newsics.com
ಕೇರಳ: ಕಿರುಕುಳದಿಂದ ಬೇಸತ್ತು ಗರ್ಭಿಣಿಯೊಬ್ಬರು ತನ್ನ ಪತಿಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ವೆಲ್ಲಂಗುಲರ್ನಲ್ಲಿ ನಡೆದಿದೆ.
ಫಸೀಲಾ ಎಂಬ ಮಹಿಳೆ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮುನ್ನ ಅಮ್ಮಾ ನಾನು ಸಾಯ್ತೀನಿ, ಇಲ್ಲದಿದ್ದರೆ ಅವರೇ ನನ್ನನ್ನು ಸಾಯಿಸುತ್ತಾರೆ ಎಂದು ತಾಯಿಗೆ ಮೆಸೇಜ್ ಕಳುಹಿಸಿದ್ದಾರೆ.
ಇರಿಂಜಲಕುಡ ಪೊಲೀಸರು ಆಕೆಯ ಪತಿ ನೌಫಲ್ ಮತ್ತು ಅತ್ತೆ ರಮ್ಲಾ ಅವರನ್ನು ಬಂಧಿಸಿದ್ದು, ಇಬ್ಬರನ್ನೂ ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಿತ್ಯವೂ ಅತ್ತೆ ಮನೆಯಲ್ಲಿ ಮಹಿಳೆ ನರಕ ಅನುಭವಿಸುತ್ತಿದ್ದರು. ತಾಯಿಗೆ ಕಳುಹಿಸಿರುವ ಸಂದೇಶದಲ್ಲಿ ಅತ್ತೆ ನಿತ್ಯವೂ ತನ್ನ ಮೇಲೆ ಹಲ್ಲೆ ನಡೆಸುತ್ತಾರೆ ಎಂದು ಬರೆಸಿದ್ದರು.
ತನ್ನ ತಾಯಿಗೆ ಕಳುಹಿಸಿದ ಸಂದೇಶಗಳಲ್ಲಿ, ಫಸೀಲಾ ತಾನು ಎರಡನೇ ಬಾರಿಗೆ ಗರ್ಭಿಣಿಯಾಗಿದ್ದೇನೆ ಮತ್ತು ತನ್ನ ಪತಿ ತನ್ನ ಹೊಟ್ಟೆಗೆ ಹಲವು ಬಾರಿ ಒದ್ದಿದ್ದಾನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ನನ್ನ ಒಂದು ಕೈ ಮುರಿದಿದ್ದಾನೆ. ಅಮ್ಮಾ ನಾನು ಸಾಯ್ತೀನಿ, ಇಲ್ಲದಿದ್ದರೆ ಅವರೇ ನನ್ನನ್ನು ಸಾಯಿಸುತ್ತಾರೆ ಎಂದು ತಾಯಿಗೆ ಮೆಸೇಜ್ ಕಳುಹಿಸಿದ್ದಾರೆ.
https://www.newsics.com/2025/07/31/a-friend-danced-at-a-funeral-as-per-his-friends-last-wish/