newsics.com
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ವಯಸ್ಸು ಹಾಗೂ ಆರೋಗ್ಯದ ಕುರಿತು ಹಲವು ಟೀಕೆಗಳು, ಮೀಮ್ಸ್ ಹಾಗೂ ಟ್ರೋಲ್‌ಗಳು ಹರಿದಾಡುವುದು ಸಾಮಾನ್ಯ ಎಂಬಂತಾಗಿದೆ.
ಬೈಡೆನ್‌ಗೆ ಸರಿಯಾಗಿ ಕಣ್ಣು ಕಾಣುತ್ತಿಲ್ಲ, ನೆನಪಿನ ಶಕ್ತಿ ಕುಂದಿದೆ ಎನ್ನುವ ಆರೋಪಗಳು ಪದೇ ಪದೇ ಕೇಳಿಬರುತ್ತಿವಾಗಲೇ, ಹಳೇ ವಿಡಿಯೋವೊಂದು ಬೈಡೆನ್ ಪಜೀತಿ ಸಿಲುಕಿದ ಘಟನೆ ವಿವರಿಸಿದೆ.
ಕಾರ್ಯಕ್ರಮದ ವೇದಿಕೆಯಲ್ಲಿ ಜೋ ಬೈಡೆನ್ ತನ್ನ ಪತ್ನಿ ಜಿಲ್ ಬೈಡೆನ್ ಎಂದು ಮುತ್ತಿಕ್ಕಲು ಮುಂದಾಗಿದ್ದಾರೆ. ವಿಶೇಷ ಅಂದರೆ ಬೈಡೆನ್ ಎದರು ನಿಂತಿದ್ದ ಮಹಿಳೆ ತುಟಿಗೆ ತುಟಿ ತಾಗಿಸಲು ಸಜ್ಜಾಗಿದ್ದಾರೆ. ವೇದಿಕೆಯಲ್ಲೇ ಇನ್ನೇನು ಅನಾಹುತ ನಡೆದುಹೋಗಲಿದೆ ಎನ್ನುವಷ್ಟರಲ್ಲೇ ದೂರದಲ್ಲಿ ಕುಳಿತಿದ್ದ ಬೈಡನ್ ಪತ್ನಿ ಜಿಲ್ ಬೈಡನ್ ಓಡೋಡಿ ಬಂದು ಮುತ್ತು ತಪ್ಪಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಅಮೆರಿಕದ ಶ್ವೇತಭವನದಲ್ಲಿ ಆಯೋಜಿಸಿದ್ದ ಮಹಿಳಾ ಇತಿಹಾಸ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಜೋ ಬೈಡೆನ್ ಹಾಗೂ ಇತರ ಕೆಲ ಗಣ್ಯರು ನಿಂತಿದ್ದಾರೆ. ಇತ್ತ ಜೋ ಬೈಡೆನ್ ಪಕ್ಕದಲ್ಲೇ ಮಹಿಳೆಯೊಬ್ಬರು ನಿಂತಿದ್ದರು. ಇದು ಮಹಿಳಾ ಪ್ರಧಾನ ಕಾರ್ಯಕ್ರಮವಾದ ಕಾರಣ ಹಲವು ಕ್ಷೇತ್ರಗಳ ಮಹಿಳಾ ಸಾಧಕಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಕಾರ್ಯಕ್ರಮದ ವೇದಿಕೆಯಲ್ಲಿ ಜೋ ಬೈಡೆನ್ ಹಾಗೂ ಇತರ ಕೆಲ ಗಣ್ಯರು ನಿಂತಿದ್ದಾರೆ. ಇತ್ತ ಜೋ ಬೈಡೆನ್ ಪಕ್ಕದಲ್ಲೇ ಮಹಿಳೆಯೊಬ್ಬರು ನಿಂತಿದ್ದರು. ಇದು ಮಹಿಳಾ ಪ್ರಧಾನ ಕಾರ್ಯಕ್ರಮವಾದ ಕಾರಣ ಹಲವು ಕ್ಷೇತ್ರಗಳ ಮಹಿಳಾ ಸಾಧಕಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜೋ ಬೈಡೆನ್ ಪಕ್ಕದಲ್ಲಿದ್ದ ಮಹಿಳೆ ಕಡು ನೀಲಿ ಬಣ್ಣದ ಸ್ಯೂಟ್ ಧರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ ಬೈಡನ್ ಆಕಾಶ ನೀಲಿ ಬಣ್ಣದ ಸ್ಯೂಟ್ ಧರಿಸಿದ್ದರು. ಇನ್ನು ಕೂದಲಿನ ಬಣ್ಣ ಹೆಚ್ಚು ಕಡಿಮೆ ಒಂದೇ. ಎತ್ತರ ಕೂಡ ಒಂದೇ. ನೀಲಿ ಸ್ಯೂಟ್ ಧರಿಸಿದ್ದ ಈ ಮಹಿಳೆ ತನ್ನ ಪತ್ನಿ ಎಂದು ಜೋ ಬೈಡೆನ್ ಮುತ್ತಿಕ್ಕಲು ಮುಂದಾಗಿದ್ದಾರೆ. ಮಹಿಳೆಗೆ ಜೋ ಬೈಡೆನ್ ಪ್ರಯತ್ನ ಅರ್ಥವಾಗಿಲ್ಲ. ಹೀಗಾಗಿ ಬೈಡೆನ್ ಮುಖ ನೋಡಿ ನಿಂತುಕೊಂಡಿದ್ದಾರೆ.
ಬೈಡೆನ್ ಮುತ್ತಿಕ್ಕಲು ತಲೆ ಬಾಗಿಸುತ್ತಿದ್ದಂತೆ ದೂರದಲ್ಲಿ ಕುಳಿತಿದ್ದ ಜಿಲ್ ಬೈಡೆನ್ ಓಡೋಡಿ ಬಂದಿದ್ದಾರೆ. ಬೈಡೆನ್ ಬಳಿ ಆಗಮಿಸಿದ ಜಿಲ್, ಕೈ ಹಿಡಿದು ನಾನು ಇಲ್ಲಿದ್ದೇನೆ ಎಂದಿದ್ದಾರೆ. ಈ ವೇಳೆ ಬೈಡೆನ್ ಎಚ್ಚೆತ್ತುಕೊಂಡಿದ್ದಾರೆ.
ಬೈಡೆನ್ ಒಮ್ಮೆ ನಕ್ಕು ಹಿಂದೆ ಸರಿದಿದ್ದಾರೆ. ಇತ್ತ ಮಹಿಳೆ ಕೂಡ ವೇದಿಕೆಯಿಂದ ತೆರಳಿದ್ದಾರೆ. ಜಿಲ್ ಬೈಡನ್ ಆಗಮನದಿಂದ ಇರಿಸು ಮುರಿಸು ತಪ್ಪಿದೆ. ಈ ವಿಡಿಯೋ ಮತ್ತೆ ಹರಿದಾಡುತ್ತಿದೆ.
🔥🚨DEVELOPING: Joe Biden was spotted about to kiss another woman he appeared to have thought was his wife until Jill Biden stopped him. pic.twitter.com/4SJXSpfIvc
— Dom Lucre | Breaker of Narratives (@dom_lucre) July 18, 2024
ಮೈಕ್ರೋಸಾಫ್ಟ್ ಸೇವೆಯಲ್ಲಿ ತಾಂತ್ರಿಕ ಸಮಸ್ಯೆ: ಜಗತ್ತಿನ ಹಲವೆಡೆ ಕಲ್ಲೋಲ ಕಾರಣವೇನು..?
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒತ್ತಾಯಿಸಿ ಪ್ರತಿಭಟನೆ, Phonepe ವಿರುದ್ಧ ಅಭಿಯಾನ