newsics.com
ತುಮಕೂರು : ತುಮಕೂರಿನ ಕೊರಟಗೆರೆಯಲ್ಲಿ ರಸ್ತೆಯ 3 ಕಿಲೋಮೀಟರ್ ಉದ್ದಕ್ಕೂ ಶವದ ತುಂಡುಗಳು ಪತ್ತೆಯಾಗಿದ್ದವು. ಇದೀಗ ಈ ಒಂದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊನೆಗೂ ಪೊಲೀಸರು ಶವದ ಜಾಡು ಹಿಡಿದಿದ್ದಾರೆ.
ಮಹಿಳೆಯನ್ನು ಕೊಲೆ ಮಾಡಿ ದೇಹವನ್ನು ತುಂಡುಗಳಾಗಿ ಕತ್ತರಿಸಿ ಅಂಗಾಂಗಗಳನ್ನು ತಾಲ್ಲೂಕಿನ ಹೊಳವನಹಳ್ಳಿ, ಕೋಳಾಲ ಹಾಗೂ ಚನ್ನರಾಯನದುರ್ಗಾ ಹೋಬಳಿ ವ್ಯಾಪ್ತಿಯ ವಿವಿಧೆಡೆ ಎಸೆಯಲಾಗಿದೆ. ಮಹಿಳೆ ದೇಹದ ಭಾಗಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿ ತಾಲ್ಲೂಕಿನ ಒಟ್ಟು ಐದು ಕಡೆ ಎಸೆಯಲಾಗಿದೆ. ಚಿಂಪುಗಾನಹಳ್ಳಿ ಬಳಿ ಗುರುವಾರ ನಾಯಿಯೊಂದು ಪ್ಲಾಸ್ಟಿಕ್ ಕವರ್ ಎಳೆದಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಶ್ವಾನದಳ ಕರೆಸಿ ಪರಿಶೀಲಿಸಿದ್ದಾರೆ.
ಕೊಲೆಯಾದ ಮಹಿಳೆಯ ಹೆಸರು, ವಿವರ ಲಭ್ಯವಾಗಿಲ್ಲ. ಯಾವ ಕಾರಣಕ್ಕೆ ಕೊಲೆಯಾಗಿದೆ ಎಂಬ ಮಾಹಿತಿಯೂ ತಿಳಿದು ಬಂದಿಲ್ಲ. ರುಂಡ ಸೇರಿದಂತೆ ದೇಹದ ಇನ್ನೂ ಕೆಲವು ಭಾಗಗಳು ದೊರೆತಿಲ್ಲ. ಮೃತದೇಹದ ಉಳಿದ ಭಾಗಗಳಿಗೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ರಾತ್ರೋರಾತ್ರಿ ವಿಷ್ಣುವರ್ಧನ್ ಸಮಾಧಿ ನೆಲಸಮ; ಹಬ್ಬದ ದಿನವೇ ಅಭಿಮಾನಿಗಳ ಕಣ್ಣೀರು