newsics.com
ಪ್ರಪಂಚದಲ್ಲಿ ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಿರುವ ನಗರವಿದು. ಪ್ರಪಂಚದಾದ್ಯಂತ ಆಹಾರ ವೈವಿಧ್ಯ ಸಾಕಷ್ಟಿದೆ. ಆದರೆ ಸಸ್ಯ ಹಾಗೂ ಮಾಂಸ ಎಲ್ಲಾ ಆಹಾರಗಳಿಗೂ ಮೂಲವಾಗಿದೆ. ವಿಶ್ವದ ಯಾವುದೇ ಮೂಲೆಗೆ ಹೋದ್ರು ಮಾಂಸಾಹಾರಿಗಳು ಇರುವಲ್ಲಿ ಸಸ್ಯಾಹಾರಿಗಳೂ ಇರುತ್ತಾರೆ. ಆದರೆ ಜಗತ್ತಿನಲ್ಲಿ ಈ ಒಂದೇ ಒಂದು ಹಳ್ಳಿಯಲ್ಲಿ ಮಾಂಸ ತಿನ್ನುವವರಿಲ್ಲ. ಭಾರತದಲ್ಲೇ ಇರುವ ಪಟ್ಟಣದ ಕುರಿತ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ..
ಆ ಊರಿನಲ್ಲಿ ಮಾಂಸದ ಅಂಗಡಿಗಳೇ ಇಲ್ಲ. ಮಾಂಸಾಹಾರವನ್ನು ಸಂಪೂರ್ಣವಾಗಿ ನಿಷೇಧಿಸಿದ ಗ್ರಾಮ ಇದಾಗಿದೆ. ಪ್ರಪಂಚದ ಒಂದು ಸ್ಥಳ ಮಾತ್ರ ಇಡೀ ಗ್ರಾಮವನ್ನು ಮಾಂಸ ತಿನ್ನುವುದನ್ನು ನಿಷೇಧಿಸಿದೆ. ಅಂದ ಹಾಗೆ ಈ ಗ್ರಾಮ ಇರುವುದು ನಮ್ಮ ದೇಶದಲ್ಲೇ. ಆ ಗ್ರಾಮದಲ್ಲಿ ಮಾಂಸ ತಿನ್ನುವುದು, ಮಾರಾಟ ಮಾಡುವುದು ಮತ್ತು ಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪಾಲಿತಾನಾ ಗುಜರಾತ್ನ ಭಾವನಗರ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಆ ಊರಿನಲ್ಲಿ ಮಾಂಸ ಮತ್ತು ಕೋಳಿ ಮೊಟ್ಟೆ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ ಆ ಊರಿನಲ್ಲಿ ಮಾಂಸಾಹಾರ ಸೇವನೆಯನ್ನು ನಿಲ್ಲಿಸಲಾಗಿದೆ. ಪಲಿತಾನಾ ಪಟ್ಟಣವು ಮಾಂಸವನ್ನು ಸಂಪೂರ್ಣವಾಗಿ ನಿಷೇಧಿಸಿದ ಮೊದಲ ನಗರವಾಗಿದೆ. ಮೊದಲಿನಿಂದಲೂ ಇದು ಸಂಪೂರ್ಣ ಸಸ್ಯಾಹಾರಿ ಪಟ್ಟಣವಾಗಿರಲಿಲ್ಲ. 2014 ರಲ್ಲಿ, 200 ಜೈನ ಸನ್ಯಾಸಿಗಳು ದೊಡ್ಡ ಪ್ರಮಾಣದ ಉಪವಾಸ ಸತ್ಯಾಗ್ರಹ ನಡೆಸಿದರು. ಈ ನಗರದಿಂದ ಮಾಂಸವನ್ನು ನಿಷೇಧಿಸುವಂತೆ ಅವರು ಕೇಳಿಕೊಂಡರು. ಇದುವರೆಗೆ ಈ ನಗರದಲ್ಲಿ 250 ಮಾಂಸದ ಅಂಗಡಿಗಳಿದ್ದವು.
ಜೈನ ಸಮುದಾಯದ ಭಾವನೆಗಳನ್ನು ಗೌರವಿಸಲು ಸರ್ಕಾರವು ನಗರದಲ್ಲಿ ಮಾಂಸಾಹಾರವನ್ನು ಸಂಪೂರ್ಣ ನಿಷೇಧಿಸಿದೆ. ಮಾಂಸ ಮತ್ತು ಮೊಟ್ಟೆಗಳ ಬಳಕೆಯನ್ನು ಸಹ ನಿಷೇಧಿಸಿದೆ. ಪ್ರಾಣಿಗಳ ಹತ್ಯೆಯನ್ನೂ ಮಾಡಬಾರದು. ಪ್ರಾಣಿಗಳನ್ನು ತಿನ್ನುವುದು, ಮಾರಾಟ ಮಾಡುವುದು ಅಥವಾ ಕೊಲ್ಲಲು ಭಾರೀ ದಂಡವನ್ನು ವಿಧಿಸಲಾಗುತ್ತದೆ.
ಪಾಲಿತಾನ ಪಟ್ಟಣವು ಜೈನರಿಗೆ ಬಹಳ ಪ್ರಸಿದ್ಧವಾಗಿದೆ. ಇದು ಜೈನರ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಬೆಟ್ಟಗಳ ಮೇಲೆ ನೆಲೆಗೊಂಡಿರುವ ಇಲ್ಲಿ ಎಂಟುನೂರಕ್ಕೂ ಹೆಚ್ಚು ಜೈನ ದೇವಾಲಯಗಳಿವೆ. ಈ ದೇವಾಲಯಗಳು ಸುಂದರವಾದ ವಾಸ್ತುಶಿಲ್ಪದ ಶಿಲ್ಪಗಳೊಂದಿಗೆ ಅಮೃತಶಿಲೆಯಿಂದ ಮಾಡಲ್ಪಟ್ಟಿದೆ.