಿಕೊಳ್ಳುವ ಅವಶ್ಯಕತೆ ಇರಲಿದೆ. ನೀವು ಸೃಷ್ಟಿಸಿಕೊಂಡ ವಲಯದಿಂದ ಹೊರಬನ್ನಿ. ನಿಮ್ಮ ಮಾತೇ ನಿಮಗೆ ಮುಳುವಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಮಾತನಾಡಿ. ರಾಶಿಯ ಅಧಿಪತಿಯು ತೃತೀಯದಲ್ಲಿದ್ದಾನೆ. ಸ್ತ್ರೀಯರ ಒಡನಾಟ ಹೆಚ್ಚಾಗುವುದು. ಕುಟುಂಬದಲ್ಲಿ ಹಿರಿಯರ ಜತೆ ಗೌರವದಿಂದ ವರ್ತಿಸಿ. ಈ ವಾರದಲ್ಲಿ ನೀವು ಮಾಡುವ ಕೆಲಸಗಳಲ್ಲಿ ಸಣ್ಣ ಸಣ್ಣ ವಿಘ್ನಗಳು ಬರುವುದು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೇ ಮುನ್ನಡೆಯಿರಿ. ಕುಟುಂಬ ಮತ್ತು ಸಹೋದ್ಯೋಗಿಗಳ ಜತೆಗಿನ ಗಟ್ಟಿಯಾದ ಸಂಬಂಧವು ನಿಮ್ಮ ಭಾವನಾತ್ಮಕ ಮತ್ತು ವೈಯಕ್ತಿಕ ಬೆಳವಣಿಗೆಗೆ ಬಲವಾದ ಅಡಿಪಾಯ ಎಂಬುದು ನೆನಪಿರಲಿ.

ಮಿಥುನ
ಮಿಥುನ ರಾಶಿಯವರಿಗೆ ಈ ತಿಂಗಳ ನಾಲ್ಕನೇ ವಾರ ಅಶುಭ. ಗುರುವು ದ್ವಾದಶದಲ್ಲಿ ನಿಮ್ಮ ಆತ್ಮಬಲವನ್ನು ಕುಂಠಿತ ಮಾಡುವನು. ನಿಮ್ಮ ಮಾನಸಿಕ ತೊಳಲಾಟವನ್ನು ನಿವಾರಿಸಲು ಕಷ್ಟವಾಗುವುದು. ಸ್ಥಳದ ಬದಲಾವಣೆ ಸಾಧ್ಯತೆ ಇದ್ದು ವಿದೇಶ ಪ್ರಯಾಣ ಯೋಗವೂ ಇದೆ. ಈ ಸಮಯದಲ್ಲಿ ನಿಮ್ಮ ಉದ್ಯೋಗ ಸ್ಥಳದಲ್ಲಿ ನಿಮ್ಮ ನಾಯಕತ್ವದ ಕೌಶಲ್ಯವನ್ನು ಕುಜನು ದ್ವಾದಶದಲ್ಲಿ ಇರುವುದರಿಂದ ಪಾಪಪ್ರಜ್ಞೆ ಕಾಡುವುದು. ಪ್ರದರ್ಶಿಸುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ ಸಲಹೆಯನ್ನು ಪಡೆಯಲು ಮರೆಯಬೇಡಿ. ರಾಶಿಯ ಅಧಿಪತಿ ತೃತೀಯದಲ್ಲಿ ಇದ್ದು ಬಂಧುಗಳ ಸಹಕಾರವು ಸಿಗದು. ದೋಷ ನಿವಾರಣೆಗೆ ಲಕ್ಷ್ಮೀನಾರಾಯಣ ಸ್ತೋತ್ರ ಪಠಿಸಿ.

