newsics.com
ಉತ್ತರ ಭಾರತದ ಯುವತಿ ಬೆಂಗಳೂರಿನ ಜನರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾಳೆ. ಬೆಂಗಳೂರಿಗರ ತಲೆಯಲ್ಲಿ ಬುದ್ದಿ ಇಲ್ಲ ಎಂದು ಒಡಿಶಾ ಮೂಲದ ಯುವತಿ ನೇಹಾ ಬಿಸ್ವಾಲ್ ದುರಹಂಕಾರದ ಮಾತಗಳನ್ನು ಆಡಿದ್ದಾಳೆ.
ಒಡಿಶಾ ಮೂಲದ ನೇಹಾ ಬಿಸ್ವಾಲ್ ಎಂಬ ಯುವತಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಪಿಜಿಯಲ್ಲಿದ್ದಾಳೆ. ಮಳೆ ಬರುತ್ತಿದ್ದ ವೇಳೆ ಚಾಲಕನೊಬ್ಬ ಕಾರನ್ನು ಜೋರಾಗಿ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಆಗ ರಸ್ತೆ ಮೇಲಿದ್ದ ನೀರು ಆಕೆಯ ಮೈಮೇಲೆ ಹಾರಿದೆ. ಇದಕ್ಕೆ ಸಿಟ್ಟಿಗೆದ್ದ ಆಕೆ, ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ದಿ ಇಲ್ಲ, ಜೋರು ಮಳೆ ಬರ್ತಿದ್ರೂ, ವಾಹನವನ್ನ ಜೋರಾಗಿ ಓಡಿಸ್ತಾರೆ. ಬೆಂಗಳೂರಲ್ಲಿರೋರು ಅನಕ್ಷರಸ್ಥರೆಂದು ಎಂದು ಕೋಪದಲ್ಲಿ ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.
ಮುಂದುವರೆದು ನೇಹಾ ಬಿಸ್ವಾಲ್ ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ದಿ ಇಲ್ಲ. ಜೋರು ಮಳೆ ಬರುತ್ತಿದ್ದರೂ, ವಾಹನವನ್ನು ಜೋರಾಗಿ ಓಡಿಸುತ್ತಾರೆ. ಬೆಂಗಳೂರಿಗರು ಅನಕ್ಷರಸ್ಥರು. ಚೂ*** ಥೂ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.
https://www.instagram.com/reel/DMb4OEuT_hy/?igsh=MW01ZDBhMjUwa2F3bg==
https://www.instagram.com/reel/DMcT2w0TMLo/?igsh=MWo1M3JnMGVvMWxtMQ==