newsics.com
ಬದಲಾದ ಜೀವನ ಶೈಲಿಯಿಂದ ಜನರಲ್ಲಿ ಆರೋಗ್ಯದ ಸಮಸ್ಯೆಗಳು ಸಾಮಾನ್ಯವಾಗಿದೆ. ಹೀಗಾಗಿ ಆರೋಗ್ಯವನ್ನು ಉತ್ತಮವಾಗಿಸಲು ಯೋಗ ಅತಿ ಮುಖ್ಯ. ಇದೀಗ ವೃದ್ಧರೊಬ್ಬರು ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಯೋಗ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯಾವುದೇ ಯೋಗ ಮ್ಯಾಟ್ಗಳನ್ನು ಬಳಸದೇ, ಖಾಲಿ ಮೈಯಲ್ಲಿ ಮಳೆಯಲ್ಲೇ ಶೀರ್ಷಾಸನ ಮಾಡಿದ್ದಾರೆ. ಈ ವಿಡಿಯೋಗೆ ಒಂದು ಶೀರ್ಷಿಕೆಯನ್ನು ಕೂಡ ನೀಡಲಾಗಿದೆ.
ರೈಲಿಗಾಗಿ ಕಾಯುತ್ತಾ ಕುಳಿತಿದ್ದಾಗ, ಮಳೆ ಮಧ್ಯೆ ಪ್ಲಾಟ್ಫಾರ್ಮ್ನಲ್ಲಿ ವೃದ್ಧರೊಬ್ಬರು ಯೋಗ ಮಾಡುತ್ತಿರುವುದನ್ನು ನೋಡಿದೆ. ಮಳೆಯಲ್ಲಿ ಯೋಗ ಮಾಡುತ್ತಿದ್ದ ವ್ಯಕ್ತಿ ಬೇರೆ ಬೇರೆ ರೀತಿಯ ಯೋಗಾಸಗಳನ್ನು ಮಾಡುತ್ತಿದ್ದ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು @PeepalGhost ಎಂಬ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.