newsics.com
ನೆಲಮಂಗಲ: ಗನ್ ಹಿಡಿದು ಚಿನ್ನದ ಅಂಗಡಿಗೆ ಬಂದ ದರೋಡೆಕೋರರು ಮಾಲೀಕನಿಗೆ ಹೆದರಿ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಮಾಗಡಿರಸ್ತೆಯ ಮಾಚೋಹಳ್ಳಿ ಗೇಟ್ ಬಳಿ ಇರುವ ಭೈರವೇಶ್ವರ ಕಾಂಪ್ಲೆಕ್ಸ್ನಲ್ಲಿರುವ ರಾಮ್ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ನಡೆದಿದೆ.
ರಾಮ್ ಜ್ಯುವೆಲ್ಲರಿ ಶಾಪ್ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಜ್ಯುವೆಲ್ಲರಿ ಕ್ಲೋಸ್ ಮಾಡುವಾಗ ಬಂದಿದ್ದ ಗ್ಯಾಂಗ್, ಗನ್ ಹಿಡಿದು ಶಾಪ್ಗೆ ಎಂಟ್ರಿಯಾಗಿದ್ದು ಮೂವರು. ಟೇಬಲ್ ಮೇಲಿದ್ದ ಚಿನ್ನ ಬಾಚಿಕೊಂಡು ಪರಾರಿಯಾದ್ರು. ಈ ವೇಳೆ ಕೂಗಾಡಿದ್ದ ಸಿಬ್ಬಂದಿಯನ್ನ ತಳ್ಳಿ ಚಿನ್ನಾಭರಣ ದೋಚಿದ್ದಾರೆ.
ಕೂಗಾಟ ಕೇಳಿ ಅಕ್ಕ ಪಕ್ಕದ ಅಂಗಡಿಯವರು ಓಡಿ ಬಂದ್ರು ಅಷ್ಟೋತ್ತಿಗೆ ಈ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆ ಗ್ಯಾಂಗ್ ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
8 ಗಂಟೆ 57 ನಿಮಿಷ 40 ಸೆಕೆಂಡ್ಗೆ ಎಂಟ್ರಿ ಕೊಟ್ಟ ಈ ಗ್ಯಾಂಗ್ 8 ಗಂಟೆ 57 ನಿಮಿಷ 58 ಸೆಕೆಂಡ್ ಗೆ ಎಸ್ಕೇಪ್ ಆಗಿದೆ. ಕೇವಲ 18 ಸೆಕೆಂಡ್ ನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ. 18 ಸೆಕೆಂಡ್ ನಲ್ಲಿ 18 ಲಕ್ಷ ಮೌಲ್ಯದ 184 ಗ್ರಾಂ ಚಿನ್ನಾಭರಣ ಚಿನ್ನ ಕಳುವಾಗಿದೆ ಎನ್ನಲಾಗ್ತಿದೆ