ಕರ್ಕಾಟಕ
ಈ ವಾರ ಬದಲಾವಣೆಯು ಶುಭದಾಯಕವಾಗಿರಲಿದೆ. ಸ್ವರಾಶಿಯಲ್ಲಿ ಸೂರ್ಯ ಹಾಗೂ ಶುಕ್ರರು ಉಪಸ್ಥಿತರಿದ್ದಾರೆ. ಉತ್ತಮ ಮಾರ್ಗದಲ್ಲಿ ನಡೆಯುವುದರಿಂದ ಒಳ್ಳೆಯ ಫಲಗಳು ದೊರೆಯಲಿವೆ. ಸ್ವಯಂ ಅರಿವಿನ ಕಡೆಗೆ ಗಮನ ಹರಿಸುವುದರಿಂದ ನೀವು ತೆಗೆದುಕೊಳ್ಳುವ ಪ್ರತಿ ಹೆಜ್ಜೆಯೂ ನಿಮ್ಮ ಒಟ್ಟಾರೆ ಪ್ರಗತಿಗೂ ಕೊಡುಗೆ ನೀಡುತ್ತದೆ. ದಶಮದ‌ ಕುಜನು ಏಕಾದಶಲ್ಲಿ ಇರುವುದರಿಂದ ಉದ್ಯೋಗದಲ್ಲಿ ಒಳ್ಳೆಯ ವಾರ್ತೆ ಇರಲಿದೆ. ನಿಮ್ಮ ವೃತ್ತಿ ಜೀವನನವನ್ನು ಹೆಚ್ಚು ಸುಲಭ ಮತ್ತು ಪರಿಪೂರ್ಣವಾಗಿಸಲು ಕಠಿಣ ಪರಿಶ್ರಮ ತುಂಬಾ ಅಗತ್ಯ. ಆದಾಗ್ಯೂ, ನಿಮ್ಮ ಆಪ್ತ ವಲಯದಿಂದ ಅಶುಭ ಸುದ್ದಿಗಳನ್ನು ಪಡೆಯುವ ಸಾಧ್ಯತೆ ಇರುವುದರಿಂದ ಮಾನಸಿಕವಾಗಿ ಸಿದ್ಧರಾಗಿರಿ. ಬಂಧುಗಳಿಂದ ಸಹಕಾರವನ್ನು ನೀವು ನಿರೀಕ್ಷಿಸುತ್ತಿರುವಿರಿ.

ಸಿಂಹ
ಈ ವಾರದಲ್ಲಿ ನಿಮ್ಮ ರಾಶಿಯ ಅಧಿಪತಿ ದ್ವಾದಶದಲ್ಲಿದ್ದಾನೆ. ಜತೆಗೆ ಶುಕ್ರನೂ ಇರುವನು. ನಷ್ಟವನ್ನು ಮಾಡಿಕೊಳ್ಳಬಾರದು ಎಂದರೂ ಅದು ಆಗುತ್ತದೆ. ನಿಮ್ಮ ಪರಾಕ್ರಮದ ಬಗ್ಗೆ ಹುಷಾರಾಗಿರಿ. ನಿಮಗೆ ಸಮಯ ಅಷ್ಟು ಉತ್ತಮವಾಗಿಲ್ಲದ ಕಾರಣ, ಸ್ವಲ್ಪ ಎಚ್ಚರಿಕೆಯಿಂದ ಮುಂದುವರಿಯಿರಿ. ತಂದೆಯ ಕಡೆಯಿಂದ ಪ್ರೀತಿ ಕಡಿಮೆಯಾಗುವುದು. ಹಣಕಾಸಿನ ವಿಷಯದಲ್ಲಿ ಈ ವಾರ ಉತ್ತಮವಾಗಿದ್ದು, ಹಣದ ಹರಿವು ಹೆಚ್ಚಾಗಲಿದೆ. ಆದರೂ ಬೇರೆಯವರ ಮೋಡಿ ಮಾತಿಗೆ ಮರುಳಾಗದಿರಿ. ಸರ್ಕಾರದ ಉದ್ಯೋಗವು ಈ ವಾರವೂ ಆಗುವುದು ಕಷ್ಟ. ಆರ್ಥಿಕ ಲಾಭದ ಜತೆಗೆ ಗೌರವವೂ ಹೆಚ್ಚಾಗಲಿದೆ. ಆದಿತ್ಯ ಹೃದಯ ಸ್ತೋತ್ರ ಪಠಿಸಿ.

