newsics.com
ಒಂದು ವರ್ಷದ ಮಗು ಕಚ್ಚಿದ್ದಕ್ಕೆ ಸ್ಥಳದಲ್ಲೇ ಹಾವು ಸಾವನ್ನಪ್ಪಿರುವ ಘಟನೆ ಬಿಹಾರದ ಬೆಟ್ಟಿಯಾ ಎಂಬ ಹಳ್ಳಿಯಲ್ಲಿ ನಡೆದಿದೆ.
ಮನೆಯ ಬಳಿ ಮಗು ಆಟವಾಡುತ್ತಿದ್ದಾಗ, ಹಾವು ಬಂದಿದೆ. ಹಾವು ಅನ್ನು ಮಗು ಗೋವಿಂದ, ತನ್ನ ಕೈ ಸುತ್ತ ಸುರಳಿಯಾಕಾರದಲ್ಲಿ ಸುತ್ತಿಕೊಂಡಿದೆ. ಬಳಿಕ ಹಾವಿಗೆ ತನ್ನ ಸಣ್ಣ ಹಲ್ಲುಗಳಿಂದ ಮಗು ಕಚ್ಚಿದೆ. ಇದರಿಂದಾಗಿ ಹಾವು ಸ್ಥಳದಲ್ಲೇ ಜೀವ ಬಿಟ್ಟಿದೆ. ಇದಾದ ಮೇಲೆ ಮಗು ಕೂಡ ಅಸ್ವಸ್ಥವಾಗಿದೆ. ತಕ್ಷಣವೇ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಹಾವು ಮಗುವಿಗೆ ತುಂಬಾ ಹತ್ತಿರದಲ್ಲಿತ್ತು. ಬಹುಶಃ ಮಗುವನ್ನು ನೋಡಿ ಹಾವು ಹೆದರಿಕೊಂಡಿರಬಹುದು. ಬಳಿಕ ಮಗು ತನ್ನ ಕೈಯಿಂದ ಹಾವು ಅನ್ನು ಹಿಡಿದುಕೊಂಡಿದೆ. ತನ್ನ ಸಣ್ಣ ಹಲ್ಲುಗಳಿಂದ ಹಾವಿಗೆ ಕಚ್ಚಿದೆ. ಹಾವು ಸ್ಥಳದಲ್ಲೇ ಜೀವ ಬಿಟ್ಟಿದೆ ಎಂದು ಸ್ಥಳೀಯರು ಹೇಳಿದ್ದಾರೆ
ಈಗ ಮಗುವಿನ ಆರೋಗ್ಯ ಸ್ಥಿರವಾಗಿದೆ, ವೈದ್ಯರು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ಹೇಳಿದ್ದಾರೆ.