newsics.com
ಬ್ರೆಸಿಯಾ: ಹೆದ್ದಾರಿಯ ಮಧ್ಯದಲ್ಲೇ ಲಘು ವಿಮಾನವೊಂದು ಪತನಗೊಂಡಿದ್ದು, ಅಪಘಾತಕ್ಕೀಡಾದ ಸಣ್ಣ ವಿಮಾನದಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ಇಟಲಿಯ ಬ್ರೆಸಿಯಾದಲ್ಲಿ ಬುಧವಾರ ನಡೆದಿದೆ.
ಈ ದುರಂತದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಕೆಲ ಕಾರುಗಳೂ ಬೆಂಕಿಗೆ ಆಹುತಿಯಾಗಿವೆ.
ಭೀಕರ ಅಪಘಾತದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಅಗಿದೆ. ಇದರಲ್ಲಿ ಸಣ್ಣ ಏರ್ ಕ್ರಾಫ್ಟ್ ಜನನಿಬಿಡ ರಸ್ತೆಯಲ್ಲಿ ಲಂಬವಾಗಿ ಡೈವಿಂಗ್ ಮಾಡಿ ಬಾಂಬ್ನಂತೆ ಸ್ಫೋಟಗೊಂಡಿದೆ.
ಉತ್ತರ ಇಟಲಿಯ ಬ್ರೆಸಿಯಾ ಬಳಿಯ ಎ 21 ಕಾರ್ಡಮಲೆ-ಓಸ್ಪಿಟೇಲ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ರಸ್ತೆಯಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ರಿಪಬ್ಲಿಕ್ ವರ್ಲ್ಡ್ ಪ್ರಕಾರ, ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ವಕೀಲ ಸೆರ್ಗಿಯೋ ರಾವಾಗ್ಲಿಯಾ (75) ಮತ್ತು ಅವರ ಪತ್ನಿ ಅನ್ನಾ ಮಾರಿಯಾ ಡಿ ಸ್ಟೆಫಾನೊ (55) ಎಂದು ಗುರುತಿಸಲಾಗಿದೆ. ವಿಮಾನ ಅಪಘಾತದ ನಂತರ ಎರಡು ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಚಾಲಕರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹೆದ್ದಾರಿಯಲ್ಲಿ ಎರಡೂ ದಿಕ್ಕುಗಳಲ್ಲಿ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.
https://twitter.com/i/status/1948012354052243829
pregnant in space ಬಾಹ್ಯಾಕಾಶದಲ್ಲಿ ಗರ್ಭ ಧರಿಸಿದರೆ ಏನಾಗತ್ತೆ? ನಾಸಾ ಹೇಳಿದ್ದೇನು?