ಕನ್ಯಾ
ರಾಶಿ ಚಕ್ರದ ಆರನೇ ರಾಶಿಯವರಾದ ನಿಮಗೆ ಈ ತಿಂಗಳು ಶುಭ. ಆದರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಅನಾವಶ್ಯಕವಾಗಿ ಕೋಪದ ಕೈಗೆ ಬುದ್ಧಿ ಕೊಟ್ಟು ನಿಮ್ಮ ಗೌರವಕ್ಕೆ ಧಕ್ಕೆ ತಂದುಕೊಳ್ಳು ಸಂದರ್ಭವೂ ಬರಲಿದೆ. ದೈಹಿಕವಾದ ಕಸರತ್ತು ಮಾಡುವುದು ಬೇಡ. ವೃತ್ತಿಯಲ್ಲಿ ಮನ್ನಣೆ ಗಳಿಸಲು ಶಿಸ್ತುಬದ್ಧ ಕ್ರಮವನ್ನು ಕೈಗೊಳ್ಳಿ. ಹಣಕಾಸು ವಿಷಯಗಳ ನಿರ್ವಹಣೆಯಲ್ಲಿ ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯ. ವಿದೇಶದ ಪ್ರವಾಸಕ್ಕೆ ಪ್ರಯತ್ನಿಸಬಹುದು. ಶತ್ರುಗಳಿಂದ ಯಾವುದೇ ತೊಂದರೆ ಇಲ್ಲದೆ ನಿರುಮ್ಮಳ ಜೀವನ ಮಾಡುವಿರಿ.

ತುಲಾ
ಈ ವಾರ ನಿಮಗೆ ಅಶುಭವೇ ಹೆಚ್ಚಿರುವುದು. ಎಲ್ಲರ ಮಾತನ್ನೂ ನಕಾರಾತ್ಮಕವಾಗಿಯೇ ತೆಗೆದುಕೊಳ್ಳುವಿರಿ. ನೀವು ವೃತ್ತಿ ಜೀವನದಲ್ಲಿ ಬಂದ ಹೊಸ ಅವಕಾಶಗಳನ್ನು ಧೈರ್ಯವಿಲ್ಲದೇ ಸ್ವೀಕರಿಸಲಾರಿರಿ. ಆದರೆ ಕಷ್ಟವಾದರೂ ಸ್ವೀಕರಿಸಿ ಅನುಭವ ಪಡೆಯಿರಿ. ಯಾರ ಮೇಲೂ ಅವಲಂಬನೆಯಾಗುವುದು ಬೇಡ. ನಿಮಗೆ ಅಗತ್ಯವಿರುವಾಗ ವಿರಾಮ ತೆಗೆದುಕೊಳ್ಳಿ. ನಿಮ್ಮ ಎಚ್ಚರಿಕೆಯ ಸ್ವಭಾವವು ಬುದ್ಧಿವಂತ ಆರ್ಥಿಕ ಆಯ್ಕೆಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ. ಸಂಗಾತಿಯ ವಿಚಾರದಲ್ಲಿ ಹೆಚ್ಚು ಸಿಟ್ಟು ಮಾಡಿಕೊಳ್ಳುವಿರಿ. ತಂದೆ ತಾಯಿಯರು ನಿಮಗೆ ಬೆಂಬಲವಾಗಿ ಇರುವರು.‌ ಯಾವುದನ್ನೂ ಎದುರಿಸುವ ಸಾಮರ್ಥ್ಯ ನಿಮ್ಮದಾಗುವುದು. ನವದುರ್ಗೆಯನ್ನು ಆರಾಧಿಸಿ.

