newsics.com
ತಿರುಮಲ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು,ಮಾರ್ಗದಲ್ಲಿ ಪ್ರಯಾಣಿಸುತ್ತಿದ ವಾಹನ ಸವಾರ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದೆ. ವಿಷಯ ತಿಳಿದು ಭಕ್ತರು ಓಡಿದ್ದಾರೆ.
ತಿರುಪತಿ-ತಿರುಮಲ ಮೆಟ್ಟಿಲುಗಳ ಮೇಲೆ ಚಿರತೆ ಕಾಣಿಸಿಕೊಂಡಿದ್ದು, ಈ ಸುದ್ದಿ ಕೇಳಿ ಜನರು ಭಯಭೀತರಾಗಿದ್ದಾರೆ. ಅಲಿಪಿರಿ ನಡಿಗೆ ಮಾರ್ಗದಲ್ಲಿ ಚಿರತೆ ಓಡಾಡುತ್ತಿರೋ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಶುಕ್ರವಾರ ರಾತ್ರಿ, ಕೆಲವು ವಾಹನ ಸವಾರರು ಅಲಿಪಿರಿ-ಶ್ರೀ ವೆಂಕಟೇಶ್ವರ ದೇಗುಲದ ಮಾರ್ಗದಲ್ಲಿ ಚಿರತೆಯನ್ನ ಕಂಡಿದ್ದಾರೆ. ಈ ಚಿತರೆ ಬೈಕ್ಗಳಲ್ಲಿ ಹೋಗುತ್ತಿದ್ದವರ ಮೇಲೆ ದಾಳಿ ಮಾಡಲು ಪ್ರಯತ್ನಿದೆ.
ಟಿಟಿಡಿ ಸಿಬ್ಬಂದಿಗೆ ಈ ಬಗ್ಗೆ ತಕ್ಷಣ ಮಾಹಿತಿ ನೀಡಲಾಗಿದೆ. ಈ ಮಾಹಿತಿ ಬಂದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ತಲುಪಿ ಭದ್ರತಾ ಕ್ರಮಗಳನ್ನು ಕೈಗೊಂಡ್ರು. ಸೈರನ್ ಮೃಗಾಲಯ ಮಾರ್ಗದಲ್ಲಿ ಪ್ರಯಾಣಿಸುವ ಭಕ್ತರು ಜಾಗರೂಕರಾಗಿರುವಂತೆ ಸೂಚಿಸಲಾಯಿತು.