newsics.com
ಇತ್ತೀಚೆಗೆ ಕನ್ನಡದ ವಿಷಯವಾಗಿ ವಿವಾದ ಸೃಷ್ಟಿಸಿಕೊಂಡಿದ್ದ ನಟ ಕಮಲ್ ಹಾಸನ್ ಇದೀಗ ಮತ್ತೊಂದು ವಿವಾದ ಮೂಲಕ ಸುದ್ದಿಯಾಗಿದ್ದಾರೆ.
ಅಗರಂ ಫೌಂಡೇಷನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ವಾಧಿಕಾರ ಮತ್ತು ಸನಾತನ ಸರಪಳಿಗಳನ್ನು ಮುರಿಯಬಲ್ಲ ಏಕೈಕ ಅಸ್ತ್ರ ಶಿಕ್ಷಣ ಎಂದು ಹೇಳಿ ವಿವಾದ ಸೃಷ್ಟಿಸಿಕೊಂಡಿದ್ದಾರೆ.
ನಿಮ್ಮ ಕೈಯಲ್ಲಿ ಶಿಕ್ಷಣದ ಹೊರತಾಗಿ ಯಾವುದನ್ನೂ ತೆಗೆದುಕೊಳ್ಳಬೇಡಿ. ಶಿಕ್ಷಣವಿಲ್ಲದೆ ನಮಗೆ ಗೆಲುವಿಲ್ಲ. ಮೂರ್ಖರು ನಿಮ್ಮನ್ನು ಮೂರ್ಖರನ್ನಾಗಿ ಮಾಡಬಹುದು. ಶಿಕ್ಷಣ ಮಾತ್ರ ಅದನ್ನು ಸೋಲಿಸಲು ಸಾಧ್ಯ. ಅದಕ್ಕೆ ನಾವು ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕು ಎಂದಿದ್ದರು.
ಮಹಾರಾಷ್ಟ್ರದ ಮಾಜಿ ಸಚಿವ ಜಿತೇಂದ್ರ ಅವಾದ್ ಜಾತಿ ದೌರ್ಜನ್ಯಗಳಿಗೆ ಸನಾತನ ಧರ್ಮವೇ ಕಾರಣ ಎಂದು ಹೇಳಿ, ಅದಕ್ಕೆ ಮತ್ತು ಹಿಂದೂ ಧರ್ಮಕ್ಕೆ ವ್ಯತ್ಯಾಸ ತೋರಿಸಲು ಪ್ರಯತ್ನಿಸಿದರು. ಸನಾತನ ಧರ್ಮ ಎಂಬ ಯಾವುದೇ ಧರ್ಮ ಎಂದಿಗೂ ಇರಲಿಲ್ಲ. ನಾವು ಹಿಂದೂ ಧರ್ಮದ ಅನುಯಾಯಿಗಳು” ಹೇಳಿದ್ದಾರೆ. ಇವರ ಹೇಳಿಕೆ ಬೆನ್ನಲ್ಲೇ ಕಮಲ್ ಹಾಸನ್ ಈ ರೀತಿ ಹೇಳಿಕೆ ನೀಡಿದ್ದಾರೆ.
https://www.newsics.com/2025/08/04/famous-tv-actresss-son-trolled-on-social-media-for-his-skin-tone/