ವೃಶ್ಚಿಕ
ರಾಶಿ ಚಕ್ರದ ಎಂಟನೇ ರಾಶಿಯವರಾದ ನಿಮಗೆ ಈ ವಾರ ಶುಭ. ರಾಶಿಯ ಅಧಿಪತಿಯು ಸಪ್ತಮದಲ್ಲಿ ಇರುವನು. ಜತೆಗೆ ಗುರುವೂ ಇರುವುದು ಸಂಗಾತಿಯ ನಡುವಿನ ವೈಮನಸ್ಸು ದೂರಾಗುವುದು. ನಿಮ್ಮ ವೃತ್ತಿಜೀವನದಲ್ಲಿ, ನಿಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಿ. ವಿದೇಶಿ ಸಂಸ್ಥೆಯಲ್ಲಿ ಬಂಡವಾಳ ಹಾಕುವಿರಿ. ಪ್ರೇಮಿಗಳು ಬಹಳ ಎಚ್ಚರಿಕೆಯಿಂದ ಮುಂದುವರಿದರೆ ಗುರಿಯನ್ನು ಮುಟ್ಟಲು ಸಾಧ್ಯ. ಮಕ್ಕಳ ಬಗ್ಗೆ ಚಿಂತೆ ಹೆಚ್ಚುವುದು.‌ ವಿದ್ಯಾಭ್ಯಾಸ ಕಡೆ ಗಮನವನ್ನು ಕೊಡಲಾಗದು. ಬರುವ ಹಣವು ಪೂರ್ಣವಾಗಿ ಬರದು. ನಾಗಾರಾಧನೆಯಿಂದ ಮಾನಸಿಕ ಕ್ಲೇಶಗಳು ದೂರಾಗುತ್ತವೆ.

ಧನು
ಈ ವಾರ ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಮಿಶ್ರ ಫಲವಿದೆ. ಷಷ್ಠದಲ್ಲಿ ಗುರುವಿರುವುದರಿಂದ ಪ್ರಾಜ್ಞರ ದ್ವೇಷ ಕಟ್ಟಿಕೊಳ್ಳುವಿರಿ. ಅವರಿಂದ ಅಪಮಾನವೂ ಆಗುವುದು. ಆದರೆ ಅದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಸಂತೋಷದಿಂದ ಇರಿ. ಎಷ್ಟೇ ಆರಾಮಾಗಿ ಇರಬೇಕು ಎಂದುಕೊಂಡರೂ ಅದು ಆಗದು. ನಿಮ್ಮ ಎಲ್ಲ ಕಾರ್ಯಗಳೂ ದುಃಖದಲ್ಲಿ ಅಂತ್ಯವಾಗುವುದು. ವೃತ್ತಿಜೀವನದಲ್ಲಿ, ನಿಮ್ಮ ಉತ್ಸಾಹವನ್ನು ಕಾಪಾಡಿಕೊಳ್ಳಲು ಗುರಿಯ ಕಡೆ ಗಮನವಿರಲಿ. ನಿಮ್ಮ ಸಾಹಸಮಯ ಮನೋಭಾವವನ್ನು ಎಲ್ಲಿಯೂ ತೋರಿಸುವುದು ಬೇಡ. ಮಕ್ಕಳ ಪ್ರೀತಿಯು ಸಿಗದೇ ಹೋಗಬಹುದು. ಗುರುಚರಿತ್ರೆಯನ್ನು ಪಠಿಸಿ.

ಮಕರ
ಈ ವಾರದಲ್ಲಿ ಮಕರ ರಾಶಿಯವರಿಗೆ ಶುಭ. ವೈವಾಹಿಕ ಜೀವನಕ್ಕೆ ಸಂಗಾತಿಯನ್ನು ಆರಿಸಿಕೊಳ್ಳುವಿರಿ. ಮಕ್ಕಳಿಂದ ನಿಮಗೆ ಸಹಕಾರ ಸಿಗಲಿದೆ. ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಮನಸ್ಸು ಮಾಡುವಿರಿ. ವೃತ್ತಿಯಲ್ಲಿ ಉಂಟಾಗುವ ಅಡೆತಡೆಗಳಿಂದ ವಿಚಲಿತರಾಗುವಿರಿ. ಸಾಲವನ್ನು ಮರುಪಾವತಿ ಮಾಡಿ ನಿಶ್ಚಿಂತೆಯಾಗಲಿದೆ. ಬಂಧುಗಳ ಅಸಹಕಾರದಿಂದ ಬೇಸರವಾಗುವುದು. ಯಾವುದನ್ನೂ ಮನಸ್ಸಿಗೆ ತಾಗಿಸಿಕೊಳ್ಳದೇ ಕೆಲಸವನ್ನು ಮಾಡುವಿರಿ. ಹನುಮಾನ್ ಚಾಲೀಸ್ ಪಠಿಸಿ.

