newsics.com
ಸಾಮಾನ್ಯವಾಗಿ ಮಗುವಿಗೆ ಹಲ್ಲು ಹುಟ್ಟಲು ಪ್ರಾರಂಭವಾಗುವುದು ಆರು ತಿಂಗಳಿಂದ 12 ತಿಂಗಳ ನಡುವೆ . ಆದಾಗ್ಯೂ, ಹಲ್ಲುಗಳು ಸಂಪೂರ್ಣವಾಗಿ ಬರಲು ಹಲವು ವರ್ಷಗಳು ಬೇಕಾಗುತ್ತದೆ. ಆದರೆ ಇಲ್ಲೊಂದು ಮಗು 32 ಹಲ್ಲುಗಳೊಂದಿಗೆ ಜನಿಸಿದೆ. ಅಮೆರಿಕದ ಮಹಿಳೆಯೊಬ್ಬರು ಈ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವಾಸಿಸುತ್ತಿರುವ ನಿಕಾ ದಿವಾ ಎಂಬ ಮಹಿಳೆ ತನ್ನ ನವಜಾತ ಶಿಶುವಿನ ಅಪರೂಪದ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಟಿಕ್‌ಟಾಕ್‌ನ ಸಹಾಯವನ್ನು ತೆಗೆದುಕೊಂಡಿದ್ದಾರೆ. ಮಗು ಹುಟ್ಟುವಾಗಲೇ 32 ಹಲ್ಲುಗಳನ್ನು ಹೊಂದಿದ್ದು, ಈ ಕುರಿತು ಮಗುವಿನ ತಾಯಿ ಟಿಕ್‌ಟಾಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ncbi.nlm.nih.gov ಪ್ರಕಾರ, ಈ ರೀತಿ ಹುಟ್ಟಲು ಹಲವು ಕಾರಣಗಳಿರಬಹುದು. ಆನುವಂಶಿಕ ಅಂಶಗಳು, ಕೆಲವು ವೈದ್ಯಕೀಯ ಪರಿಸ್ಥಿತಿಗಳು ಅಥವಾ ಗರ್ಭಾವಸ್ಥೆಯಲ್ಲಿ ತಾಯಿಯ ಆರೋಗ್ಯದ ಸ್ಥಿತಿಯು ಸಂಭವನೀಯ ಕಾರಣಗಳೆಂದು ಹೇಳಲಾಗುತ್ತದೆ. ಈ ಸ್ಥಿತಿಯು ಸಾಮಾನ್ಯವಾಗಿ ಮಗುವಿಗೆ ಯಾವುದೇ ಗಂಭೀರ ತೊಂದರೆಯನ್ನು ಉಂಟುಮಾಡುವುದಿಲ್ಲವಾದರೂ, ತಾಯಿ ಹಾಲುಣಿಸುವಾಗ ತೊಂದರೆ ಎದುರಿಸಬಹುದು ಎಂದು ಹೇಳಲಾಗುತ್ತದೆ