newsics.com
ರಾಜಸ್ಥಾನ: ರಸ್ತೆಯಲ್ಲೇ ಕರುವಿನ ಮೇಲೆ ಹಠಾತ್ ಎಗರಿ, ಅದನ್ನು ಕೊಂದು ತಿನ್ನಲು ಯತ್ನಿಸಿದ ಚಿರತೆಯೊಂದನ್ನು ತಾಯಿ ಹಸು ಬೆದರಿಸಿ ಕಾಡಿಗೆ ಅಟ್ಟಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ರಾಜಸ್ಥಾನದಲ್ಲಿ ಸಫಾರಿಯಲ್ಲಿದ್ದ ಜನರ ಗುಂಪೊಂದು ಈ ವಿಡಿಯೋವನ್ನು ಸೆರೆ ಹಿಡಿದಿದೆ. ಕರುವಿನ ಕುತ್ತಿಗೆಗೆ ಚಿರತೆ ಬಾಯಿ ಹಾಕಿದ್ದಾಗ ತಾಯಿ ಆಕಳು ಬಂದು ಅದನ್ನು ರಕ್ಷಿಸಿದೆ. ಬಾಲಿ, ಪಾಲಿ ಎಂದು ಈ ವಿಡಿಯೋಗೆ ಟೈಟಲ್ ನೀಡಲಾಗಿದೆ.
ತಾಯಿ ಹಸುವಿನ ಧೈರ್ಯಕ್ಕೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದು, ಈ ವಿಡಿಯೋಗೆ ಸುಮಾರು 125,000 ಗೂ ಹೆಚ್ಚು ವೀಕ್ಷಣೆ ಹಾಗೂ ಲೈಕ್ ಬಂದಿವೆ.
Saudi Arabia Executions: ಒಂದೇ ದಿನ 8 ಜನರಿಗೆ ಸೌದಿ ಅರೇಬಿಯಾದಲ್ಲಿ ಮರಣದಂಡನೆ; ಕಾರಣವೇನು?