ಕುಂಭ
ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಈ ವಾರವು ಕೆಲವು ಉತ್ಸಾಹದ ಸಂದರ್ಭವು ಒದಗಿ ಬರಲಿದೆ. ಆಗ ನಿಮ್ಮ ಮನಸ್ಸನ್ನು ಸಂಯಮದಿಂದ‌ ಇಟ್ಟುಕೊಳ್ಳಿ. ನೀವು ಜೀವನದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದು ಮುಖ್ಯ. ನಿಮ್ಮ ಹಣಕಾಸುಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ ಹಾಗೂ ದೀರ್ಘಾವಧಿಯ ಸ್ಥಿರತೆಯನ್ನು ಉಳಿಸಿಕೊಳ್ಳುವಿರಿ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಿ. ತಪ್ಪುಗಳನ್ನು ಸರಿಯಾಗಿಸಿಕೊಂಡು ಮುನ್ನಡೆಯಿರಿ. ಮನೆಯಲ್ಲಿ ಉತ್ಸವದ ವಾತಾವರಣ ಇರಲಿದೆ. ಶಿವನಿಗೆ ರುದ್ರಾಭಿಷೇಕ ಮಾಡಿಸಿ.

ಮೀನ
ಜುಲೈ ನಾಲ್ಕನೇ ವಾರ ರಾಶಿ ಚಕ್ರದ ಕೊನೆಯ ವಾರದಲ್ಲಿ ಅಶುಭ ಫಲ. ಮಾನಸಿಕ ಒತ್ತಡದಿಂದ ನಿಮಗೆ ಕಷ್ಟವಾಗಬಹುದು. ನಿಮ್ಮ ಭಾವನೆಗಳ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳಿ. ನಿಮ್ಮ ವೃತ್ತಿ ಜೀವನದಲ್ಲಿ, ನಿಮ್ಮ ಸೃಜನಶೀಲತೆಯನ್ನು ಮುಖ್ಯಸ್ಥರ ಬಳಿ‌ ಹೇಳಿ. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ. ಈ ವಾರ ನೀವು ಭಾವನಾತ್ಮಕ ಮಾತುಗಳಿಗೆ ಬೆಲೆ‌ ನೀಡುವಿರಿ. ನಿಮ್ಮ ಅನನ್ಯ ದೃಷ್ಟಿಕೋನವು ಪ್ರಗತಿಗಳು ಮತ್ತು ಪ್ರಗತಿಗೆ ಕಾರಣವಾಗಬಹುದು. ಈ ವಾರ ತಾಳ್ಮೆ ಮತ್ತು ಶಿಸ್ತು ಆರೋಗ್ಯಕರ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಿ. ಎಲ್ಲರನ್ನೂ ನಂಬುವ ಸ್ಥಿತಿ ನಿರ್ಮಾಣವಾಗುವುದು. ಗುರು ದರ್ಶನ ಮಾಡಿ ಅವರಿಂದ ಆಶೀರ್ವಾದ ಪಡೆಯಿರಿ.

ದಿನ ಭವಿಷ್ಯ 21-07-2024 ವೃಷಭ- ವ್ಯಾಪಾರದಲ್ಲಿ ಲಾಭ, ಮೀನ- ವಸ್ತ್ರಾಭರಣ ಖರೀದಿ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಶುಭೋದಯ… ಕ್ರೋಧಿ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಹುಣ್ಣಿಮೆ, ಭಾನುವಾರ 21-07-2024

TAGGED:Weekly Predictions 21-07-2024 to 27-07-2024 Aries- Profit from earth Pisces- Mental stress what is in your horoscope? newsics
Share This Article
Facebook Twitter Copy Link Print
Previous Article ಮಾಂಸಾಹಾರಿಗಳೇ ಇಲ್ಲದ ಈ ಊರು ಎಲ್ಲಿದೆ?
Next Article ಬಂಧನ ಭೀತಿಯಲ್ಲಿ ರಕ್ಷಿತ್ ಶೆಟ್ಟಿ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?