newsics.com
ನವದೆಹಲಿ: ಇನ್ಮು ಮುಂದೆ ನೀವು ಆನ್ಲೈನ್ನಲ್ಲೇ ಮದ್ಯವನ್ನೂ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಶೀಘ್ರದಲ್ಲೇ ಇಂತಹದೊಂದು ವ್ಯವಸ್ಥೆ ಜಾರಿಯಾಗಲಿದೆ.
ಕರ್ನಾಟಕ, ದೆಹಲಿ, ಹರ್ಯಾಣ, ಪಂಜಾಬ್, ತಮಿಳುನಾಡು, ಗೋವಾ ಹಾಗೂ ಕೇರಳದಲ್ಲಿ ಇದನ್ನು ಮೊದಲು ಜಾರಿಗೆ ತರಲಾಗುತ್ತಿದೆ.
ಸ್ವಿಗ್ಗಿ, ಬಿಗ್ಬಾಸ್ಕೆಟ್, ಜೊಮ್ಯಾಟೊ ಮೂಲಕ ಮದ್ಯ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.
2020ರಲ್ಲೇ ಈ ರೀತಿಯ ಪ್ರಸ್ತಾವನೆ ಇತ್ತು, ಮೊದಲ ಬಾರಿಗೆ ಜಾರ್ಖಂಡ್ನಲ್ಲಿ ಪ್ರಾರಂಭಿಸಲಾಗಿತ್ತು, ಇತರೆ ರಾಜ್ಯಗಳ ಜತೆಯೂ ಮಾತುಕತೆ ನಡೆದಿತ್ತು. ಲಿಕ್ಕರ್ ಆರ್ಡರ್ ಮಾಡಲು ಗ್ರಾಹಕರು ವಯಸ್ಸಿನ ದಾಖಲೆ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.
ವಾಸ್ತವವಾಗಿ, ಈ ರಾಜ್ಯಗಳು ಪ್ರಾಯೋಗಿಕ ಕಾರ್ಯಕ್ರಮದ ಅಡಿಯಲ್ಲಿ ಸ್ವಿಗ್ಗಿ, ಜೊಮ್ಯಾಟೊ ಹಾಗೂ ಬಿಗ್ ಬಾಸ್ಕೆಟ್‌ನಂತಹ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ಮೂಲಕ ಹೋಂ ಡೆಲಿವರಿ ಮಾಡಲು ಆಲೋಚಿಸಿವೆ.
ಎಕನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ, ಈ ರಾಜ್ಯಗಳಲ್ಲಿ ಶೀಘ್ರವೇ ಮದ್ಯ ಪ್ರಿಯರಿಗೆ ಈ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಆನ್ಲೈನ್ನಲ್ಲಿ ಮದ್ಯ ಕೊಳ್ಳುವವರು ತಮ್ಮ ವಯಸ್ಸನ್ನು ನಮೂದಿಸಲೇಬೇಕು. ಹೊಸ ನಿಯಮಗಳಡಿಯಲ್ಲಿ ದೇಶೀಯ ಮತ್ತು ವಿದೇಶಿ ಮದ್ಯವನ್ನು ಹೋಂ ಡೆಲಿವರಿ ಮಾಡಲು ಸಾಧ್ಯವಾಗುತ್ತದೆ.
ಇದಕ್ಕಾಗಿ ಮೊಬೈಲ್ ಅಪ್ಲಿಕೇಷನ್ ಅಥವಾ ಆನ್ಲೈನ್ ವೆಬ್ ಪೋರ್ಟಲ್ ತೆರೆಯಲಾಗುತ್ತದೆ. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಮದ್ಯವನ್ನು ಮನೆಗೆ ತಲುಪಿಸಲು ಅನುಮತಿ ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಅಸ್ಸಾಂನಲ್ಲಿ ಕೋವಿಡ್ -19 ಲಾಕ್‌ಡೌನ್‌ಗಳ ಸಮಯದಲ್ಲಿ ಮದ್ಯ ವಿತರಣೆಯನ್ನು ತಾತ್ಕಾಲಿಕವಾಗಿ ಅನುಮತಿಸಲಾಗಿತ್ತು.
ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು: ವಿವಾದಕ್ಕೆಡೆಯಾದ ಸರ್ಕಾರದ ನಿರ್ಧಾರ